Connect with us

Bengaluru City

ಹೊಸವರ್ಷ, ಕ್ರಿಸ್‍ಮಸ್ ವೇಳೆ ಖಾಸಗಿ ಬಸ್ಸುಗಳಿಂದ ಲೂಟಿ – ದರ ಕೇಳಿದ್ರೆ ಶಾಕ್ ಆಗ್ತೀರಿ

Published

on

ಬೆಂಗಳೂರು: ಶುಕ್ರವಾರದಿಂದ ಕ್ರಿಸ್‍ಮಸ್ ರಜೆ ಶುರುವಾಗುತ್ತೆ, ಮಕ್ಕಳಿಗೆ ಸಾಲು ಸಾಲು ರಜೆ ಮುಂದಿನ ವಾರದವರೆಗೆ ಆರಮಾಗಿ ಇರೋಣ ಅಂತ ಎಲ್ಲರೂ ಪ್ರವಾಸಕ್ಕೆ ಪ್ಲಾನ್ ಮಾಡೋದು ಸಹಜ. ಆದರೆ ಪ್ರವಾಸಕ್ಕಾಗಿ ಖಾಸಗಿ ಟ್ರಾವೆಲ್ಸ್ ಕಡೆ ಹೋದರೆ ಪ್ರಯಾಣ ದರ ಕೇಳಿ ದಂಗಾಗೋದು ಗ್ಯಾರಂಟಿಯಾಗಿದೆ.

ಖಾಸಗಿ ಬಸ್ ಮಾಲೀಕರು ಸಾಲುಸಾಲು ರಜೆ ಇರುವ ಕಾರಣ ಬಸ್ ದರವನ್ನು ದುಪ್ಪಟ್ಟು ಮಾಡಿ ದರೋಡೆಗೆ ಇಳಿದಿದ್ದಾರೆ. ಬೆಂಗಳೂರಿನ ಎರಡು ಫೇಮಸ್ ತಾಣಗಳಲ್ಲಿ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮಾಡಿದ್ದು, ಈ ವೇಳೆ ಟ್ರಾವೆಲ್ ಏಜೆಂಟ್ ದರ ಏರಿಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ಬೆಂಗಳೂರು ಟು ಅಲೆಪ್ಪಿ
ಪ್ರತಿನಿಧಿ: ಅಲೆಪ್ಪಿ (ಕೇರಳ) ಎಷ್ಟಿದೆ ಅಂತ ನೋಡಿ ಸರ್?
ಟ್ರಾವೆಲ್ಸ್ ಏಜೆಂಟ್: ಎಷ್ಟಿದೆ ನೋಡಿ. ಸಿಕ್ಕಾಪಟ್ಟೆ ಇದೆ.
ಪ್ರತಿನಿಧಿ: ಏನ್ ಸರ್? ಕೊಚ್ಚಿನ್ ಟಿಕೆಟ್ 2 ಸಾವಿರಕ್ಕೆ ಸಿಗುತ್ತಲ್ಲ?
ಟ್ರಾವೆಲ್ಸ್ ಏಜೆಂಟ್: ಕೊಚ್ಚಿನ್ ಈಗ 2 ಸಾವಿರಕ್ಕೆ ಸಿಗೋದಿಲ್ಲ ಬಿಡಿ.
ಟ್ರಾವೆಲ್ಸ್ ಏಜೆಂಟ್: 3,200, 3,500., 3,000 ಅಲೆಪ್ಪಿಗೆ!
ಪ್ರತಿನಿಧಿ: ಹಳೆದಾ?
ಟ್ರಾವೆಲ್ಸ್ ಏಜೆಂಟ್: ಹಳೆಯದಲ್ಲ. 22ನೇ ತಾರೀಖಿಗೆ.
ಪ್ರತಿನಿಧಿ: ಏನ್ ಸರ್ ಸ್ಪೆಷಲ್?
ಟ್ರಾವೆಲ್ಸ್ ಏಜೆಂಟ್: ಸ್ಪೆಷಲ್ ಅಂದರೆ ಕ್ರಿಸ್‍ಮಸ್ ಮತ್ತು ನ್ಯೂ ಹಿಯರ್ ಸೀಸನ್ ಇದೆ. ಎಲ್ಲರೂ ಕ್ರಿಶ್ಚಿಯನ್ ಹಬ್ಬ ಮಾಡುತ್ತಾರೆ. ಮುಸ್ಲಿಮರು ಮತ್ತು ಹಿಂದುಗಳು ಪ್ಯಾಕೇಜ್‍ಗಳಿಗೆ ಹೋಗುತ್ತಾರೆ. ಆ ಉದ್ದೇಶದಿಂದ ಇಷ್ಟೊಂದು ದರ ಹೆಚ್ಚಾಗಿದೆ. ಈ ರೇಟ್ ಇರುತ್ತೆ. ಬೇರೆ ದಿನಗಳಲ್ಲಿ 900 ರೂ. ಯಿಂದ 1000 ರೂಪಾಯಿ ಇರುತ್ತದೆ.

ಬೆಂಗಳೂರು ಟು ಗೋವಾ
ಪ್ರತಿನಿಧಿ: ಗೋವಾಗೆ 4 ಟಿಕೆಟ್ ಬೇಕಾಗಿತ್ತು ಸರ್..
ಟ್ರಾವೆಲ್ಸ್ ಏಜೆಂಟ್– ಯಾವಾಗ ಸರ್?
ಪ್ರತಿನಿಧಿ: 22ಕ್ಕೆ ಸರ್
ಟ್ರಾವಲ್ಸ್ ಏಜೆಂಟ್– ಶನಿವಾರ ಅಲ್ವಾ?
ಪ್ರತಿನಿಧಿ: ಹೌದು ಸರ್.
ಟ್ರಾವೆಲ್ಸ್ ಏಜೆಂಟ್– ಎಸಿ. ನಾನ್ ಎಸಿ?
ಪ್ರತಿನಿಧಿ: ಸ್ಲೀಪರ್
ಟ್ರಾವಲ್ಸ್ ಏಜೆಂಟ್– 2550
ಪ್ರತಿನಿಧಿ: ಅಷ್ಟೊಂದಾ ಸರ್?
ಟ್ರಾವಲ್ಸ್ ಏಜೆಂಟ್– ನೀವೇ ನೋಡಿ.
ಪ್ರತಿನಿಧಿ: ಹೋದ ವಾರ 900 ಸಾವಿರ ಇತ್ತು.
ಟ್ರಾವಲ್ಸ್– ಅದು ರೆಗ್ಯೂಲರ್ ಆವತ್ತು ರೇಟ್ ಕಡಿಮೆ. ಈಗ ರಜೆ ಇದೆ 22, 23, 24, 25 ರಜೆ ಕ್ರಿಸ್‍ಮಸ್ ಹಾಲಿಡೆ.
ರಿಪೋರ್ಟ್‍ರ್– 1500 ಒಳಗಡೆ ಯಾವುದಾದರೂ ಇದ್ದರೆ ನೊಡಿ ಸರ್
ಟ್ರಾವಲ್ಸ್– 18 ಅಲ್ವ ಇವತ್ತು ನೋಡಿ ನಾನ್ ಎಸಿ ಸ್ಲೀಪರ್ 500
ರಿಪೋರ್ಟ್‍ರ್– 4 ಜನಕ್ಕೆ 1500 ಒಳಗಡೆ ನಮಗೆ ಬೇಕು ಸರ್.
ಟ್ರಾವಲ್ಸ್– 22 ಬೆಂಗಳೂರು ಟು ಗೋವ ನೀವೆ ನೋಡಿ ಸರ್ ಯಾವುದು ಕಡಿಮೆ ಇದೆ. ನೋಡಿ ಸರ್ ಇದೊಂದು ಯಾವುದು ಶ್ಯಾಮಲಾ ಟ್ರಾವಲ್ಸ್ ಸಿಟ್ಟಿಂಗ್ ಎಸಿ  ಎಷ್ಟಿದೆ?
ರಿಪೋರ್ಟ್‍ರ್– 2149
ಟ್ರಾವಲ್ಸ್– ನಾನ್ ಎಷ್ಟು ಹೇಳಿದೆ ಸುಗಮ ವಿಆರ್‍ಎಲ್ ಎಷ್ಟಿದೆ ನೋಡಿ ಇದೊಂದೆ ಕಡಿಮೆ ಇರೋದು ಇಲ್ಲಿ. ಇನ್ನು ಉಳಿದವೆಲ್ಲ ಪುಲ್ ಜಾಸ್ತಿ.
ರಿಪೋರ್ಟ್‍ರ್– ಎಲ್ಲಿವರೆಗೂ ಈ ರೇಟ್ ಇರುತ್ತೆ ಸರ್
ಟ್ರಾವಲ್ಸ್– 24 ರವರೆಗೆ ಈ ರೇಟ್ ಇರುತ್ತೆ

ಪ್ರಸ್ತುತ ಖಾಸಗಿ ಬಸ್ ದರಗಳು:
ಬೆಂಗಳೂರಿನಿಂದ ಅಲೆಪ್ಟಿ ಹೋಗಲು ಇಂದಿನ ಬೆಲೆ 1000 ರೂ. ಇದೆ. ಆದರೆ ದಿನಾಂಕ 22ಕ್ಕೆ 2500 ರೂ. ಆಗಿದೆ. ಇನ್ನೂ ಗೋವಾಗೆ ಹೋಗಲು 800 ರೂ. ಪ್ರಯಾಣ ದರ ಇದ್ದುದ್ದು, ಕ್ರಿಸ್‍ಮಸ್ ಗೆ 2999 ರೂ. ಅಧಿಕವಾಗಿದೆ. ಬೆಂಗಳೂರಿನಿಂದ ಮುನ್ನಾರ್ ಗೆ ಇಂದಿನ ಪ್ರಯಾಣದ 900 ರೂ. ಆದರೆ ಇದೇ ಸ್ಥಳಕ್ಕೆ  22ರಂದು ಹೋಗಲು 1800 ರೂ. ಹೆಚ್ಚಾಗಿದೆ. ಊಟಿಗೆ ಹೋಗಲು 500 ಇದ್ದ ದರ. ಕ್ರಿಸ್‍ಮಸ್ ರಜೆಯ ಕಾರಣ 1800 ಆಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು 1500 ರೂ. ಅಧಿಕವಾಗಿದೆ. ಇಂದು ಹೋಗುವುದಾದರೆ ಕೇವಲ 500 ರೂ.ಗೆ ಹೋಗಬಹುದು. ಇಂದು ಬೆಂಗಳೂರಿಂದ ಮರುಡೇಶ್ವರಕ್ಕೆ  ಹೋಗಲು 600 ರೂ. ಬಸ್ ದರವಾಗುತ್ತದೆ. ಆದರೆ 22 ಕ್ಕೆ 1200 ರೂ. ಹೆಚ್ಚಳವಾಗಿದೆ.

ಸರ್ಕಾರ ಪ್ರತಿ ಬಾರಿ ಕಡಿವಾಣ ಹಾಕುತ್ತೀವಿ ಅಂದರ ಖಾಸಗಿ ಬಸ್‍ ಗಳ ಲಾಭಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳೇ ಮಣಿದಿದ್ದಾರೆ. ಎಷ್ಟೇ ಕಡಿವಾಣ ಹಾಕಿದರೂ ಕೇವಲ ಸುತ್ತೋಲೆಯಲ್ಲಿ ಇರುತ್ತೆ ವಿನಃ ಜಾರಿಗೆ ಬಂದ ಉದಾಹರಣೆನೆ ಇಲ್ಲ. ಇನ್ನಾದರೂ ಸರ್ಕಾರ ಈ ಹಗಲು ದರೋಡೆಯನ್ನ ತಡೆಯುತ್ತಾ ಅಥವಾ ಖಾಸಗಿ ಲಾಭಿಗೆ ಮಣಿಯುತ್ತಾ ಅನ್ನೋದನ್ನ ನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *