ಬೆಂಗಳೂರು: ಸಿಲಿಕಾನ್ ಸಿಟಿಯ ಕೆಲ ರಸ್ತೆ, ಏರಿಯಾಗಳು ಮಹಿಳೆಯರಿಗೆ ಸೇಫ್ ಅಲ್ಲ ಎಂದು ಪೊಲೀಸರು ಗುರುತಿಸಿದ್ದಾರೆ. ಹಾಗೆಯೇ ನಗರದ ಕೆಲ ರಸ್ತೆಗಳು ಪುರುಷರಿಗೆ ಸೇಫ್ ಅಲ್ಲ. ಈ ಕುರಿತು ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಬಯಲಾಗಿದೆ. ರಾತ್ರಿ ಇಲ್ಲಿ ಪುರುಷರು ಒಬ್ಬೊಬ್ಬರೇ ಓಡಾಡುವಂತಿಲ್ಲ. ಒಂದು ವೇಳೆ ಏಕಾಂಗಿ ನೀವು ಸಿಕ್ಕರೇ ನಿಮ್ಮ ಜೇಬಲ್ಲಿರುವ ಹಣ ಖಾಲಿಯಾಗೋದು ಮಾತ್ರ ನಿಜ.
Advertisement
ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ರಸ್ತೆಯ ಪಕ್ಕದಲ್ಲಿ ಕತ್ತಲೆಯಾಗುತ್ತಿದ್ದಂತೆ ಭಯಾನಕ ಜಗತ್ತು ತೆಗೆದುಕೊಳ್ಳುತ್ತದೆ. ಈ ರಸ್ತೆಯಲ್ಲಿ ಮಹಿಳೆಯರು ಯಾವುದೇ ಭಯವಿಲ್ಲದೇ ಧೈರ್ಯವಾಗಿ ಓಡಾಡಬಹುದು. ರಾತ್ರಿ ವೇಳೆ ಪುರುಷರಿಗೆ ಈ ರಸ್ತೆಯಲ್ಲಿ ಓಡಾಡಲು ಧೈರ್ಯ ಇರಬೇಕು. ಕತ್ತಲು ಆವರಿಸಲು ಶುರುವಾಗ್ತಿದ್ದಂತೆ ಬೆಕ್ಕಿನ ನಡೆಗೆಯ ಸುಂದರಿಯರು ಚಿತ್ರ ವಿಚಿತ್ರ ಡ್ರೆಸ್ ಗಳಲ್ಲಿ ಪ್ರತ್ಯಕ್ಷರಾಗುತ್ತಾರೆ.
Advertisement
Advertisement
ಪ್ರತಿನಿತ್ಯ ಕೆಂಪಾಪುರ ಜಂಕ್ಷನ್ ನಿಂದ ಹೆಬ್ಬಾಳ ಔಟರ್ ರಿಂಗ್ ರೋಡ್ ಗೆ ಬರಬೇಕಾದ್ರೇ ಇದೇ ದಾರಿಯಲ್ಲಿ ಬರಬೇಕು. ಮಾಡೆಲ್ ರೂಪದಲ್ಲಿರುವರು ಪಾದಚಾರಿಗಳ ಮೇಲೆ ಮುಗಿಬಿದ್ದು ಬಲವಂತವಾಗಿ ಹಣ ಕಿತ್ತುಕೊಳ್ಳುತ್ತಾರೆ. ಒಂದು ವೇಳೆ ದುಡ್ಡು ಕೊಡದಿದ್ರೆ ಬಟ್ಟೆ ಕಳಚಿ ಮರ್ಯಾದೆ ಹರಾಜಿಗೆ ಹಾಕಲು ಮುಂದಾಗುತ್ತಾರೆ. ಈ ರಸ್ತೆಯಲ್ಲಿ ಓಡಾಡಲು ಜನ ಮುಜುಗರ ಪಡುವಂತಾಗಿದೆ.
Advertisement
ದುಡ್ಡು ಕೊಡಲ್ಲ ಅಂತಾ ಅಪ್ಪಿ ತಪ್ಪಿ ಹೇಳಿದರೆ ಇವರು ಹಲ್ಲೆಗೂ ಮುಂದಾಗುತ್ತಾರೆ. ದಂಧೆಗೆ ಒಪ್ಪದೆ ಹೋದರೆ ಬಲವಂತವಾಗಿ ಅವರ ಬಳಿ ಇರೋ ಮೊಬೈಲ್ ಗಳನ್ನ ಕಸಿದುಕೊಂಡು ಹೊಡೆದು ತಮ್ಮ ತಾಕತ್ತಿನ ಪ್ರದರ್ಶನ ಮಾಡುತ್ತಾರೆ. ಇನ್ನು ಕೆಲ ಮಂಗಳಮುಖಿಯರ ಜೊತೆ ಮಂಗಳಮುಖಿಯರಂತೆ ವೇಷ ಧರಿಸಿಕೊಂಡು ಬಂದು ದರೋಡೆ ಮಾಡೋದು ಕೂಡ ಹೆಚ್ಚಾಗಿದೆ. ಆದಷ್ಟು ಬೇಗ ಇವರ ದಂಧೆಗೆ ಪೊಲೀಸರು ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದೇ ರಸ್ತೆಯಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಯನ್ನು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಕೆಲವು ವಿಷಯಗಳನ್ನು ತಿಳಿಸಿದರು.
ಪ್ರತಿನಿಧಿ:ನಿಮಗೆ ಏನೂ ಪ್ರಾಬ್ಲಂ ಮಾಡೋಲ್ವಾ? ಎಷ್ಟು ಜನ ಬರ್ತಾರೇ ಡೈಲಿ.
ಸೆಕ್ಯುರಿಟಿ: ತುಂಬಾ ಜನ ಬರ್ತಾರೆ.
ಪ್ರತಿನಿಧಿ: ನಿಮಗೆ ಕಷ್ಟ ಆಗೋದಿಲ್ವಾ ಕೆಲಸ ಮಾಡೋಕೆ?
ಸೆಕ್ಯುರಿಟಿ: ಹಾ ಆಗುತ್ತೆ. ಏನ್ ಮಾಡೋದು.
ಸೆಕ್ಯುರಿಟಿ: ಅಲ್ಲಿ ನಿಂತು ಬರೋ ಜನರನ್ನ ಒಳಕ್ಕೆ ಕರೆದುಕೊಂಡು ಹೋಗ್ತಾರೆ, ಅಲ್ಲಿ ಏನೋನೋ ಮಾಡ್ತಾರೆ
ಪ್ರತಿನಿಧಿ: ನಿಮಗೆ ಇಲ್ಲಿವರೆಗೆ ಯಾವುದೇ ಸಮಸ್ಯೆ ಮಾಡಿಲ್ವಾ?
ಸೆಕ್ಯುರಿಟಿ: ಇಲ್ಲ..
ಪ್ರತಿನಿಧಿ: ತೊಂದ್ರೇ ಅದ ಜನ ನಿಮ್ಮ ಬಳಿ ಬಂದು ಹೇಳಿದ್ದಾರಾ?
ಸೆಕ್ಯುರಿಟಿ: ನಾವು ಇಲ್ಲಿ ಇರ್ತಿವಿ, ನಮ್ಮ ಬಳಿ ಬಂದು ಯಾರು ಏನು ಹೇಳಿಲ್ಲ..
ಪ್ರತಿನಿಧಿ: ನಿಮಗೆ ಕೆಲಸ ಮಾಡಲು ಭಯ ಆಗೋದಿಲ್ವಾ?
ಸೆಕ್ಯುರಿಟಿ: ಆಗುತ್ತೆ, ನಾವು ಸಂಜೆ ಮೇಲೆ ಆ ಕಡೆ ಹೋಗೊದಿಲ್ಲ..
ಪ್ರತಿನಿಧಿ: ಪೊಲೀಸ್ರು ಬರೋದಿಲ್ವಾ
ಸೆಕ್ಯುರಿಟಿ: ಹಾ ಬರ್ತಾರೆ ಆಗಾಗ, ಪೊಲೀಸ್ರು ಬಂದಾಗ ಓಡೋಗ್ತಾರೆ.
ಸಮಾಜದಲ್ಲಿ ಗೌರವಯುತವಾಗಿ ಬದುಕು ಕಟ್ಟಿಕೊಂಡ ಮಂಗಳಮುಖಿಯರು ಅದೆಷ್ಟೋ ಜನ ಇದ್ದಾರೆ. ಇಂತವರು ಅದ್ಯಾಕೆ ಇವ್ರಿಗೆ ಸ್ಫೂರ್ತಿಯಾಗಲ್ಲ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಇನ್ನು ದೌರ್ಭಾಗ್ಯ ಅಂದ್ರೆ ಇಲ್ಲಿ ಮಂಗಳಮುಖಿಯರ ವೇಷದಲ್ಲಿ ದರೋಡೆ ಮಾಡೋದು ಕೂಡ ಹೆಚ್ಚಾಗಿದೆ.