-ಜಾಣ ಕುರುಡು ಮೆರೆಯುತ್ತಿದ್ಯಾ ಸರ್ಕಾರ, ಖಾಕಿ?
ಬೆಂಗಳೂರು: ಇ ಸಿಗರೇಟ್ ಚಟಕ್ಕೆ ಬಲಿಯಾಗಿದ್ದು ಅದೆಷ್ಟೋ ಯುವ ಮಂದಿ. ಇ ಸಿಗರೇಟ್ ವ್ಯಸನಿಯಿಂದ ಯುವ ಜನತೆಯನ್ನ ರಕ್ಷಿಸಲು ಕೇಂದ್ರ ಸರ್ಕಾರ ಇ ಸಿಗರೇಟ್ ಬ್ಯಾನ್ ಮಾಡಿದೆ. ಆದರೆ ಬ್ಯಾನ್ ಆದರೂ ಕೂಡ ಬೆಂಗಳೂರಿನ ಪ್ರತಿಷ್ಠಿತ ರಸ್ತೆ ಮಾರ್ಕೆಟ್ ಗಳಲ್ಲಿ ಎಗ್ಗಿಲ್ಲದೇ ಸಿಗುತ್ತಿದೆ. ಅಕ್ರಮವಾಗಿ ಮಾರಾಟವಾಗ್ತಿರೋದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಇತ್ತೀಚಿನ ಯುವ ಜನತೆ ಮಾದಕ ದ್ರವ್ಯಗಳ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಗುಟ್ಕಾ, ಗಾಂಜಾ, ಹುಕ್ಕ ಅಂತ ತಪ್ಪು ಹಾದಿ ಹಿಡಿಯುತ್ತಿದ್ದಾರೆ. ಅದರ ಜೊತೆಗೆ ನಿಷೇಧಿತ ನಿಕೋಟಿನ್ ಅಂಶ ಇರುವ ಹೊಸ ವ್ಯಸನಿ ಇ-ಸಿಗರೇಟ್ ಕೂಡ ಸೇರಿದೆ. 400 ಬಗೆಯ ನಾನಾ ಬ್ರ್ಯಾಂಡ್‍ಗಳಲ್ಲಿ ಇ-ಸಿಗರೇಟ್ 150ಕ್ಕೂ ಪರಿಮಳಗಳಲ್ಲಿ ಸಿಗುತ್ತದೆ. ನಿಕೋಟಿನ್ ಅಂಶ ಇರುವ ಇದು ಆರೋಗ್ಯಕ್ಕೆ ಹಾನಿಕಾರಕ. ಆದರೂ ಬೆಂಗಳೂರಿನ ಪ್ರತಿಷ್ಠಿತ ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಮತ್ತು ಮೆಜೆಸ್ಟಿಕ್‍ನ ನ್ಯಾಷನಲ್ ಮಾರ್ಕೆಟ್‍ನಲ್ಲಿ ಎಗ್ಗಿಲ್ಲದೇ ಮಾರಾಟವಾಗುತ್ತಿದೆ. ಇದನ್ನೂ ಓದಿ: ದೇಶದಲ್ಲಿ ಇ-ಸಿಗರೇಟ್ ನಿಷೇಧ – ಮಾರಾಟ ಮಾಡಿದ್ರೆ ಬೀಳುತ್ತೆ ಭಾರೀ ದಂಡ
Advertisement
Advertisement
ಬ್ಯಾನ್ ಆಗಿರುವ ಇ-ಸಿಗರೇಟ್ ಎಲ್ಲಾದರೂ ಮಾರಾಟವಾಗುತ್ತಿದೆಯಾ ಎಂದು ತಿಳಿಯಲು ಫೀಲ್ಡಿಗಿಳಿದ ಪಬ್ಲಿಕ್ ಟಿವಿ ಕ್ಯಾಮೆರಾಗೆ ಮೊದಲು ಕಂಡಿದ್ದು ಮೆಜೆಸ್ಟಿಕ್‍ನ ನ್ಯಾಷನಲ್ ಮಾರ್ಕೆಟ್. ಇಲ್ಲಿ ಮೊದಲು ಕೇಳಿದರೆ ಬ್ಯಾನ್ ಆಗಿದೆ ಸಿಗಲ್ಲ ಎಂದು ಹೇಳುತ್ತಾರೆ. ಸ್ವಲ್ಪ ಸಮಯ ಅಲ್ಲೇ ನಿಂತು ಸೈಲೆಂಟ್ ಆಗಿ ಕೇಳಿದರೆ ನಿಧಾನಕ್ಕೆ ತೆಗೆದುಕೊಡುತ್ತಾರೆ. ಜೊತೆಗೆ ಬಂದಂತಹ ಯುವಕರಿಗೆ ಸ್ಪಾಟ್‍ನಲ್ಲೇ ರಿಹರ್ಸಲ್ ಮಾಡಿ ಸೇದಿ ತೋರಿಸುತ್ತಾರೆ.
Advertisement
ಪಬ್ಲಿಕ್ ಪ್ರತಿನಿಧಿ: ಎಲೆಕ್ಟ್ರಿಕ್ ಸಿಗರೇಟ್ ಬೇಕು
ಶಾಪ್ ಮಾಲೀಕ: ಬನ್ನಿ
ಪಬ್ಲಿಕ್ ಪ್ರತಿನಿಧಿ: ಎಷ್ಟಾಗುತ್ತೆ.?
ಶಾಪ್ ಮಾಲೀಕ: 800 ರೂಪಾಯಿ
ಪಬ್ಲಿಕ್ ಪ್ರತಿನಿಧಿ: ಅಷ್ಟೊಂದಾಗುತ್ತಾ.?
ಶಾಪ್ ಮಾಲೀಕ: ಹುಂ.. ನೋಡಿ ಹೀಗಿದೆ..
ಪಬ್ಲಿಕ್ ಪ್ರತಿನಿಧಿ: ಯೂಸ್ ಮಾಡೋದು ಹೇಗೆ.?
ಶಾಪ್ ಮಾಲೀಕ: ಈ ತರಹ ಮಾಡೋದು ನೋಡಿ
Advertisement
ಪ್ರತಿನಿಧಿ: ಲಿಕ್ವಿಡ್ ಎಷ್ಟು ಹಾಕಬೇಕು? ಫ್ಲೇವರ್ ಸಿಗುತ್ತಾ ಇದರಲ್ಲಿ.?
ಶಾಪ್ ಮಾಲೀಕ: ಸಿಗುತ್ತೆ ಭಾಯ್.. ಯಾವ ಥರದ್ದು ಫ್ಲೇವರ್ ಬೇಕಿದ್ರು ಸಿಗುತ್ತೆ.
ಶಾಪ್ ಮಾಲೀಕ: ಫ್ಲೇವರ್ ಯಾವುದು ಬೇಕು.?
ಪಬ್ಲಿಕ್ ಪ್ರತಿನಿಧಿ: ಹುಕ್ಕ ಫ್ಲೇವರ್ ಸಿಗಲ್ವ.?
ಶಾಪ್ ಮಾಲೀಕ: ಸಿಗುತ್ತೆ ಭಾಯ್. ಎಲ್ಲೂ ಸಿಗಲ್ಲ. ಬ್ಯಾನ್ ಆಗಿದೆ ನೀವು ಎರಡು ಸಾರಿ ಬಂದು ಕೇಳುದರಲ್ಲ ಹಾಗಾಗಿ ಕೊಡ್ತಾ ಇರೋದು.
ಪಬ್ಲಿಕ್ ಪ್ರತಿನಿಧಿ: ಹುಂ
ಶಾಪ್ ಮಾಲೀಕ: ನೀವು ಇಲ್ಲಿ ಇರೋದು.?
ಪಬ್ಲಿಕ್ ಪ್ರತಿನಿಧಿ: ಮಾಗಡಿ ರೋಡ್
ಶಾಪ್ ಮಾಲೀಕ: ಇದಕ್ಕೆ ಅಂತಾ ಅಷ್ಟು ದೂರದಿಂದ ಬಂದ್ರಾ.?
ಪಬ್ಲಿಕ್ ಪ್ರತಿನಿಧಿ: ತಗೋಬೇಕು ಅಂತಾ ಬಂದ್ವಿ. ಇನ್ಮುಂದೆ ಬರ್ತಾ ಇರ್ತೀವಿ.
ಶಾಪ್ ಮಾಲೀಕ: ಓಕೆ ಬನ್ನಿ
ಪಬ್ಲಿಕ್ ಪ್ರತಿನಿಧಿ: ಇವಾಗ ಎಷ್ಟು ಹೇಳಿ.?
ಶಾಪ್ ಮಾಲೀಕ: 700 ಕೊಡಿ ಹೋಗಿ
ಪಬ್ಲಿಕ್ ಪ್ರತಿನಿಧಿ: ಸ್ವೈಪಿಂಗ್ ಮಿಷಿನ್ ಇದೆಯಾ?
ಶಾಪ್ ಮಾಲೀಕ: ಹುಂ ಇದೆ..
ಪಬ್ಲಿಕ್ ಪ್ರತಿನಿಧಿ: ಸರಿ ಕೊಡಿ..
ಶಾಪ್ ಮಾಲೀಕ: ಯಾವ ಫ್ಲೇವರ್ ಬೇಕಿದ್ರು ಹಾಕ್ಕೊಂಡು ಹೊಡಿಬಹುದು.
ಪಬ್ಲಿಕ್ ಪ್ರತಿನಿಧಿ: ಹುಂ ಸರಿ
ಶಾಪ್ ಮಾಲೀಕ: ನೋಡಿ ಹೊಡೆದು ತೋರಿಸ್ತಿನಿ.
ಶಾಪ್ ಮಾಲೀಕ: ಸ್ಯಾಂಪಲ್ ಇದು ಅಷ್ಟೇ ನೀವು ಹೊಡೆದಂಗೆಲ್ಲಾ ಹೊಗೆ ಬರುತ್ತೆ.
ಪಬ್ಲಿಕ್ ಪ್ರತಿನಿಧಿ: ಹುಂ ಸರಿ ಕೊಡಿ ಬಿಲ್ ಮಾಡಿ..
ಶಾಪ್ ಮಾಲೀಕ: ಸರಿ ಅಲ್ಲಿ ಕೊಡಿ.
ಪಬ್ಲಿಕ್ ಪ್ರತಿನಿಧಿ: ಕಡಿಮೆ ಮಾಡಿಕೊಳ್ಳಿ ಭಾಯ್.
ಶಾಪ್ ಮಾಲೀಕ: ಕಡಿಮೆ ಆಗಲ್ಲ ಸರ್. ಕೊಡ್ತಿರೋದೇ ಕಡಿಮೆಗೆ.
ಪಬ್ಲಿಕ್ ಪ್ರತಿನಿಧಿ: ಆಯಿತು ಕೊಡಿ.
ಎಂಜಿ ರಸ್ತೆಯ ಚರ್ಚ್ ಸ್ಟ್ರೀಟ್ ನಲ್ಲೂ ಇದೇ ಪರಿಸ್ಥಿತಿ ಇದೆ. ಪರಿಚಯ ಇಲ್ಲದಿದ್ದರೇ ಇಲ್ಲಿ ನಿಮಗೆ ಇ-ಸಿಗರೇಟ್ ಸಿಗಲ್ಲ. ಮೆಲ್ಲಗೆ ಮಾತಿಗಿಳಿದರೆ ಮಾತ್ರ ಸತ್ಯ ಅನಾವರಣ ಆಗುತ್ತದೆ. ದೇಶ ವ್ಯಾಪ್ತಿ ನಿಷೇಧ ಮಾಡಿದ್ರೂ, ರಾಜ್ಯ ರಾಜಧಾನಿಯಲ್ಲಿ ಇ-ಸಿಗರೇಟ್ ಮಾತ್ರ ಎಗ್ಗಿಲ್ಲದೇ ಮಾರಾಟವಾಗುತ್ತಿದೆ. ಸರ್ಕಾರ, ಪೊಲೀಸ್ ಇಲಾಖೆ ಮಾತ್ರ ಕ್ರಮ ಕೈಗೊಳ್ಳದೇ ಕುಳಿತಿದೆ. ಇನ್ನಾದರೂ ಖಾಕಿ ನಿದ್ದೆಯಿಂದ ಎದ್ದು ಕಠಿಣ ಕ್ರಮ ಜರುಗಿಸುತ್ತಾ ಕಾದು ನೋಡಬೇಕಿದೆ. ಯುವಜನತೆಯನ್ನು ಅಪಾಯದಿಂದ ರಕ್ಷಣೆ ಮಾಡಬೇಕಿದೆ.