ಎಗ್ಗಿಲ್ಲದೇ ನಡೆಯುತ್ತಿದೆ ನಕಲಿ ಎನ್-95 ಮಾಸ್ಕ್ ದಂಧೆ-ಕಣ್ಣುಮುಚ್ಚಿ ಕುಳಿತುಬಿಡ್ತಾ ಆರೋಗ್ಯ ಇಲಾಖೆ?

Public TV
3 Min Read
N95 Mask Duplicate Sale

-ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ನಕಲಿ ಮಾಸ್ಕ್ ದಂಧೆ ಬಹಿರಂಗ

ಬೆಂಗಳೂರು: ಸರ್ಕಾರದ ಕಟ್ಟುನಿಟ್ಟಿನ ಎಚ್ಚರಿಕೆಗೂ ಕೆಲ ವ್ಯಾಪಾರಿಗಳು ಡೋಂಟ್ ಕೇರ್ ಎಂದು ಹೇಳಿ ನಕಲಿ ಎನ್-95 ಮಾಸ್ಕ್ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಚರಣೆಯಲ್ಲಿ ಮಾಸ್ಕ್ ದಂಧೆ ಬಹಿರಂಗವಾಗಿದೆ.

ಮಾಸ್ಕ್ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡವರಿಂದ ನಕಲಿ ದಂಧೆ ಜೋರಾಗಿಯೇ ನಡೆಯುತ್ತಿದೆ. ಮೆಡಿಕಲ್ ಸ್ಟೋರ್ ಮಾಲೀಕರು, ಪೂರೈಕೆದಾರರಿಂದ ಲಂಗು ಲಗಾಮ್ ಇಲ್ಲದೇ ಮಾಸ್ಕ್ ಗಳ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರೂ ಡೋಂಟ್ ಕೇರ್ ಅಂತ ನಕಲಿ ಮಾಸ್ಕ್ ದಂದೆಗೆ ಇಳಿದಿದ್ದಾರೆ.

N95 Mask Duplicate Sale 4

ಆಪರೇಷನ್ ಮೆಡಿಕಲ್ ಸ್ಟೋರ್-ಸ್ಥಳ 1: ಲಕ್ಕಸಂದ್ರ

ಪಬ್ಲಿಕ್ ಟಿವಿ:- ಎನ್_95 ಮಾಸ್ಕ್ ಇದ್ಯಾ ಮೇಡಂ..
ಮೆಡಿಕಲ್ ಸಿಬ್ಬಂದಿ – ಇದೆ.
ಪಬ್ಲಿಕ್ ಟಿವಿ:- ತೋರಿಸಿ ಮೇಡಂ.
ಪಬ್ಲಿಕ್ ಟಿವಿ: – ರೇಟ್ ಎಷ್ಟಿದೆ ಮೇಡಂ.
ಮೆಡಿಕಲ್ ಸಿಬ್ಬಂದಿ- ಓರಿಜಿನಲ್ ಎನ್ 95, 450 ರೂಪಾಯಿ. 250 ರೂಪಾಯಿದು ಇದೆ ಎನ್ 95 ತರನೇ ಇದೆ.
ಪಬ್ಲಿಕ್ ಟಿವಿ: – ಅದ್ರೇ ಅದು ಓರಿಜಿನಲ್ ಅಲ್ಲ. ಎರಡೂ ತೋರಿಸಿ ಮೇಡಂ. ಡೂಪ್ಲಿಕೇಟ್, ಓರಿಜಿನಲ್.
ಮೆಡಿಕಲ್ ಸಿಬ್ಬಂದಿ- 3 ಎಮ್ 95 ಮಾಸ್ಕ್ ಇದು ನೋಡಿ.
ಪಬ್ಲಿಕ್ ಟಿವಿ: – ಮೇಡಂ ಇದು 250 ನಾ.
ಮೆಡಿಕಲ್ ಸಿಬ್ಬಂದಿ- 450, ಇದು ತಗೋಳಿ 250
ಪಬ್ಲಿಕ್ ಟಿವಿ: – ಇದೂ ಎನ್ 95 ಮಾಸ್ಕ್ ನಾ?
ಮೆಡಿಕಲ್ ಸಿಬ್ಬಂದಿ- ಹಾ ಎನ್ 95 ಅಂತ ಹೇಳ್ತಾರೆ..

N95 Mask Duplicate Sale 1

ಆಪರೇಷನ್ ಮೆಡಿಕಲ್ ಸ್ಟೋರ್- ಸ್ಥಳ 2: ರಾಜಾಜಿನಗರ
ಪಬ್ಲಿಕ್ ಟಿವಿ: ಸರ್, ಮಾಸ್ಕ್ ಇದೆಯಾ. ಎನ್ 95
ಮೆಡಿಕಲ್ ಮಾಲೀಕ: ಇಲ್ಲ.
ಪಬ್ಲಿಕ್ ಟಿವಿ: ಯಾವುದಿದೆ?
ಮೆಡಿಕಲ್ ಮಾಲೀಕ: ನಾರ್ಮಲ್
ಪಬ್ಲಿಕ್ ಟಿವಿ: ನಾರ್ಮಲ್, ಯೂಸ್ ಆಂಡ್ ಥ್ರೋ ಎಷ್ಟು.
ಮೆಡಿಕಲ್ ಮಾಲೀಕ: ಟ್ವೆಂಟಿ ರೂಪಿಸ್.
ಪಬ್ಲಿಕ್ ಟಿವಿ: ಸೆವನ್ ರೂಪಿಸ್ ಅಲ್ವಾ ಸರ್ ಇದು.
ಮೆಡಿಕಲ್ ಮಾಲೀಕ: ತೊಗೊಳೊದಿದ್ರೆ ತೊಗೊಳ್ಳಿ.
ಪಬ್ಲಿಕ್ ಟಿವಿ: ಎನ್ 95 ಎಷ್ಟು.
ಮೆಡಿಕಲ್ ಮಾಲೀಕ: 400 ರೂಪಾಯಿ.
ಪಬ್ಲಿಕ್ ಟಿವಿ: ನೂರು ಬೇಕು. ನಾರ್ಮಲ್ ಮಾಸ್ಕ್ ಗಳು.
ಮೆಡಿಕಲ್ ಮಾಲೀಕ: 18 ರೂಪಾಯಿ+ ಟ್ಯಾಕ್ಸ್ ಆಗುತ್ತೆ.
ಪಬ್ಲಿಕ್ ಟಿವಿ: ಬಿಲ್ ಹಾಕಿ ಕೊಡ್ತಿರಾ.-.
ಮೆಡಿಕಲ್ ಮಾಲೀಕ: ಬಿಲ್ ಹಾಕಿ ಕೊಟ್ರೆ 20 ರೂಪಾಯಿ ಆಗುತ್ತೆ
ಪಬ್ಲಿಕ್ ಟಿವಿ: ನಮ್ಗೆ ಬಿಲ್ ಕೊಡೊದು ಬೇಡ
ಮೆಡಿಕಲ್ ಮಾಲೀಕ: ಹೋಲ್ ಸೇಲ್ ನಲ್ಲಿ 24 ರೂಪಿಸ್ ಪ್ಲಸ್ ಟ್ಯಾಕ್ಸ್ ಇದೆ. ಬೇಕಿದ್ರೆ ತರಿಸ್ತೀನಿ. ನೂರಕ್ಕೆ 2 ಸಾವಿರದ 8 ನೂರು ರೂಪಾಯಿ ಆಗುತ್ತೆ ಬೇಕಿದ್ರೆ ತರಿಸ್ತೇನೆ..

Hospital

ಆಪರೇಷನ್ ಮೆಡಿಕಲ್ ಸ್ಟೋರ್-ಸ್ಥಳ: 3 ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ರಸ್ತೆ
ಪಬ್ಲಿಕ್ ಟಿವಿ: ಸರ್ 200 ನಾರ್ಮಲ್ ಮಾಸ್ಕ್ ಬೇಕಿತ್ತು
ಮೆಡಿಕಲ್ ಮಾಲೀಕ : 1,475 ರೂಪಾಯಿ
ಪಬ್ಲಿಕ್ ಟಿವಿ: ಎಷ್ಟಿರುತ್ತೆ?
ಮೆಡಿಕಲ್ ಮಾಲೀಕ: ನೂರು
ಪಬ್ಲಿಕ್ ಟಿವಿ: ಎಷ್ಟಾಗುತ್ತೆ ಒಂದಕ್ಕೆ
ಮೆಡಿಕಲ್ ಮಾಲೀಕ: 14 ರೂಪಾಯಿ 70 ಪೈಸೆ
ಪಬ್ಲಿಕ್ ಟಿವಿ: ಬಿಲ್ ಹಾಕಿ ಕೊಡ್ತಿರಲ್ವಾ?
ಮೆಡಿಕಲ್ ಮಾಲೀಕ: ಹುಮ್

N95 Mask Duplicate Sale 2

ತ್ರಿಬಲ್ ಲೇಯರ್ ನೂರು ಮಾಸ್ಕ್ ಗಳ ಬೆಲೆ 1 ಸಾವಿರದ 4 ನೂರ 75 ರೂಪಾಯಿ. ಮೊದಲೆರಡು ಅಂಗಡಿಗಳಲ್ಲಿ 2 ಸಾವಿರ 8 ನೂರು ರೂಪಾಯಿ ಅಂತ ಹೇಳುತ್ತಾರೆ. ಹೀಗೆ ನಗರದ ಹಲವು ಮೆಡಿಕಲ್ ಗಳಲ್ಲಿ ಈ ರೀತಿ ಹಗಲು ದರೋಡೆ ನಡೆಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *