– ಲಂಚ ಕೊಡದಿದ್ರೆ ಬೀಳುತ್ತೆ ಎಸಿಬಿ ಕೇಸ್
– ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಿಡಿಎ ಲಂಚವತಾರ
ಸುನೀಲ್ ಗೋವಿನಕೋವಿ
ಬೆಂಗಳೂರು: ಬಿಡಿಎ ಭ್ರಷ್ಟಾಚಾರ ಡೆವಲೆಪ್‍ಮೆಂಟ್ ಅಥಾರಿಟಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಇಲ್ಲಿ ಬಿಡಿಎ ಹೆಸರಲ್ಲದೆ ಎಸಿಬಿ ಹೆಸರಿನಲ್ಲಿ ಅಧಿಕಾರಿಗಳು, ಅಧಿಕಾರಿಗಳ ಹತ್ತಿರವೇ ಹಣ ವಸೂಲಿ ಮಾಡುತ್ತಿದ್ದಾರೆ.
Advertisement
ಹೌದು. ಬಿಡಿಎನಲ್ಲಿ ಆರ್ ಟಿಐ ಸಮಾಲೋಚಕರ ಹುದ್ದೆಗೆ ಒಂದು ವರ್ಷದ ಅವಧಿಗೆ ನೇಮಕವಾಗಿದ್ದ ಚಂದ್ರಶೇಖರ್ ರಾವ್ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈಗ ಒಂದು ವರ್ಷ ಕಳೆದು ಅವಧಿ ಪೂರ್ಣಗೊಂಡಿದ್ದರೂ ಚಂದ್ರಶೇಖರ್ ರಾವ್ ತನ್ನ ಜಾಗವನ್ನು ಮಾತ್ರ ಬಿಡುತ್ತಿಲ್ಲ. ಅಷ್ಟೇ ಅಲ್ಲದೇ ಭ್ರಷ್ಟಾಚಾರ ನಿಗ್ರಹ ದಳದಲ್ಲಿ(ಎಸಿಬಿ) ಎಸ್‍ಪಿಯಾಗಿ ನನ್ನ ಶಿಷ್ಯ ಪವಾರ್ ಇದ್ದಾನೆ. ನಿಮ್ಮೆಲ್ಲರ ಕೇಸ್ ಆತನ ಬಳಿ ಇದೆ. ಅದನ್ನು ಕ್ಲಿಯರ್ ಮಾಡಬೇಕು ಅಂದ್ರೆ ಹಣ ಕೊಡಿ ಎಂದು ಬಿಡಿಎ ಅಧಿಕಾರಿಗಳ ಹತ್ರ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
Advertisement
Advertisement
ಚಂದ್ರಶೇಖರ್ ರಾವ್ ಹೇಗೆ ಬಿಡಿಎಯಲ್ಲಿ ಹೇಗೆ ಪವರ್ ಹೊಂದಿದ್ದಾರೆ ಎನ್ನುವುದಕ್ಕೆ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮಾಡಿದ್ದು ಆ ಆಡಿಯೋದಲ್ಲಿ ಎಲ್ಲವೂ ಸೆರೆಯಾಗಿದೆ.
Advertisement
ಈ ವಿಚಾರದ ಬಗ್ಗೆ ಎಸಿಬಿ ಎಸ್‍ಪಿ ಪವಾರ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ದೊಡ್ಡ ಹುದ್ದೆಯಲ್ಲಿರುವವರ ಈ ರೀತಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ನಾನು ಯಾರ ಹತ್ತಿರವೂ ಹಣವನ್ನು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಹಲವರ ಬಳಿ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿರುವ ಆರೋಪ ಹೊತ್ತಿರುವ ಚಂದ್ರಶೇಖರ್ ರಾವ್ ಈಗ ಇನ್ನೊಂದು ಅವಧಿಗೆ ನನ್ನನ್ನೆ ನೇಮಕ ಮಾಡಿ ಎಂದು ಮತ್ತೊಮ್ಮೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಸ್ಟಿಂಗ್ ಆಡಿಯೋದಲ್ಲಿ ಏನಿದೆ?
ಚಂದ್ರಶೇಖರ್ – ಈ ಯಮ್ಮ ಹೇಳಿದ್ದಕ್ಕೇನೆ ಎಫ್‍ಐಆರ್ ಹಾಕೋದಿಲ್ಲ ಅಂದ್ರು
ಇಂಜಿನಿಯರ್ 1 – ಅದೇ ಸಾಹೇಬ್ರ ಹತ್ತಿರ ಹೇಳಿದ್ದೆ ಏನ್ ಮಾಡೋದು ಸಾರ್ ಅಮೌಂಟ್‍ಗೆ ಅಂತ. ಈಗ ಯಾವ್ದು ಇಲ್ವಲ್ಲ ಅಂತ
ಇಂಜಿನಿಯರ್ 2 – ನಾನ್ ಮೊನ್ನೆ ಅಂದೆ. ಮೊನ್ನೆ ಮಾತಾಡಿದ್ನಲ್ಲ ಸಾರ್ ಆ ಎಸಿಬಿನವರದ್ದು ತಂಟೆ ಬೇಡ ಫಸ್ಟ್ ಕ್ಲಿಯರ್ ಮಾಡ್ಕೋ ಮಾಡ್ಕೋ ಅಂತ
ಚಂದ್ರಶೇಖರ್ – ಹೇಳಿದ್ರು ಕೇಳಲ್ಲ ಅಲ್ಲಿಗೂ ನಾನೇನ್ ಮಾಡ್ದೆ ವ್ಯಕ್ತಿ ಓಳ್ಳೆಯವರು ಅಂತ ಕೈ ನಿಂದ ಕೊಟ್ಟಿದ್ದೀನಿ
ಇಂಜಿನಿಯರ್ 1 – ಹೇಳಿದ್ರು ಸರ್ ಹೇಳಿದ್ರು ಸರ್
ಇಂಜಿನಿಯರ್ 2 – ನೀವಂದ್ರಲ್ಲ ಸಾರ್ ಆವತ್ತು ನಾನ್ ಅಂದೆ ಸಾಹೆಬ್ರು ನೋಡಪ್ಪಾ ಕೈಯಿಂದ ಏನೋ ಕೊಟ್ಟಿದ್ದಾರಂತೆ ನೀ ಹಿಂಗೆಲ್ಲ ಮಾಡಬಾರದು ಅಂತ ಯಾಕಂದ್ರೆ ಯಾರನ್ನಾದರೂ ನಂಬಿ ಈ ಪೊಲೀಸ್ ನವರನ್ನ ನಂಬೇಡಿ ಅಂತ ಅದ್ರಲ್ಲೂ ಈ ಎಸಿಬಿನಲ್ಲಿ ಎಂಥವರು ಕೂತಿದ್ದಾರೆ ಅಂದ್ರೆ ಎಲ್ಲಾ
ಇಂಜಿನಿಯರ್ 1 – ಎಸಿಬಿನಲ್ಲಿ ಇವರಿಗೆ ಎಸ್‍ಪಿ ಸಾಹೇಬ್ರ ಪರಿಚಯ ಅಂತೆ ಸಾರ್
ಇಂಜಿನಿಯರ್ 2 – ಯಾರ್ ಸಾರ್
ಇಂಜಿನಿಯರ್ 1 – ಪವಾರ್ ಅಂತೆ ಸಾರ್
ಚಂದ್ರಶೇಖರ್ – ಹೌದ್ರಿ ಪವಾರ್ ಹೇ ಇದ್ರಲ್ಲಿ ಇರ್ಲಿಲ್ವೇನ್ರಿ ಅವನು ಕೆಪಿಎಲ್‍ನಲ್ಲಿ ಇರ್ಲಿಲ್ವೇನ್ರಿ ಅವನೇ ರ‍್ಯಾಂಕ್ ಹೋಲ್ಡರ್ ಅವನು ರಿಕ್ಯೂಟೆಡ್ ಅಲ್ಲ ಡೈರೆಕ್ಟ್ ಸೆಲೆಕ್ಷನ್ ಟ್ರಸ್ಟಿ ಅವನ ನಾದ್ನಿ ಬಂದು ಇದ್ರಲ್ಲಿ ಇದ್ದಾಳೆ ಲೀಗಲ್ ಮೆಟ್ರಾಲಜಿನಲ್ಲಿ ಚಿಕ್ಕಬಳ್ಳಾಪುರದಲ್ಲಿ
ಇಂಜಿನಿಯರ್ 1 – ಸಾಹೇಬ್ರಿಗೆ ಸ್ವಲ್ಪ ಟಚ್ ಇರೋದ್ರಿಂದ ಸ್ವಲ್ಪ ಹೋಲ್ಡ್ ಮಾಡಿ
ಇಂಜಿನಿಯರ್ 2 – ಸ್ವಲ್ಪ ಎಲ್ಲಾ ಕ್ಲಿಯರ್ ಮಾಡಿಕೊಟ್ಟುಬಿಡಿ ಸಾರ್