ಐವರ ಜೀವ ಕಾಪಾಡಿದ ‘ಪಬ್ಲಿಕ್’ ಹೀರೋ- ಪಬ್ಲಿಕ್ ಟಿವಿ ತಂಡಕ್ಕೆ ಪ್ರಶಂಸೆಗಳ ಮಹಾಪೂರ

Public TV
2 Min Read
PUBLIC TV VIJAY KUMAR

ಬೆಂಗಳೂರು: ಪಬ್ಲಿಕ್ ಟಿವಿ (Public TV) ಸುದ್ದಿಗಳನ್ನ ಬಿತ್ತರಿಸುವ ಜೊತೆ ಜೊತೆಗೆ ನಾಡಿನ ಮಂದಿ ಸಂಕಷ್ಟದಲ್ಲಿರುವಾಗ ಸಂಕಷ್ಟದಲ್ಲಿರೋರಿಗೆ ಹೆಗಲಾಗುವ ಕೆಲಸ ಮಾಡಿದೆ. ಅದಕ್ಕೆ ಸಾಕ್ಷಿ ಭಾನುವಾರ ನಡೆದ ಅಂಡರ್ ಪಾಸ್ (UnderPass) ದುರಂತದಲ್ಲಿದ್ದವರಿಗೆ ಹೆಗಲಾಗಿದ್ದು.

ನಿಮ್ಮ ಪಬ್ಲಿಕ್ ಟಿವಿ ಮೊದಲಿನಿಂದಲೂ ಜನಪರ ಕೆಲಸಗಳನ್ನು ಮಾಡಿಕೊಂಡೇ ಬರುತ್ತಿದೆ. ನಿಮ್ಮ ಪಬ್ಲಿಕ್ ಟಿವಿ ಕೇವಲ ಸುದ್ದಿಯನ್ನು ಮಾತ್ರ ತಲುಪಿಸುವ ಕೆಲಸ ಮಾಡ್ತಿಲ್ಲ. ಬದಲಾಗಿ ನೊಂದವರ ಕಣ್ಣೀರು ಒರೆಸುವ, ಕಷ್ಟದಲ್ಲಿರುವವರಿಗೆ ನೆರವಾಗುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ನಮ್ಮ ಪ್ರತಿನಿಧಿಗಳು, ನಮ್ಮ ಸಿಬ್ಬಂದಿ ಈ ವಿಚಾರದಲ್ಲಿ ಸದಾ ಮುಂದಿರ್ತಾರೆ. ಈಗಲೂ ಹಾಗೆಯೇ ಆಗಿದೆ. ಭಾನುವಾರ ಸಂಜೆ ಮಳೆಯಿಂದ ಜಲಾವೃತವಾಗಿದ್ದ ಕೆಆರ್ ವೃತ್ತದ ಅಂಡರ್ ಪಾಸ್‍ನಲ್ಲಿ ಜೀವನ್ಮರಣದ ನಡುವೆ ಹೋರಾಟ ಮಾಡ್ತಿದ್ದವರನ್ನು ನಮ್ಮ ಸಿಬ್ಬಂದಿ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ.

ಪಬ್ಲಿಕ್ ಟಿವಿ ವಾಹನ ಚಾಲಕ ವಿಜಯ್‍ ಕುಮಾರ್ (Vijay Kumar) ನೀರಿಗೆ ಇಳಿದು ಐವರನ್ನು ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಕ್ವಿಕ್ ರೆಸ್ಕ್ಯೂ ಟೀಂ ವಾಹನವನ್ನು ತಡೆದ ನಮ್ಮ ಪ್ರತಿನಿಧಿ ನಾಗೇಶ್ ಸಹಾಯಕ್ಕೆ ನೆರವಾಗುವಂತೆ ಮನವಿ ಮಾಡಿದ್ದಾರೆ. ಆದರೆ ಅದನ್ನು ನಂಬದ ಸಿಬ್ಬಂದಿಗೆ ಲೋಗೋ ತೋರಿಸಿ, ಕೂಡಲೇ ಬನ್ನಿ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಆಗ ನೆರವಿಗೆ ಬಂದ ಕ್ವಿಕ್ ರೆಸ್ಕ್ಯೂ ಟೀಂ ರಕ್ಷಣಾ ಕಾರ್ಯ ನಡೆಸಿತು. ಕೆಳಗಿದ್ದವರನ್ನು ರಕ್ಷಿಸಲು  ಮಹಿಳೆಯೊಬ್ಬರು ತಾವು ಧರಿಸಿದ್ದ ತಮ್ಮ ಸೀರೆಯನ್ನು ಬಿಚ್ಚಿ ಹಗ್ಗದಂತೆ ಬಳಸಲು ನೀಡಿದರು. ಇದನ್ನೂ ಓದಿ: ಪ್ರಾಣ ಉಳಿಸಲು ಉಟ್ಟ ಸೀರೆ ಬಿಚ್ಚಿಕೊಟ್ಟ ಮಹಾತಾಯಿ ಮತ್ತು `ಪಬ್ಲಿಕ್ ಟಿವಿ’ಯ ಈ ಇಬ್ಬರು ಹೀರೋಗಳು..!

VIJAY KUMAR

ಇದಕ್ಕೆ ಸಂಬಂಧಿಸಿದ ದೃಶ್ಯಗಳು ವೈರಲ್ ಆಗುತ್ತಲೇ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಡಿಸಿಎಂ ಶಿವಕುಮಾರ್ ಮಾಧ್ಯಮಗಳ ಹೊಣೆಗಾರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಬ್ಲಿಕ್ ಟಿವಿ ವತಿಯಿಂದ ಸನ್ಮಾನ ಮಾಡಲಾಯ್ತು. ವಿಜಯ್ ಕುಮಾರ್ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸಂಚಾರಿ ಇಲಾಖೆ ಜಂಟಿ ಆಯುಕ್ತ ಅನುಚೇತ್ ಸನ್ಮಾನಿಸಿ, 10ಸಾವಿರ ನಗದು ಪುರಸ್ಕಾರ ನೀಡಿ ಬೆನ್ನು ತಟ್ಟಿದ್ದಾರೆ. ಇದನ್ನೂ ಓದಿ: ಮುಂದಿನ 5 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ – ಸಚಿವ ಎಂ.ಬಿ ಪಾಟೀಲ್‌

Share This Article