ಚಿಕ್ಕೋಡಿ: ವಯಸ್ಸಾದ ಅಜ್ಜಿಯ ಆಶ್ರಯದಲ್ಲಿರುವ ಯುವತಿಯ ಹೆಸರು ಶೃತಿ ಕರಿಭೀಮಗೋಳ, ವಯಸ್ಸು 24 ವರ್ಷ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ವಾಸವಾಗಿದ್ದಾರೆ. ಶೃತಿ ಬುದ್ಧಿವಂತೆ ಮದುವೆಯೂ ಆಗಿ ಗಂಡನ ಜೊತೆ ಆರಾಮವಾಗಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಗು ಹುಟ್ಟಿದ 1 ತಿಂಗಳಲ್ಲಿ ಶೃತಿ ಅವರಿಗೆ ಮೆದುಳು ಜ್ವರ ಬಂದಿದ್ದು ಕೈ ಕಾಲುಗಳ ಶಕ್ತಿ ಕುಂಠಿತಗೊಂಡಿದೆ, ಬುದ್ಧಿ ಸ್ಥಿಮೀತ ಕಳೆದುಕೊಂಡಿದ್ದು, ಅಕ್ಷರಶಃ ಮಾನಸಿಕ ಅಸ್ವಸ್ಥೆ ಆಗಿದ್ದಾರೆ. ಆದಾಗಿ ಗಂಡ ಶೃತಿಯನ್ನು ತವರು ಮನೆಗೆ ಬಿಟ್ಟು ನಾಪತ್ತೆಯಾಗಿದ್ದಾನೆ. ತಂದೆ-ತಾಯಿಯನ್ನು ಕಳೆದುಕೊಂಡ ತಬ್ಬಲಿ ಶೃತಿ ಅಜ್ಜಿಯ ಆಶ್ರಯದಲ್ಲಿ ಜೀವನ ದೂಡುತ್ತಿದ್ದಾರೆ.
Advertisement
Advertisement
70 ವರ್ಷ ವಯಸ್ಸಾಗಿರುವ ಈ ಅಜ್ಜಿ ಕಮಲಾ ಭೂಸಗೋಳ, ಹೊಟೆಲ್‍ನಲ್ಲಿ ತಟ್ಟೆ ತೊಳೆದು, ಟೇಬಲ್ ಒರೆಸುವ ಕೆಲಸ ಮಾಡಿ ಬಂದಂತಹ ಅಷ್ಟೋ ಇಷ್ಟೋ ಹಣದಿಂದ ಮೊಮ್ಮಗಳಾದ ಶೃತಿಗೆ ನಿತ್ಯ ಕರ್ಮಗಳನ್ನು ಮಾಡಿಸಿ ಆರೈಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಶೃತಿ ಜನ್ಮ ನೀಡಿದ 5 ವರ್ಷದ ಮಗುವನ್ನು ಆರೈಕೆ ಮಾಡುತ್ತಿರುವ ಅಜ್ಜಿಯ ಕಥೆ ಕರುಣಾಜನಕ.
Advertisement
ಹೆತ್ತ ತಂದೆ-ತಾಯಿನ್ನು ಸಾಕಲು ಆಗದೇ ವೃದ್ಧಾಶ್ರಮಕ್ಕೆ ಬಿಟ್ಟು ಹೋಗುವ ನಾಗರೀಕ ಸಮಾಜದಲ್ಲಿ ಈ ವಯೋವೃದ್ಧೆ ಕೂಲಿ ಕೆಲಸ ಮಾಡಿ ಮಾನಸಿಕ ಅಸ್ವಸ್ಥೆಯಾದ ಮೊಮ್ಮಗಳು ಮತ್ತು ಆಕೆಯ ಮಗುವನ್ನು ಆರೈಕೆ ಮಾಡುತ್ತಿದ್ದಾರೆ. ಆದ್ರೆ ಅಜ್ಜಿಯು ನಾನು ಇರೋವರೆಗೂ ನೋಡಿಕೊಳ್ಳುತ್ತೇನೆ. ಮುಂದೆ ಆಕೆಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಪುಟ್ಟ ಕಂದಮ್ಮನನ್ನು ನೋಡಿಕೊಳ್ಳು ಯಾರೂ ಇಲ್ಲ, ಮೊಮ್ಮಗಳಿಗೆ ಚಿಕಿತ್ಸೆ ಕೊಡಿಸಿ, ಎಲ್ಲರಂತಿರಲು ಸಹಾಯ ಮಾಡಿ ಎಂದು ಅಜ್ಜಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=fEN3aKzTMPY