ಮೈಸೂರು: ಜಿಲ್ಲೆಯ ಕೂರ್ಗಳ್ಳಿ ನಿವಾಸಿ 52 ವರ್ಷದ ಶಿವಪ್ರಕಾಶಸ್ವಾಮಿ ಅವರು ಕಾಲುಗಳಿದ್ದು ಸ್ವಾಧೀನ ಇಲ್ಲದೇ ಕಷ್ಟಪಡುತ್ತಿದ್ದಾರೆ. ಇವರಿಗೆ ಪತ್ನಿ ಸಾವಿತ್ರಮ್ಮ ಮತ್ತು 12 ವರ್ಷದ ಮಗನಿದ್ದಾನೆ. 22 ವರ್ಷಗಳ ಹಿಂದೆ ಇವರ ಮೇಲೆ ಆಕಸ್ಮಿಕವಾಗಿ ಮರ ಉರುಳಿ ಬಿದ್ದು ಎರಡು ಕಾಲುಗಳು ಸ್ವಾಧೀನ ಹೋಗಿದೆ. ಅಂದಿನಿಂದ ಪತ್ನಿಯ ನೆರವಿನಿಂದ ಹೆಜ್ಜೆ ಇಡುವ ಪರಿಸ್ಥಿತಿ ಬಂದಿದೆ.
ಪತ್ನಿ ಸಾವಿತ್ರಮ್ಮ ಗಾರ್ಮೇಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ಇಡೀ ಸಂಸಾರದ ಜವಾಬ್ದಾರಿಯನ್ನು ಹೊತ್ತಿದ್ದರು. ಆದ್ರೆ ಗಂಡ ಮಗನನ್ನು ನೋಡಿಕೊಳ್ಳಲು ಕೆಲಸ ಬಿಟ್ಟಿದ್ದಾರೆ. ಮಗನ ವಿದ್ಯಾಭ್ಯಾಸ ಮತ್ತು ಜೀವನಕ್ಕಾಗಿ ಶಿವಪ್ರಕಾಶ್ ಪೆಟ್ಟಿಗೆ ಅಂಗಡಿಯಲ್ಲಿ ಟೀ-ಕಾಫಿ ಮಾರುತ್ತಾ ಜೀವನ ಕಟ್ಟಿಕೊಂಡಿದ್ದಾರೆ. ಇದಕ್ಕೆ ಪತ್ನಿ ಸಾಥ್ ನೀಡುತ್ತಿದ್ದಾರೆ.
Advertisement
Advertisement
ಅಂಗಡಿಯಲ್ಲಿ ಬರುವ ಅಲ್ಪ ಸ್ವಲ್ಪ ಆದಾಯದಲ್ಲಿ ಪೆಟ್ಟಿಗೆ ಅಂಗಡಿಗೆ ಸಾವಿರ ರೂಪಾಯಿ ಬಾಡಿಗೆ ಕಟ್ಟಿ, ಮಗನ ವಿದ್ಯಾಭ್ಯಾಸ ಮತ್ತು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಮಗ 5ನೇ ತರಗತಿಯಲ್ಲಿ ಓದುತ್ತಿದ್ದು, ಸ್ಕೂಲ್ ಫೀಸ್ ಕಟ್ಟಲು ಪರದಾಡುತ್ತಿದ್ದಾರೆ. ಹೀಗಾಗಿ ಸ್ವಂತಕ್ಕೆ ಒಂದು ಪೆಟ್ಟಿಗೆ ಅಂಗಡಿಯಾದರೆ ಬಾಡಿಗೆ ಹಣ ಉಳಿಯುತ್ತೆಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ನೆರವು ಬಯಸುತ್ತಿದ್ದಾರೆ.
Advertisement
ಕಾಲುಗಳ ಸ್ವಾಧೀನ ಕಳೆದುಕೊಂಡು ನಡೆಯುವುದಕ್ಕೆ ಆಗದೆ ಇದ್ದರೂ ಕಷ್ಟದ ಕೆಲಸ ಮಾಡಲು, ದೇಹ ಸ್ಪಂದಿಸದೇ ಇದ್ದರೂ ಸ್ವಾಭಿಮಾನದಿಂದ ಬದುಕುವ ಛಲವಿರುವ ಈ ದಂಪತಿಗಳಿಗೆ ದಾನಿಗಳು ಸಹಾಯ ಮಾಡಲಿ ಎಂಬುದು ನಮ್ಮ ಆಶಯ.
Advertisement
https://www.youtube.com/watch?v=Al6PECjiRqY