ಹುಬ್ಬಳ್ಳಿ: ಗ್ರಾಮದಲ್ಲಿ ಹಸುಗಳನ್ನು ಮೇಯಿಸಿ ಅದರಿಂದ ಬಂದಂತಹ ಹಣದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಯೊಬ್ಬನಿಗೆ ಮಲೇಷಿಯಾಕ್ಕೆ ತೆರಳಲು ಆರ್ಥಿಕ ನರೆವು ಬೇಡುತ್ತಿದ್ದಾನೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲಕೊಪ್ಪ ಗ್ರಾಮದ ನಿವಾಸಿ 18 ವರ್ಷದ ಪುಂಡಲೀಕ್ ಗಾಯಕವಾಡ್ ಆರ್ಥಿಕ ನೆರವು ಬೇಡುತ್ತಿರುವ ವಿದ್ಯಾರ್ಥಿ. ಈತ ಗ್ರಾಮದಲ್ಲಿ ಹಸುಗಳನ್ನು ಮೇಯಿಸಿ ಅದರಿಂದ ಬಂದ ಹಣದಿಂದಲೇ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಸದ್ಯ ಪ್ರಥಮ ವರ್ಷದ ಬಿಎ ಪತ್ರಿಕೋದ್ಯಮ ಓದುತ್ತಿದ್ದಾನೆ.
ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿರುವ ಪುಂಡಲಿಕ್ ಗಾಯಕ್‍ವಾಡ್‍ಗೆ ಕ್ರೀಡೆಯಲ್ಲಿ ಭಾರಿ ಆಸಕ್ತಿ. ಯಾವುದೇ ತರಬೇತಿ ಪಡೆಯದೇ ತನ್ನಷ್ಟಕ್ಕೆ ದೊಣ್ಣೆ ವರಸೆ(ಸಿಲಂಬ್)ನಲ್ಲಿ ಪರಿಣಿತನಾಗಿದ್ದಾನೆ. ಅಷ್ಟೇ ಅಲ್ಲ ಸೌಥ್ ಏಷಿಯನ್ ಸಿಲಂಬ್‍ಂ ಚಾಂಪಿಯನ್‍ಶಿಪ್‍ನಲ್ಲಿ ಎರಡನೇ ಸ್ಥಾನ ಪಡೆದು ಸಾಧನೆಗೈದಿದ್ದಾನೆ. ಸ್ವಂತ ಪರಿಶ್ರಮ, ಪ್ರತಿಭೆಯಿಂದ ಏಷಿಯನ್ ಚಾಂಪಿಯನ್ ಶಿಪ್‍ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾನೆ ಆದರೆ ಮಲೇಷಿಯಾಕ್ಕೆ ಹೋಗಿ ಸ್ಪರ್ಧೆ ಮಾಡಲು ಹಣವಿಲ್ಲದೆ ಅಸಾಧ್ಯವಾಗಿದ್ದು, ದಿಕ್ಕುಕಾಣದೆ ಪರಿತಪಿಸುತ್ತಿದ್ದಾನೆ.
ಕಿತ್ತು ತಿನ್ನುವ ಬಡತನದ ನಡುವೆ ತಂದೆ ಕೂಲಿ ಕೆಲಸ ಮಾಡಿ ಹೆಂಡ್ತಿ ಮಕ್ಕಳನ್ನು ಸಾಕುತ್ತಿದ್ದು, ಮಗ ಸ್ವತಃ ದನ ಕಾಯುತ್ತ ಬಂದ ಹಣದಿಂದ ಓದುತ್ತಿದ್ದಾನೆ. ಈ ಮಧ್ಯೆ ಮಲೇಷಿಯಾಕ್ಕೆ ಹೋಗಿ ಸ್ಪರ್ಧಿಸಲು ಕಷ್ಟ ಪಡುತ್ತಿದ್ದಾನೆ. ಹೀಗಾಗಿ ದೇಶವನ್ನು ಪ್ರತಿನಿಧಿಸುವತ್ತ ಆಯ್ಕೆಯಾಗಿರುವ ಹುಬ್ಬಳ್ಳಿಯ ಗ್ರಾಮೀಣ ಪ್ರತಿಭೆಗೆ ನೆರವು ಅವಶ್ಯಕವಾಗಿದೆ.
ಯಾರಾದ್ರೂ ದಾನಿಗಳು ಬಡ ಪ್ರತಿಭಾವಂತ ಕ್ರೀಡಾಪಟುವಿಗೆ ಸಹಾಯ ಮಾಡಿದ್ರೆ ಗ್ರಾಮೀಣ ಕ್ರೀಡೆ ಮತ್ತು ಗ್ರಾಮೀಣ ಪ್ರತಿಭೆಗೆ ಸಹಾಯ ಮಾಡಿದಂತಾಗುತ್ತದೆ. ಇವನ ಸಾಧನೆಗೆ ಸಹಕಾರ ಕಲ್ಪಿಸುವ ಪ್ರಯತ್ನ ನಮ್ಮದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=CjuiupnpLqY