ಬೆಂಗಳೂರು: ಮಗಳಿಗೆ ಇರುವ ಆರೋಗ್ಯ ಸಮಸ್ಯೆಯಿಂದಾಗಿ ತಾಯಿ ಕಣ್ಣೀರು ಹಾಕುತ್ತಲೇ ದೇವರಿಗೆ ಮೊರೆ ಹೋಗುತ್ತಿದ್ದಾರೆ. ಈ ಕುಟುಂಬವು ನಗರದ ಎಲೆಕ್ಟ್ರಾನಿಕ್ ಸಿಟಿಯ ಕೂಡ್ಲಗೇಟ್‍ನಲ್ಲಿ ವಾಸವಾಗಿದೆ.
13 ವರ್ಷದ ಜ್ಯೋತಿ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಜ್ಯೋತಿಗೆ ತಂದೆ ಇಲ್ಲ, ತಾಯಿ ಸೆಲ್ವಮ್ಮ ಮಾತ್ರ ಇರುವುದು. ಎಲ್ಲ ಮಕ್ಕಳಂತೆ ಶಾಲೆಗೆ ಹೋಗಿ, ಆಟ ಆಡಿ, ಪಾಠ ಕಲಿಯುವ ಆಸೆ. ಆದರೆ ಈಕೆಗೆ ಹುಟ್ಟಿನಿಂದಲೇ ಹೃದಯದಲ್ಲಿ ರಂಧ್ರವಿದೆ. ಹೀಗಾಗಿ ಉಸಿರಾಟದ ತೊಂದರೆಯಿದ್ದು ಓಡಾಡಲು, ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ.
Advertisement
Advertisement
ಮನೆಯಲ್ಲಿ ಕಡುಬಡತನವಿದ್ದು, ತಾಯಿ ಸೆಲ್ವಮ್ಮ ಅವರಿವರ ಮನೆ ಕೆಲಸ ಮಾಡಿಕೊಂಡು ವಯಸ್ಸಾದ ತಂದೆ ತಾಯಿಯನ್ನು ಸಾಕುತ್ತಿದ್ದಾರೆ. ಜ್ಯೋತಿ ಹೃದಯದಲ್ಲಿ ರಂಧ್ರವಿರುವುದು ಗೊತ್ತಾಗಿನಿಂದ ನಿತ್ಯವೂ ಕಣ್ಣೀರಲ್ಲೆ ಕಾಲ ಕಳೆಯುತ್ತಿದ್ದಾರೆ.
Advertisement
ಬಾಲಕಿ ಜ್ಯೋತಿಯ ಹೃದಯದಲ್ಲಿ ರಂಧ್ರವಿರುವುದಕ್ಕೆ ಚನ್ನೈ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ಮೇಲೂ ಮಗಳು ಉಳಿಯುತ್ತಾಳೆ ಅಂತಾ ಹೇಳಲಿಕ್ಕೆ ಆಗುವುದಿಲ್ಲ. ಅಲ್ಲದೆ ದುಬಾರಿ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರಂತೆ. ಇದರಿಂದ ಭಯಗೊಂಡ ತಾಯಿ ಸೆಲ್ವಮ್ಮ ಅವರು ಸರಿಯಾದ ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಮರುಗುತ್ತಿದ್ದಾರೆ.
Advertisement
“ಅಮ್ಮ ನಾನು ಬದುಕಬೇಕು. ಓದಬೇಕು. ಓದಿ ನಿಮ್ಮನ್ನೆಲ್ಲಾ ಸಾಕಬೇಕು” ಎಂದು ಬಾಲಕಿ ಜ್ಯೋತಿ ಕಣ್ಣೀರು ಹಾಕಿ ಹೇಳುವುದನ್ನು ಕಂಡು ತಾಯಿ ಜೀವನ ಮರುಗಿದೆ. ಆದಾಗಿ ನೊಂದ ತಾಯಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ನೋಡಿ ನನ್ನ ಮಗಳಿಗೆ ಚಿಕಿತ್ಸೆ ಕೊಡಿಸಿ ಅಂತಾ ಅಳಲು ತೊಡಿಕೊಳ್ಳುತ್ತಿದ್ದಾರೆ.
https://www.youtube.com/watch?v=pkzEJsH8wgU