ಹಾವೇರಿ: ಇದು ಸ್ವಾಭಿಮಾನಿ ಯುವಕನ ಕಥೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಮಮದಾಪುರ ತಾಂಡಾದ ನಿವಾಸಿ ನಾಗರಾಜ್ ಲಮಾಣಿ ಅಂಗವೈಕಲ್ಯವನ್ನು ಸಹ ಮೆಟ್ಟಿನಿಂತು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ನಾಗರಾಜ್ ಓದಿದ್ದು ಎಸ್.ಎಸ್.ಎಲ್.ಸಿ, ಅಂಗವಿಕಲನಾದ್ರೂ ತಾನೇ ದುಡಿಮೆ ಮಾಡಿ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಛಲಗಾರ.
ಮಮದಾಪುರ ತಾಂಡಾದ ಗುಡ್ಡಗಾಡು ಪ್ರದೇಶದ ಬಳಿ ಎರಡುವರೆ ಎಕರೆ ಜಮೀನು ಇದ್ದು, ಕಳೆದ ಸುಮಾರು ವರ್ಷಗಳಿಂದ ಕೃಷಿಯ ಜೊತೆಗೆ ಕುರಿಸಾಕಾಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಸುತ್ತಮುತ್ತಲಿನ ಜನರ ಬಳಿ ಕುರಿ ಸಾಕಾಣಿಕೆ ಬಗ್ಗೆ ಕೇಳಿ ದೊಡ್ಡ ಪ್ರಮಾಣದಲ್ಲಿ ಕುರಿ ಸಾಕಾಣಿಕೆಗೆ ಒಂದು ಮನೆ ಹಾಗೂ ಅದಕ್ಕೆ ಬೇಕಾಗುವ ಸಲಕರಣೆ ಖರೀದಿ ಮಾಡಲು ಬ್ಯಾಂಕ್‍ಗೆ ಸಾಲಕ್ಕಾಗಿ ಅರ್ಜಿ ಹಾಕಿದ್ದಾನೆ. ಅದ್ರೆ ಬ್ಯಾಂಕ್‍ನಿಂದ ಯಾವುದೇ ಸಾಲ ಸಿಕ್ಕಿಲ್ಲ.
Advertisement
Advertisement
ನಾಗರಾಜ್ ಲಮಾಣಿ ಮನೆಯ ಸಮೀಪದಲ್ಲಿಯ ಮೂರು ಗುಂಟೆ ಜಮೀನಿದ್ದು, ಅದರಲ್ಲಿ ಕುರಿಗಳಿಗೆ ಶೆಡ್ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದಾನೆ. ಸದ್ಯ ಜಮೀನಿನಲ್ಲಿ ಸೀರೆಯನ್ನ ಕಟ್ಟಿ ಅದರ ಒಳಗೆ ಕುರಿಯನ್ನ ಬಿಟ್ಟು ಸಾಕಾಣಿಕೆ ಮಾಡುತ್ತಿರೋ ಸ್ವಾಭಿಮಾನಿ ಅಂಗವಿಕಲ ಬ್ಯಾಂಕ್‍ಗೆ ಬೇಕಾದ ಎಲ್ಲಾ ದಾಖಲೆಗಳನ್ನ ನೀಡುತ್ತೇನೆ ದಯಮಾಡಿ ಸಾಲ ಸಹಾಯ ಕಲ್ಪಿಸಿ ಎಂದು ಪಬ್ಲಿಕ್ ಟಿವಿಯ ಮೊರೆ ಬಂದಿದ್ದಾನೆ.
Advertisement
ವಿಕಲಚೇತನಾದ್ರೂ ಸ್ವಾಭಿಮಾನದ ಜೀವನ ಮಾಡಲು ನಾಗರಾಜ್ ನಾನು ಕುರಿ ಸಾಕಾಣಿಕೆ ಮಾಡುವ ಮಹಾದಾಸೆಯನ್ನು ಹೊಂದಿದ್ದು, ಇತನ ಸ್ವಾಭಿಮಾನದ ಸಕಾರ್ಯಕ್ಕೆ ಸ್ಫೂರ್ತಿ ತುಂಬಲು ಈ ಸ್ಟೋರಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
Advertisement
https://www.youtube.com/watch?v=k7jgNDPBpK8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv