ರಾಮನಗರ: ಅಂಗವಿಕಲತೆಯನ್ನು ಮೆಟ್ಟಿ ನಿಂತು ಪಿಯುಸಿ ಪಾಸ್ ಮಾಡಿದ್ದಾರೆ. ಯಾರಿಗೂ ಹೊರೆಯಾಗಬಾರದೆಂಬ ಛಲವನ್ನು ಹೊಂದಿರುವ ಇವರು ಮೊಬೈಲ್ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಆದರೆ ಈಗ ಒಂದು ಟ್ರೈಸಿಕಲ್ ಕೊಡಿಸಿ ಅಂತಾ ಸಹಾಯ ಕೇಳಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಚನ್ನಪಟ್ಟಣ ತಾಲೂಕಿನ ಪಟ್ಲು ಗ್ರಾಮದ ನಿವಾಸಿಯಾಗಿರುವ ಶರತ್, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂದು ನಿರ್ಧರಿಸಿ ಮೊಬೈಲ್ ಶಾಪ್‍ವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದಾರೆ. ಆದರೆ ಕೆಲಸಕ್ಕೆ ತೆರಳಲು ಓಡಾಡೋದೇ ಕಷ್ಟವಾಗಿದೆ. ಅದ್ದರಿಂದ ಯಾರಾದರೂ ದಾನಿಗಳು ಒಂದು ಟ್ರೈಸಿಕಲ್ ಕೊಡಿಸಿ ಅಂತಾ ಸಹಾಯ ಕೇಳ್ತಿದ್ದಾರೆ.
Advertisement
Advertisement
ಅಂದ ಹಾಗೇ ಶರತ್ ಅವರು ಚಿಕ್ಕಂದಿನಲ್ಲಿಯೇ ತಾಯಿ ಕಳೆದುಕೊಂಡಿದ್ದು, ಕಳೆದ ಐದು ವರ್ಷಗಳ ಹಿಂದೆ ತಂದೆಯೂ ಕೂಡಾ ಸಾವನ್ನಪ್ಪಿದ್ದಾರೆ. ಚಿಕ್ಕಮ್ಮನ ಆಶ್ರಯದಲ್ಲಿ ಜೀವನ ಸಾಗಿಸುತ್ತಿರುವ ಶರತ್ ಅವರಿಗೆ ಯಾರಿಗೂ ಹೊರೆಯಾಗಬಾರದೆಂಬ ಛಲವಿದೆ. ಕಾಲೇಜಿಗೆ ಹೋಗುವ ಸಮಯದಲ್ಲಿ ಸ್ಥಳೀಯರೇ ಆತನಿಗೆ ನೆರವಾಗುತ್ತಿದ್ದರು. ಅಲ್ಲದೇ ಕೆಲಸಕ್ಕೆ ಹೋಗುವಾಗಲೂ ಸಹ ಶರತ್‍ನ ನೆರವಿಗೆ ನಿಂತಿದ್ದಾರೆ. ಆದರೆ ಪ್ರತಿನಿತ್ಯ ಶರತ್‍ನ ನೆರವಿಗೆ ನಿಲ್ಲೋಕೆ ಅವರಿಗೂ ಸಹ ಕಷ್ಟವಿದೆ.
Advertisement
ಶರತ್ ಅವರಿಗೆ ದುಡಿದು ಛಲದಿಂದ ತನ್ನ ಕಾಲ ಮೇಲೆ ನಿಲ್ಲುವ ಹೆಬ್ಬಯಕೆ. ಆದರೆ ಓಡಾಟದ ಸಮಸ್ಯೆ ಇರುವುದರಿಂದ ಯಾರಾದರೂ ದಾನಿಗಳು ನೆರವು ನೀಡಿ ಛಲದಿಂದ ಬದುಕಲು ನೆರವಾಗಿ ಅನ್ನುವುದು ಪಬ್ಲಿಕ್ ಟಿವಿ ಆಶಯ.
Advertisement
https://www.youtube.com/watch?v=Gd5DG7eM0Gs