ಬಳ್ಳಾರಿ: ಪಬ್ಲಿಕ್ ಟಿವಿಯಲ್ಲಿ ಲಂಚ ಪ್ರಕರಣ ವರದಿ ಆಗುತ್ತಿದ್ದಂತೆ ಹಗರಿಬೊಮ್ಮನಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಬಳ್ಳಾರಿ ಎಸ್‍ಪಿ ಅರುಣ್ ರಂಗರಾಜನ್ ಆದೇಶ ಹೊರಡಿಸಿದ್ದಾರೆ.
ಪಿಎಸ್‍ಐ ಪುಲ್ಲಯ್ಯ ರಾಠೋಡ್ ಹಾಗೂ ಎಎಸ್‍ಐ ಪರಮೇಶ್ವರಪ್ಪ ಅಮಾನತು ಆಗಿರುವ ಪೊಲೀಸ್ ಅಧಿಕಾರಿಗಳು. ಪುಲ್ಲಯ್ಯ ರಾಠೋಡ್ ಹಾಗೂ ಎಎಸ್‍ಐ ಪರಮೇಶ್ವರಪ್ಪ ರೈತರಿಂದ ಲಂಚ ವಸೂಲಿ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಇಬ್ಬರು ಅಧಿಕಾರಿಗಳು ಟ್ರ್ಯಾಕ್ಟರ್ ಗಳನ್ನು ಹಿಡಿದು, ಪ್ರಕರಣ ದಾಖಲಿಸಿ 500 ರೂ. ದಂಡ ವಿಧಿಸುತ್ತಿದ್ದರು. ಆದರೆ ರೈತರು ಹಾಗೂ ಮಾಲೀಕರಿಂದ 5 ಸಾವಿರ ರೂ., 10 ಸಾವಿರ ರೂ. ಲಂಚ 
ಮಂಗಳವಾರ ಪಿಎಸ್‍ಐ ಪುಲ್ಲಯ್ಯ ಹಾಗೂ ಎಎಸ್‍ಐ ಪರಮೇಶ್ವರಪ್ಪ ಇಬ್ಬರು ಸೇರಿ ಲಂಚ ವಸೂಲಿ ಮಾಡುತ್ತಿದ್ದಾಗ ಮಾನವ ಹಕ್ಕುಗಳ ಸಂರಕ್ಷಣಾ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚನ್ನವೀರ ಅವರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ವಿಡಿಯೋಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್ ಅವರಿಗೆ ನೀಡಿ, ಲಂಚ ವಸೂಲಿ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ದೂರು ಸಲ್ಲಿಸಿದ್ದರು. ಪ್ರಕರಣದ ಕುರಿತು ಪಬ್ಲಿಕ್ ಟಿವಿಯಲ್ಲಿ ವರಿದಿಯಾಗುತ್ತಿದ್ದಂತೆ ಬಳ್ಳಾರಿ ಎಸ್‍ಪಿ ಅಮಾನತು ಆದೇಶ ಹೊರಡಿಸಿದ್ದಾರೆ.

