– ಕ್ಯಾಂಟಿನ್ ಓಪನ್ ಮಾಡದಿದ್ರೂ ಪುಸ್ತಕದಲ್ಲಿದೆ ಊಟ-ತಿಂಡಿ ಲೆಕ್ಕ
ಮೈಸೂರು: ಸಿಎಂ ಕನಸಿನ ಯೋಜನೆ ಇಂದಿರಾ ಕ್ಯಾಂಟಿನ್‌ಗೆ (Indira Canteen) ಸಿಎಂ ತವರಲ್ಲೇ ಬ್ರೇಕ್ ಬಿದ್ದಿದೆ. ಅದು ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ (Tanveer Sait) ಪ್ರತಿನಿಧಿಸಿರುವ ನರಸಿಂಹರಾಜ ಕ್ಷೇತ್ರದಲ್ಲೇ ಕ್ಯಾಂಟೀನ್‌ಗಳಿಗೆ ಬ್ರೇಕ್ ಹಾಕಿರುವುದು ಅಚ್ಚರಿಯ ಸಂಗತಿ.
ಮೈಸೂರಿನ (Mysuru) ನರಸಿಂಹರಾಜ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟಿನ್ ಗಳು ನಿಷ್ಕ್ರಿಯಗೊಂಡಿವೆ. ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಮುಚ್ಚಿ ಹೋಗಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಕ್ಯಾಂಟಿನ್ ನಿರ್ಮಾಣ ಮಾಡಿದ್ರೂ ಜನರಿಗೆ ಪ್ರಯೋಜನವಾಗುತ್ತಿಲ್ಲ. ಕ್ಯಾಂಟೀನ್ ಸುತ್ತಲು ಗಿಡಗಂಟಿಗಳು ಬೆಳೆದುಕೊಂಡಿವೆ. ಕ್ಯಾಂಟೀನ್‌ನ ಕಿಟಕಿ, ಬಾಗಿಲುಗಳು ಮುರಿದ ಸ್ಥಿತಿಯಲ್ಲಿವೆ. ಬಡವರು ವಾಸಿಸುವ ಸ್ಥಳದಲ್ಲೇ ಕ್ಯಾಂಟೀನ್ ನಿರ್ಮಾಣಗೊಂಡಿದ್ದರೂ ಉಪಯೋಗಕ್ಕೆ ಬಾರದಂತಾಗಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ʻಪಬ್ಲಿಕ್ ಟಿವಿʼ ಬಿಗ್ ಇಂಪ್ಯಾಕ್ಟ್: ನರಸಿಂಹರಾಜ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್ ಆವರಣದಲ್ಲಿ ಅಶುಚಿತ್ವ ತಾಂಡವವಾಡುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ವರದಿ ಬಿತ್ತರಿಸಿದ ಕೆಲವೇ ಕ್ಷಣಗಳಲ್ಲಿ ಎಚ್ಚೆತ್ತ ಪಾಲಿಕೆ ಅಧಿಕಾರಿಗೂ (Mysore City Corporation Officers) ಇಂದಿರಾ ಕ್ಯಾಂಟಿನ್ ಹೊರ ಆವರಣ ಮತ್ತು ಒಳ ಆವರಣದ ಸ್ವಚ್ಚತೆ ಮಾಡಿಸಲು ಮುಂದಾಗಿದ್ದಾರೆ. ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳೇ ಈ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
Advertisement
ಬಯಲಾಯ್ತು ಕಳ್ಳ ಲೆಕ್ಕ: ಮೈಸೂರಿನ ಎನ್.ಆರ್. ಕ್ಷೇತ್ರದ ಜೋಡಿ ತೆಂಗಿನ ಮರ ರಸ್ತೆಯಲ್ಲಿರೋ ಇಂದಿರಾ ಕ್ಯಾಂಟಿನ್ ಮುಚ್ಚಿ 6 ತಿಂಗಳಾಗಿದೆ. ಆದ್ರೆ ಇಂದಿರಾ ಕ್ಯಾಂಟಿನ್‌ನ ಫುಡ್ ರಿಜಿಸ್ಟರ್ ಪುಸ್ತಕದಲ್ಲಿ ಮಾತ್ರ ಇಂದಿನವರೆಗೂ ಊಟ-ತಿಂಡಿ ಕೊಟ್ಟಿದ್ದೇವೆ ಎಂಬ ಲೆಕ್ಕ ಬರೆಯಲಾಗಿದೆ. ಅಲ್ಲಿಗೆ ಕಳ್ಳ ಲೆಕ್ಕ ಇದು ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.