ಬೆಂಗಳೂರು: ಇಂದಿರಾ ಕ್ಯಾಂಟೀನ್‍ನ ಮತ್ತೊಂದು ಮಹಾ ಕರ್ಮಕಾಂಡ ಬಟಾ ಬಯಲಾಗಿದೆ. ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಿಬಿಎಂಪಿ ಬಂಡವಾಳ ಬಯಲಾಗಿದೆ. ಕರ್ನಾಟಕದಲ್ಲಿ ಕನ್ನಡಿಗರರಿಗೆ ಕೆಲಸ ಕೊಡದೇ ಹೊರರಾಜ್ಯದವರಿಗೆ ಸರ್ಕಾರ ಮಣೆ ಹಾಕಿದೆ.
Advertisement
ಆಂಧ್ರ ಹಾಗೂ ದೆಹಲಿ ಮೂಲದ ಕಂಪನಿಗಳಿಗೆ ಅಡುಗೆ ಟೆಂಡರ್ ನೀಡಲಾಗಿದೆ. ಈಗ ಟೆಂಡರ್ ಪಡೆದ ಕಂಪೆನಿಗಳೆಲ್ಲಾ ನೇಮಿಸಿರೋದು ಅನ್ಯಭಾಷಿಕರನ್ನ. ಅಡುಗೆ ಪೂರೈಕೆ ಮಾಡೋರು, ಬಡಿಸೋರೆಲ್ಲಾ ಹೈದ್ರಾಬಾದ್ ಹಾಗೂ ಕೊಲ್ಕತ್ತಾದವರು. ಈ ಎಲ್ಲಾ ವಿಚಾರ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಹಿರಂಗವಾಗಿದೆ.
Advertisement
Advertisement
ಇಂದಿರಾ ಕ್ಯಾಂಟಿನ್ ಗಾಗಿ ಅರಮನೆ ಮೈದಾನದಲ್ಲಿ ಅಡುಗೆ ಮಾಡುತ್ತಿರುವ ವಿಚಾರದ ಬಗ್ಗೆ ಬಿಬಿಎಂಪಿ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಪಬ್ಲಿಕ್ ಟಿವಿ ಇಂದಿರಾ ಕ್ಯಾಂಟಿನ್ ಅಸಲಿ ಸುದ್ದಿ ಪ್ರಸಾರ ಮಾಡಿದ ಬಳಿಕ ಶುಕ್ರವಾರ ಮಧ್ಯಾಹ್ನ ಬಿಬಿಎಂಪಿ ಮೇಯರ್ ಪದ್ಮಾವತಿ ಮತ್ತು ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.
Advertisement
ನಮ್ಮ ಕಡೆಯಿಂದ ತಪ್ಪಾಗಿದೆ. ನಾವು ಮೊದಲೇ ಹೇಳಬೇಕಿತ್ತು. ಆಡುಗೆ ಮನೆಗಳು ಇನ್ನೂ ತಯಾರಾಗಿಲ್ಲ. ಹದಿನೈದು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು. ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ನಾವು ಯಶಸ್ಸು ಕಂಡಿದ್ದು, ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ಯೋಜನೆ ಸಂಪೂರ್ಣವಾಗಿ ಜಾರಿಯಾಗಬೇಕಾದರೆ ಸ್ವಲ್ಪ ಕಾಲಾವಲಾಶ ಬೇಕಾಗುತ್ತದೆ. ನಿರೀಕ್ಷೆಗಿಂತ ಹೆಚ್ಚು ಜನರು ಬರುತ್ತಿದ್ದಾರೆ. ಆದರೆ ನಾವು ಮೊದಲೇ ನಿಗದಿ ಪಡಿಸಿದ ಸಂಖ್ಯೆ ಅನುಗುಣವಾಗಿ ಆಹಾರವನ್ನು ವಿತರಣೆ ಮಾಡುತ್ತೇವೆ ಎಂದು ಮೇಯರ್ ಪದ್ಮಾವತಿ ಹೇಳಿದರು.
ರಾಜ್ಯ ಸರ್ಕಾರದಿಂದ 200 ಕೋಟಿ ಹಣ ನೀಡಲಾಗಿದೆ. ಟೆಂಡರ್ ನಲ್ಲಿ 7 ಜನ ಭಾಗಿಯಾಗಿದ್ದರು. ಇದರಲ್ಲಿ ಅತ್ಯಂತ ಕಡಿಮೆ ಕೋಟ್ ಮಾಡಿದ್ದವರಿಗೆ ನಾವು ಟೆಂಡರ್ ನೀಡಿದ್ದೇವೆ. ಕೇಟರಿಂಗ್ ಸರ್ವೀಸ್ ಗಳ ಕುರಿತಂತೆ ವೆಬ್‍ಸೈಟ್ ಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.
Indira Canteen: Mayor Admits Mistake In Distribution Of Food: https://t.co/ewJ7mmOz5r via @YouTube
— PublicTV (@publictvnews) August 18, 2017
ಇಂದಿರಾ ಕ್ಯಾಂಟೀನ್ ಅಸಲಿಯತ್ತು ಬಯಲಿಗೆಳೆದಿದ್ದಕ್ಕೆ ನಟ ಜಗ್ಗೇಶ್ ಹೀಗಂದ್ರು! https://t.co/H9jL7LrxpJ#Sandalwood #Actor #Jaggesh #IndiraCanteen pic.twitter.com/jf0Cn6Hvec
— PublicTV (@publictvnews) August 18, 2017