– ಮೂರು ದಿನಗಳ ಕಾಲ ನಡೆಯಲಿದೆ ಕಾರ್ಯಕ್ರಮ
– ಆಗಮಿಸಿ ಉಚಿತವಾಗಿ ಕಾಲೇಜುಗಳ ಮಾಹಿತಿ ಪಡೆಯಿರಿ
– 3ನೇ ಆವೃತ್ತಿಯ ಪಬ್ಲಿಕ್ ಟಿವಿ ವಿದ್ಯಾಪೀಠ
ಬೆಂಗಳೂರು: ನಗರದಲ್ಲಿ ಬಹಳಷ್ಟು ಕಾಲೇಜುಗಳಿವೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಮಕ್ಕಳಿಗೆ ಬೇಕಾದ ಕೋರ್ಸ್ ಇದ್ಯಾ? ಕೋರ್ಸ್ ಇದ್ದರೆ ಶುಲ್ಕ ಎಷ್ಟು ಆಗುತ್ತದೆ? ಈ ಎಲ್ಲ ಪ್ರಶ್ನೆಗಳನ್ನು ಇಟ್ಟುಕೊಂಡು ಪೋಷಕರಾದ ನೀವು ಕಾಲೇಜುಗಳ ಮಾಹಿತಿಯನ್ನು ಕಲೆ ಹಾಕುತ್ತಿರಬಹುದು. ಪ್ರತಿಯೊಂದು ಕಾಲೇಜುಗಳ ಮಾಹಿತಿಯನ್ನು ಪಡೆಯುವುದು ಕಷ್ಟದ ಕೆಲಸವೂ ಹೌದು. ಆದರೆ ನೀವು ಮಾಹಿತಿ ಪಡೆಯಲು ಕಷ್ಟ ಪಡಬೇಕಿಲ್ಲ. ಪಬ್ಲಿಕ್ ಟಿವಿ ಆಯೋಜಿಸುತ್ತಿರುವ ಕಾರ್ಯಕ್ರಮಕ್ಕೆ ನೀವು ಭೇಟಿ ನೀಡಿದರೆ ನಿಮ್ಮ ಎಲ್ಲ ಸಮಸ್ಯೆಗಳು ಸ್ಥಳದಲ್ಲೇ ಸುಲಭವಾಗಿ ಪರಿಹಾರವಾಗಲಿದೆ.
ಪಬ್ಲಿಕ್ ಟಿವಿ ಮೂರು ದಿನಗಳ ಕಾಲ ‘ವಿದ್ಯಾಪೀಠ’ದ ಹೆಸರಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮನ್ನು ಆಯೋಜಿಸಿದೆ. ಬೆಂಗಳೂರು ನಗರದಲ್ಲಿರುವ ಅರಮನೆ ಮೈದಾನದಲ್ಲಿ ಮೇ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.
Advertisement
Advertisement
ಎರಡು ಬಾರಿ ಯಶಸ್ವಿಯಾಗಿ ಆಯೋಜನೆಗೊಂಡಿದ್ದ ವಿದ್ಯಾಪೀಠ ಈ ಬಾರಿ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹಿಂದಿನ ಎರಡು ಕಾರ್ಯಕ್ರಮ 2 ದಿನಗಳ ಕಾಲ ನಡೆದಿತ್ತು. ಎರಡು ದಿನಕ್ಕೆ ಭಾರೀ ಸ್ಪಂದನೆ ಸಿಕ್ಕಿದ ಹಿನ್ನೆಲೆಯಲ್ಲಿ ಈ ಬಾರಿ ಮೂರು ದಿನಗಳ ಕಾಲ ವಿದ್ಯಾಪೀಠ ವಿಶೇಷ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳು ಆಯೋಜನೆಗೊಂಡಿದೆ.
Advertisement
ಯಾರೆಲ್ಲ ಭಾಗವಹಿಸುತ್ತಾರೆ?
– ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್
– ಆರ್ಕಿಟೆಕ್ಚರ್
– ಕಾಮರ್ಸ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು
– ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು
– ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್
– ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು
– ಸಮೂಹ ಸಂವಹನ
– ಎಂಬಿಎ ಇನ್‍ಸ್ಟಿಟ್ಯೂಷನ್
– ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು
Advertisement
ಯಾರೆಲ್ಲ ಆಗಮಿಸಬಹುದು?
– ಕೌನ್ಸೆಲರ್ ಗಳು
– ಶಿಕ್ಷಣ ತಜ್ಞರು
– ಹಣಕಾಸು ಸಲಹೆಗಾರರು
– ಪೋಷಕರು
– ಪಿಯುಸಿ ವಿದ್ಯಾರ್ಥಿಗಳು
– ಪದವಿ ಓದುತ್ತಿರುವ ವಿದ್ಯರ್ಥಿಗಳು
– ಉದ್ಯೋಗದಲ್ಲಿರುವ ಉದ್ಯೋಗಿಗಳು
ಏನೆಲ್ಲ ಸ್ಪರ್ಧೆ ಇರಲಿದೆ?
ಚರ್ಚಾ ಸ್ಪರ್ಧೆ, ರಸಪ್ರಶ್ನೆ (ಕ್ವಿಜ್), ಗಾಯನ ಸ್ಪರ್ಧೆ, ಪ್ರೊಜೆಕ್ಟ್ ಅನಾವರಣ, ಪೇಂಟಿಂಗ್ ಸ್ಪರ್ಧೆ ನಡೆಯಲಿದೆ. ಈ ಎಲ್ಲ ಸ್ಪರ್ಧೆಗಳಿಗೆ ಪ್ರವೇಶ ಉಚಿತವಾಗಿದ್ದು, 17 ರಿಂದ 22 ವರ್ಷ ವಯಸ್ಸಿನ ಒಳಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. 95389 77753 (ಅಕ್ಷಯ್), 99000 30944 (ನಿತಿನ್) ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಮತ್ತು ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ದಿನಾಂಕ : ಮೇ 10, 11, 12
ಸ್ಥಳ : ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು
ಸಮಯ : ಬೆಳಗ್ಗೆ 9.30 ರಿಂದ ಸಂಜೆ 6.00 ಗಂಟೆಯವರೆಗೆ
ಪ್ಲಾಟಿನಂ ಪ್ರಯೋಜಕರು:
ರೇವಾ ವಿಶ್ವವಿದ್ಯಾಲಯ, ಗಾರ್ಡನ್ ಸಿಟಿ ವಿಶ್ವವಿದ್ಯಾಲಯ, ಗೀತಂ ವಿಶ್ವವಿದ್ಯಾಲಯ, ಶ್ರೀ ವೆಂಕಟೇಶ್ವರ ಕಾಲೇಜ್ ಆಫ್ ಎಂಜಿನಿಯರಿಂಗ್
ಗೋಲ್ಡ್ ಪ್ರಾಯೋಜಕರು:
ಕೇಂಬ್ರಿಡ್ಜ್ ಇನ್‍ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ರಾಮಯ್ಯ ಇನ್‍ಸ್ಟಿಟ್ಯೂಷನ್, ಏಮ್ಸ್ ಇನ್‍ಸ್ಟಿಟ್ಯೂಷನ್, ಸಿಎಂಆರ್ ವಿಶ್ವವಿದ್ಯಾಲಯ, ಎಕ್ಸೆಲ್ ಅಕಾಡೆಮಿಕ್ಸ್
ಸಿಲ್ವರ್ ಪ್ರಾಯೋಜಕರು:
ರಾಜರಾಜೇಶ್ವರಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಸೌಂದರ್ಯ ಕಾಲೇಜ್, ಪಿಇಎಸ್ ವಿಶ್ವವಿದ್ಯಾಲಯ, ಆಚಾರ್ಯ ಬೆಂಗಳೂರು ಬಿ ಸ್ಕೂಲ್, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಆಕ್ಸ್‍ಫರ್ಡ್ ಕಾಲೇಜ್, ಕೃಪಾನಿಧಿ ಕಾಲೇಜ್, ದಯಾನಂದ ಸಾಗರ್ ವಿಶ್ವವಿದ್ಯಾಲಯ, ಲೋಹಿತ್ ಅಕಾಡೆಮಿ ಕಾಲೇಜ್ ಆಫ್ ಕಾಮರ್ಸ್
ಕ್ರಿಯೇಟಿವ್ ಸ್ಟಾಲ್:
ನ್ಯೂ ಹಾರಿಜನ್ ಕಾಲೇಜ್ ಆಫ್ ಎಂಜಿನಿಯರಿಂಗ್
ಯಾವೆಲ್ಲ ಸ್ಟಾಲ್‍ಗಳು ಇರಲಿವೆ?
ಆಚಾರ್ಯ ಐಟಿ, ಆರ್‍ಆರ್ ಇನ್‍ಸ್ಟಿಟ್ಯೂಷನ್, ವಿಷನ್ ಪಿಯು ಕಾಲೇಜ್, ಸಿಂಧಿ ಕಾಲೇಜ್, ಕಮ್ಯೂನಿಟಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಕೆಎಸ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಇಂಡಿಯನ್ ಅಕಾಡೆಮಿ, ಬೃಂದಾವನ್ ಕಾಲೇಜ್, ವಿಬಿಆರ್ ಅಕಾಡೆಮಿ, ವೇಮನ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯ, ಐಎಸ್‍ಬಿಆರ್ ಕಾಲೇಜ್, ನಿಟ್ಟೆ ಮೀನಾಕ್ಷಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ ಕಾಲೇಜ್ ಗ್ರೂಪ್ ಇನ್‍ಸ್ಟಿಟ್ಯೂಷನ್ಸ್, ಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಎಂಎಸ್ ರಾಮಯ್ಯ ಫೌಂಡೇಶನ್, ಸಪ್ತಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಐಡಿಪಿ ಎಜುಕೇಷನ್, ಏಟ್ರಿಯಾ ಇನ್‍ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ಅರಿಹಂತ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಸ್ಕೂಲಾಸ್ಟಿಕ್ ಓವರ್‍ಸೀಸ್ ಎಜುಕೇಶನ್, ಶೇಷಾದ್ರಿಪುರಂ ಕಾಲೇಜ್, ಯುನಿವರ್ಸಲ್ ಕೋಚಿಂಗ್ ಸೆಂಟರ್ ಇನ್ನಿತರ ಕಾಲೇಜುಗಳು ಭಾಗವಹಿಸಲಿವೆ.