ಬೆಂಗಳೂರು: ನೀವು ಆಹಾರ ಪ್ರಿಯರೇ? ಬಗೆ ಬಗೆಯ ಆಹಾರದ ಬಗ್ಗೆ ನಿಮಗೆ ತಿಳಿಯಬೇಕೇ? ಹಾಗಾದರೆ ಪಬ್ಲಿಕ್ ಟಿವಿ ಆಯೋಜಿಸಿರುವ ಫುಡ್ ಫೆಸ್ಟ್‌ಗೆ ಬನ್ನಿ.
ಪಬ್ಲಿಕ್ ಟಿವಿ ಜನವರಿ 26 ಮತ್ತು 27ರಂದು ಆಹಾರ ಮೇಳವನ್ನು ಆಯೋಜಿಸಿದೆ. ಆಹಾರ ಮೇಳ ಮಲ್ಲೇಶ್ವರಂ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಒಂದೇ ಸೂರಿನಡಿಯಲ್ಲಿ 40ಕ್ಕೂ ಹೆಚ್ಚು ಆಹಾರ ಮಳಿಗೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶೇಷ ಆಹಾರ ಮೇಳದಲ್ಲಿ ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.
ಈ ಮೇಳಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಇಷ್ಟವಾಗುವ ಆಹಾರಗಳನ್ನು ತಯಾರಿಸಿ ಸರ್ವ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡು ರೀತಿಯ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10:30 ರಿಂದ ರಾತ್ರಿ 9 ಗಂಟೆಯವರೆಗೆ ಈ ಆಹಾರ ಮೇಳಕ್ಕೆ ಭೇಟಿ ನೀಡಬಹುದು.
ಈ ಕಾರ್ಯಕ್ರಮದ ಬಗ್ಗೆ ಪಬ್ಲಿಕ್ ಟಿವಿಯ ಸಿಒಒ ಹರೀಶ್ ಕುಮಾರ್ ಮಾತನಾಡಿ, ಗಣರಾಜ್ಯೋತ್ಸವದ ನಿಮಿತ್ತ ಒಂದು ವಿಭಿನ್ನ ಕಾರ್ಯಕ್ರಮವನ್ನು ಪಬ್ಲಿಕ್ ಟಿವಿಯಿಂದ ಆಯೋಜಿಸಲಾಗಿದೆ. ಹೆಣ್ಣು ಮಕ್ಕಳಿಗೆ ರಂಗೋಲಿ ಸ್ಪರ್ಧೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಕೂಡ ಮಾಡಲಾಗಿದೆ. ಈಗಾಗಲೇ ಅನೇಕರು ಎಸ್‍ಎಂಎಸ್ ಹಾಗೂ ವಾಟ್ಸಪ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಈ ಫುಡ್ ಫೆಸ್ಟ್ ಅನ್ನು ಅಂತರಾಷ್ಟ್ರೀಯ ಮಾದರಿಯಲ್ಲಿ ನಡೆಸಲಾಗುತ್ತಿದೆ. ಇಲ್ಲಿ ವಿವಿಧ ಬಗೆಯ ತಿನಿಸು, ಆಹಾರ, ಪಾನಿಯ ಸಿಗುತ್ತದೆ ಎಂದು ತಿಳಿಸಿದರು.
ಆಹಾರ ಮೇಳದಲ್ಲಿ ಏನಿರಲಿದೆ?
ದಕ್ಷಿಣ ಭಾರತದ ತಿನಿಸು, ಉತ್ತರ ಭಾರತದ ತಿನಿಸು, ಕಾಂಟಿನೆಂಟಲ್, ಸಮುದ್ರ ಆಹಾರ, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಗ್ರಿಲ್ಸ್ ಮತ್ತು ರೋಲ್ಸ್, ಮಸಾಲೆ ಮತ್ತು ಕಾಂಡಿಮೆಂಟ್ಸ್, ಸಿಹಿತಿಂಡಿ, ಐಸ್‍ಕ್ರೀಂ, ಕಾಫಿ, ಟೀ, ಚಾಟ್ ಇರಲಿದೆ. ಅಷ್ಟೇ ಅಲ್ಲದೇ ಪ್ರತಿ 30 ನಿಮಿಷಗಳಿಗೊಮ್ಮೆ ನೋಂದಾಯಿಸಲ್ಪಟ್ಟ ಸಂದರ್ಶಕರಿಗೆ ಲಕ್ಕಿ ಡ್ರಾ ಮೂಲಕ ಉಡುಗೊರೆ ಸಿಗಲಿದೆ.
https://youtu.be/KMbntfnjIPk
ರಂಗೋಲಿ ಸ್ಪರ್ಧೆ:
ಸ್ಥಳದಲ್ಲಿಯೇ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮಲ್ಲೇಶ್ವರಂ 6ನೇ ಕ್ರಾಸ್ ನಲ್ಲಿ ಜನವರಿ 26ರಂದು ಶನಿವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಸ್ಪರ್ಧಿಗಳು 96066 66031 ವಾಟ್ಸಪ್ ಸಂಖ್ಯೆಗೆ ಮೆಸೇಜ್ ಮಾಡಿ ಹೆಸರನ್ನು ನೋಂದಾಯಿಸಬೇಕಾಗುತ್ತದೆ. ಮೊದಲು ರಿಜಿಸ್ಟರ್ ಮಾಡಿಕೊಳ್ಳುವ 100 ಸ್ಪರ್ಧಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು.
ರಂಗೋಲಿ ಸ್ಪರ್ಧೆಯ ನಿಯಮಗಳು:
* ಮಹಿಳೆಯರಿಗೆ ಮಾತ್ರ ಅವಕಾಶ.
* 120 ನಿಮಿಷದಲ್ಲಿ ರಂಗೋಲಿ ಬಿಡಿಸಬೇಕು.
* ರಿಜಿಸ್ಟರ್ ಮಾಡಿಕೊಂಡಿದ್ದ ಸ್ಪರ್ಧಿಗಳ ಹೆಸರು ಖಚಿತವಾದವರು ಶನಿವಾರ ಬೆಳಗ್ಗೆ 7.30ಕ್ಕೆ ಸ್ಥಳದಲ್ಲಿ ಹಾಜರಿರಬೇಕು.
* ನಾವು ರಂಗೋಲಿ ಪುಡಿಯನ್ನು ಮಾತ್ರ ನೀಡುತ್ತೇವೆ.
* ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ವಿಷಯವನ್ನು ರಂಗೋಲಿಯಲ್ಲಿ ಬಿಡಿಸಬೇಕು.
* ಸ್ಪರ್ಧೆಯಲ್ಲಿ ಭಾಗವಹಿಸುವರು ತಾವೇ ತಮಗೆ ಬೇಕಾದ ವಸ್ತುಗಳನ್ನು ತರಬೇಕು ಮತ್ತು ಒಂದೇ ಮಾದರಿಯನ್ನು ಬಳಸಬೇಕು. ಬಣ್ಣಗಳು/ ಪುಷ್ಪ ದಳಗಳು/ ಪುಡಿ/ ಧಾನ್ಯಗಳು/ ಅಕ್ಕಿ ಇತ್ಯಾದಿಗಳ ಪೈಕಿ ಒಂದು ವಸ್ತುವನ್ನು ಮಾತ್ರ ಬಳಸಿ ರಂಗೋಲಿ ಹಾಕಬೇಕು.
* ಸಂಘಟಕರು ನೀಡುವ ಸ್ಥಳದಲ್ಲಿ ಸ್ಪರ್ಧಿಗಳು ರಂಗೋಲಿಯನ್ನು ಸಿದ್ಧ ಪಡಿಸಬೇಕು.
* ಕೊರೆಯಚ್ಚನ್ನು ಬಳಸುವಂತಿಲ್ಲ.
* ಒಂದು ತಂಡದಲ್ಲಿ ಇಬ್ಬರಿಗೆ ಮಾತ್ರ ಅವಕಾಶ.
* ಸ್ಪರ್ಧೆ ಒಂದೇ ಸುತ್ತಿನಲ್ಲಿ ಮುಗಿಯಲಿದೆ.
* ಸ್ಪರ್ಧಿಗಳು ರಂಗೋಲಿ ಬಿಡಿಸಲು ಯಾವುದೇ ಮುದ್ರಿತ ವಸ್ತುಗಳನ್ನು ಬಳಸುವಂತಿಲ್ಲ.
* ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
https://www.youtube.com/watch?v=Fuyd9Ymu3Cw
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv