ಪುರುಷ ಪಾರಮ್ಯದ ಕ್ಷೇತ್ರಗಳಲ್ಲಿ ಮಹಿಳೆಯರು ಸದೃಢವಾದ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಜಾಹೀರಾತು ಮತ್ತು ಮಾರ್ಕೆಂಟಿಗ್ ವಲಯದಲ್ಲೂ ಇಂದು ಸ್ತ್ರೀಶಕ್ತಿಯನ್ನು ನಾವು ಕಾಣಬಹುದು. ಯಾರಿಗೇನು ಕಮ್ಮಿಯಿಲ್ಲ ಎಂಬಂತೆ ಜಾಹೀರಾತು ಕ್ಷಿತಿಜದಲ್ಲಿ ಮಿನುಗು ತಾರೆಯಾಗಿ ಮಿಂಚುತ್ತಿದ್ದಾರೆ ಆಕಾರ್ ಅಡ್ವರ್ಟೈಸಿಂಗ್ ಕಂಪನಿಯ ಎಂಡಿ ಮಾಲಾ ಮಖೀಜಾ.
ಜಾಹೀರಾತುಗಳು ಪ್ರೇಕ್ಷಕರಲ್ಲಿ ಚಿಂತನೆಗಳನ್ನು ಹಚ್ಚುತ್ತವೆ. ಉತ್ಪನ್ನಗಳನ್ನು ಬಿಕರಿ ಮಾಡುವುದೇ ಜಾಹೀರಾತುಗಳ ಮೂಲ ಉದ್ದೇಶ. ಇಂಥ ಜಾಹೀರಾತುಗಳನ್ನು ಪ್ರಸ್ತುತಪಡಿಸುವಲ್ಲಿ ಹಾಗೂ ಮಾರ್ಕೆಟಿಂಗ್ ಮಾಡುವುದರಲ್ಲಿ ಮಾಲಾ ಮಖೀಜಾ (Mala Vijay Makhija) ಸಿದ್ಧಹಸ್ತರು. ಇದನ್ನೂ ಓದಿ: ಕೃಪಾನಿಧಿ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ಸ್ ಸಂಸ್ಥಾಪಕಿ ಗೀತಾ ಪ್ರಿಯಗೆ ನಾರಿ ನಾರಾಯಣಿ ಪ್ರಶಸ್ತಿ

ಆಕಾರ್ ಅಡ್ವರ್ಟೈಸಿಂಗ್ & ಮಾರ್ಕೆಟಿಂಗ್ ಕಂಪನಿಯು ಇಂದು ದೇಶದಲ್ಲೇ ಹೆಸರುವಾಸಿ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಶಾಖೆಗಳಿವೆ. ಖ್ಯಾತನಾಮ ಕ್ಲೈಂಟ್ಸ್‌ಗಳಿದ್ದಾರೆ. ಜಾಹೀರಾತುಗಳನ್ನು ಜಾಣ್ಮೆಯಿಂದ ಕಟ್ಟಿಕೊಡುವ ಮಾಲಾ ಮಖೀಜಾ ಆ್ಯಡ್ ಲೋಕದಲ್ಲಿ ಚಿರಪರಿಚಿತರು. ಕ್ರಿಯಾತ್ಮಕ ನಾಯಕತ್ವ ಗುಣ ಹೊಂದಿರುವ ಮಾಲಾ ಮಖೀಜಾ ಅವರಿಗೆ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹೆಮ್ಮೆ ಪಡುತ್ತದೆ.
ಪಬ್ಲಿಕ್ ಟಿವಿ (Public TV) ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ (Nari Narayani 2026 Award) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಸಾಧಕಿಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಯರವ ಬುಡಕಟ್ಟು ಜನಾಂಗದ ಆಶಾ ಕಿರಣ ಆಶಾಗೆ ನಾರಿ ನಾರಾಯಣಿ ಪ್ರಶಸ್ತಿ

