ಶರಣ್ಯ ಫಾರ್ಮ್ಸ್. ಫಾರ್ಮ್ ಲ್ಯಾಂಡ್ ಯೋಜನೆಯ ಮುಂಚೂಣಿ ಸಂಸ್ಥೆ. ಹಲವು ಫಾರ್ಮ್ ಲ್ಯಾಂಡ್ ಯೋಜನೆಗಳನ್ನು ಯಶಸ್ವಿಯಾಗಿ ನಿರ್ಮಿಸಿ ಮಾರಾಟ ಮಾಡುವುದರ ಮೂಲಕ ಶರಣ್ಯ ಫಾರ್ಮ್ಸ್ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಹಿಂದಿರುವ ಶಕ್ತಿ ವಿದ್ಯಾರಾಣಿ ಜಯಸ್ವಾಮಿ.

ವಿದ್ಯಾರಾಣಿ ಜಯಸ್ವಾಮಿ ಅವರು ಶರಣ್ಯ ಫಾರ್ಮ್ಸ್‌ನ ಪ್ರಮುಖ ಪಾಲುದಾರರಲ್ಲಿ ಒಬ್ಬರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಚಾಣಾಕ್ಷೆ. ರಿಯಲ್ ಎಸ್ಟೇಟ್‌ನಲ್ಲಿ ಫಾರ್ಮ್ ಹೌಸ್ ಪರಿಕಲ್ಪನೆಯ ಒಂದು ರೀತಿ ಬೆರಗು ಮೂಡಿಸುವಂಥದ್ದು. ಇದನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ವಿದ್ಯಾರಾಣಿ. ಸುಸಜ್ಜಿತ, ಪರಿಸರ ಸ್ನೇಹಿ ಕೃಷಿ ಭೂಮಿಯಲ್ಲಿ ತೋಟದ ಮನೆಯ ಪರಿಕಲ್ಪನೆಯಲ್ಲಿ ಮೂಡಿಬಂದ ಶರಣ್ಯ ಫಾರ್ಮ್ಸ್ ಯೋಜನೆಯು ಗ್ರಾಹಕರನ್ನು ಸೆಳೆಯುತ್ತಿದೆ ಎಂದರೆ ಅದಕ್ಕೆ ವಿದ್ಯಾರಾಣಿ ಅವರ ದೂರದೃಷ್ಟಿ ಪ್ರಮುಖ ಕಾರಣ. ಮಹಿಳಾ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ ವಿದ್ಯಾರಾಣಿ ಅವರಿಗೆ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತದೆ. ಇದನ್ನೂ ಓದಿ: ಶರಣ್ಯ ಫಾರ್ಮ್ಸ್ ರೂವಾರಿಗೆ ವಿದ್ಯಾರಾಣಿ ಜಯಸ್ವಾಮಿಗೆ ನಾರಿ ನಾರಾಯಣಿ ಪ್ರಶಸ್ತಿ
ಪಬ್ಲಿಕ್ ಟಿವಿ (Public TV) ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ (Nari Narayani 2026 Award) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಸಾಧಕಿಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

