ಜಗತ್ತಿನ ಯಾವ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಿಲ್ಲ ಹೇಳಿ..!? ಸಮಾಜದ ಎಲ್ಲಾ ವಲಯಗಳಲ್ಲೂ ಇಂದು ಸ್ತ್ರೀಶಕ್ತಿಯನ್ನು ಕಾಣಬಹುದು. ಸವಾಲುಗಳನ್ನು ಮೆಟ್ಟಿನಿಂತು.., ಇತರರಿಗೂ ಮಾದರಿಯಾಗಿ ಸಾರ್ಥಕ ಜೀವನ ಸಾಗಿಸುತ್ತಿರುವ ಅದೆಷ್ಟೋ ಮಹಿಳೆಯರು ನಮ್ಮೆದುರಿದ್ದಾರೆ. ಇಂಥ ಸಾಧಕಿಯರ ಸಾಲಿಗೆ ಸೇರಿತ್ತಾರೆ ಡಾ.ನಫೀಸಾ ಅಹಮದ್…!!
ಪ್ರೆಸಿಡೆನ್ಸಿ ಗ್ರೂಪ್ ಆಫ್ ಸ್ಕೂಲ್ಸ್..! ಬೆಂಗಳೂರಿನಲ್ಲಿ ಈ ಹೆಸರು ಚಿರಪರಿಚಿತ..! ಪ್ರೆಸಿಡೆನ್ಸಿ ಶಾಲೆಗಳು ಇಂದು ಬೆಂಗಳೂರಿನಲ್ಲಿ ಇಷ್ಟು ಪ್ರಸಿದ್ಧಿ ಗಳಿಸುವುದರ ಹಿಂದಿರುವ ಅಗಾಧ ಶಕ್ತಿಯೇ ಡಾ.ನಫೀಸಾ ಅಹಮದ್ (R.Nafeesa Ahmed). ಇವರು ಪ್ರೆಸಿಡೆನ್ಸಿ ಗ್ರೂಪ್ ಆಫ್ ಸ್ಕೂಲ್ಸ್‌ನ ನಿರ್ದೇಶಕಿಯಾಗಿದ್ದಾರೆ. ದೇಶ-ವಿದೇಶಗಳಲ್ಲಿ ಜ್ಞಾನಾರ್ಜನೆ ಪಡೆದು ಉತ್ತಮ ಶಿಕ್ಷಣ ತಜ್ಞೆಯಾಗಿ ಹೊರಹೊಮ್ಮಿದ್ದಾರೆ. ಪ್ರೆಸಿಡೆನ್ಸಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ.ನಿಸಾರ್ ಅಹ್ಮದ್ ಇವರ ತಂದೆ. 1976ರಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದಿದೆ. ವಿದ್ಯಾರ್ಜನೆಯ ಪರಂಪರೆಯನ್ನು ಡಾ.ನಫೀಸಾ ಅಹಮದ್ ಅವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೀಜ ಮಾತೆ ಪಾಪಮ್ಮಗೆ ನಾರಿ ನಾರಾಯಣಿ ಗೌರವ

ಅವರು ಶಿಕ್ಷಣೆ ತಜ್ಞೆಯೂ ಹೌದು. ಅತ್ಯುತ್ತಮ ವಾಗ್ಮಿಯೂ ಆಗಿದ್ದಾರೆ. ಅಷ್ಟೇ ಅಲ್ಲದೇ ಸ್ಫೂರ್ತಿದಾಯಕ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇವರ ಸಾರಥ್ಯದಲ್ಲಿ ಪ್ರೆಸಿಡೆನ್ಸಿ ಶಾಲೆಯು ಮುಗಿಲೆತ್ತರಕ್ಕೆ ಸಾಗುತ್ತಿದೆ. ಇಂಥ ಅಪರೂಪದ ಸಾಧಕಿಗೆ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತದೆ.
ಪಬ್ಲಿಕ್ ಟಿವಿ (Public TV) ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ (Nari Narayani 2026 Award) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಸಾಧಕಿಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಶರಣ್ಯ ಫಾರ್ಮ್ಸ್ ರೂವಾರಿಗೆ ವಿದ್ಯಾರಾಣಿ ಜಯಸ್ವಾಮಿಗೆ ನಾರಿ ನಾರಾಯಣಿ ಪ್ರಶಸ್ತಿ

