ವಯಸ್ಸು 80. ಆದರೆ ದುಡಿಯುವ ಛಲ ಮಾತ್ರ ಯುವಜನರನ್ನು ನಾಚಿಸುವಂತೆ ಇದೆ. ತನ್ನ ಜೀವನ ನಡೆಸಲು ಉಪ್ಪಿನಕಾಯಿ ವ್ಯವಹಾರ ಆರಂಭಿಸಿದ ಧಾರವಾಡದ ಅಜ್ಜಿ ಈಗ ತನ್ನಂತೆ ಕಷ್ಟದಲ್ಲಿರುವ ಮಹಿಳೆಯರ ಬದುಕಿಗೂ ಹೊಸ ಬೆಳಕು ನೀಡಿದ್ದಾರೆ.
ಧಾರವಾಡ ನಗರದ ಸಿಲ್ವರ್ ಆರ್ಚರ್ಡ್ ನಿವಾಸಿಯಾಗಿರುವ ಜಯಶೀಲಾ ಅವರಿಗೆ ಈಗ 80 ವರ್ಷ. 20 ವರ್ಷಗಳ ಹಿಂದೆ ಇವರು ಉಪ್ಪಿನಕಾಯಿ ವ್ಯಾಪಾರ ಶುರು ಮಾಡಿದರು. ಅಜ್ಜಿ ಉಪ್ಪಿನಕಾಯಿ ಟೇಸ್ಟ್ ಇಡೀ ಧಾರವಾಡದಲ್ಲಿ ಫೇಮಸ್ ಆಯ್ತು. ಅದೆಷ್ಟರ ಮಟ್ಟಿಗೆ ಕ್ಲಿಕ್ ಆಯ್ತು ಅಂದ್ರೆ ಎಲ್ಲರೂ ʼಉಪ್ಪಿನಕಾಯಿ ಅಜ್ಜಿʼ ಎಂದೇ ಕರೆಯಲು ಆರಂಭಿಸಿದರು. ಪ್ರತಿ ವರ್ಷ 60 ಟನ್ ಮಾವಿನಕಾಯಿ, 30 ಟನ್ ನಿಂಬೆಕಾಯಿಯ ಉಪ್ಪಿನಕಾಯಿಯನ್ನು ಇವರು ತಯಾರಿ ಮಾಡುತ್ತಾರೆ.
ಈ ಅಜ್ಜಿ ಈಗ ಉಪ್ಪಿನಕಾಯಿ ಫ್ಯಾಕ್ಟರಿಯನ್ನು ತೆರೆದು 15 ಬಡ ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ. ಆರಂಭದಲ್ಲಿ ಅಜ್ಜಿ ಉಪ್ಪಿನಕಾಯಿ ವ್ಯಾಪಾರಕ್ಕೆ ಮನೆಯವರು ವಿರೋಧ ಮಾಡಿದರೂ ಈಗ ಅಜ್ಜಿಗೆ ಭರ್ಜರಿ ಬೆಂಬಲ ನೀಡುತ್ತಿದ್ದಾರೆ. ಈ ಸಾಧಕಿ ಅಜ್ಜಿಗೆ ನಾರಿ ನಾರಾಯಣಿ ಪ್ರಶಸ್ತಿ ನೀಡಲು ಪಬ್ಲಿಕ್ ಟಿವಿ ಹರ್ಷಿಸುತ್ತಿದೆ.
ನಾರಿ ನಾರಾಯಣಿ, ಬೆಂಗಳೂರು, ಪಬ್ಲಿಕ್ ಟಿವಿ, ಮಹಿಳಾ ದಿನಾಚರಣೆ, ಉಪ್ಪಿನಕಾಯಿ, ಧಾರವಾಡ, ಜಯಶೀಲಾ