ಕರ್ನಾಟಕದ ಶ್ರೀಮಂತ ಪಾಕಶಾಲಾ ಪರಂಪರೆಯನ್ನು ಸಾರುವ, ಎಲ್ಲರ ಮನೆ ಮಾತಾಗಿರುವ ʻಅಡುಕಲೆʼ ಪ್ಯಾಕ್ಡ್ ಫುಡ್ ಬ್ರ್ಯಾಂಡ್ ರೂವಾರಿ ನಾಗರತ್ನ ರವೀಂದ್ರ. ಕರ್ನಾಟಕದ ಅಡುಗೆಯ ಸಂಸ್ಕೃತಿಯನ್ನು ಪರಿಚಯಿಸುವ ಅದ್ಭುತ ಕೆಲ್ಸ ಮಾಡುತ್ತಿರುವ ನಾಗರತ್ನ ಪರಿಚಯ ಇಲ್ಲಿದೆ.
ಪೀಳಿಗೆಯಿಂದ ಪೀಳಿಗೆಗೆ ಪಾಕಪದ್ಧತಿಯ ಘಮವನ್ನು ಪಸರಿಸುವ ಕೆಲಸ ಬಹಳ ಕಷ್ಟದ್ದು. ಕರುನಾಡಿನ ಪಾಕಶಾಲೆಯ ಪರಂಪರೆಯ ಹೆಗ್ಗುರುತು ಕರುನಾಡಿನ ಮನೆ ಮಾತಾಗಿರುವ ʼಆಡುಕಲೆʼ ಬ್ರ್ಯಾಂಡ್‌ನದ್ದು. ಈ ಬ್ರ್ಯಾಂಡ್‌ನ ಹಿಂದಿರುವ ಶಕ್ತಿ ಯಾರೆಂದರೆ ಅದು ನಾಗರತ್ನ ರವೀಂದ್ರ.
ಅದ್ಭುತ ರುಚಿಕರವಾಗಿರುವ ತಿಂಡಿ, ಮಸಾಲೆ ಪುಡಿಯನ್ನು ಸವಾಲಿನ ಹಾದಿಯಲ್ಲಿ ಆರಂಭಿಸಿದ ನಾಗರತ್ನ ಈಗ ಈ ಬ್ರ್ಯಾಂಡನ್ನು ತಮ್ಮ ಶ್ರಮ ದೂರದೃಷ್ಟಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪಸರಿಸಿದ್ದಾರೆ.
ಶುದ್ಧತೆ ಗುಣಮಟ್ಟದೊಂದಿಗೆ ಎಂದೂ ರಾಜಿಮಾಡಿಕೊಳ್ಳದ ಆಡುಕಲೆ ಬ್ರ್ಯಾಂಡ್ ಈಗ ಜನರ ಮೆಚ್ಚುಗೆಗೆ ಕಾರಣವಾಗಿರುವ ಹಿಂದೆ ನಾಗರತ್ನ ಅವರ ಅಪಾರ ಪರಿಶ್ರಮವಿದೆ. ಈ ಪರಿಶ್ರಮದ ಕೈಗಳಿಗೆ ನಾರೀನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತಿದೆ.