ಅಪ್ರತಿಮ ಸಾಧನೆಯ ಮೂಲಕ ಬೇರೆಯವರಿಗೆ ಸ್ಫೂರ್ತಿಯ ಸೆಲೆಯಾಗುವುದು ಒಂದಡೆಯಾದರೆ ತಾವು ಗಳಿಸಿದ ಪಾಂಡಿತ್ಯವನ್ನು ಬೇರೆಯವರಿಗೂ ಕಲಿಸಿ ಅವರ ಬದುಕಲ್ಲಿ ಹೊಸ ಬೆಳಕನ್ನು ತುಂಬುವವರು ನಿಜಕ್ಕೂ ಅಪರೂಪ. ಅಂತಹ ವ್ಯಕ್ತಿಗಳ ಸಾಲಿನಲ್ಲಿ ಪದ್ಮ ಮಂಜುನಾಥ್ ಮುಂಚೂಣಿಯಲ್ಲಿದ್ದಾರೆ.
ಪದ್ಮಾ ಮಂಜುನಾಥ್ 30 ವರ್ಷಗಳಿಂದಕಸೂತಿ ಕೆಲಸ ಪೇಟಿಂಗ್ ಕೌದಿ ಕಲೆ ಬೊಂಬೆಗಳ ತಯಾರಿಕೆ, ಹಸೆ ಚಿತ್ತಾರ ವರ್ಲಿ ಪೈಂಟಿಂಗ್, ರಂಗೋಲಿ ಕಲೆ ಹೀಗೆ ನಾನಾ ಪ್ರಾಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಕಲೆಗಳನ್ನು ನೋಡಿ ಕಲಿತುಕೊಂಡಿರುವ ಪದ್ಮಾ ಈ ಸೃಜನಾತ್ಮಕ ಕಲೆಯನ್ನು ಇತರ ಮಹಿಳೆಯರಿಗೂ ಉಚಿತವಾಗಿ ಕಲಿಸಿ ಅವರೂ ಸ್ವಾವಲಂಬಿ ಜೀವನ ನಡೆಸುವಂತೆ ಮಾಡಿದ್ದಾರೆ. ಇದನ್ನೂ ಓದಿ: ಶಿಕ್ಷಣ ವಂಚಿತ ಮಕ್ಕಳಿಗೆ ಜ್ಞಾನವನ್ನು ಧಾರೆ ಎರೆಯುತ್ತಿರುವ ಪೂರ್ಣಿಮಾಗೆ ನಾರಿ ನಾರಾಯಣಿ ಗೌರವ
ಲಲಿತಾ ಸಹಸ್ರನಾಮವನ್ನು ರೇಷ್ಮೇ ಸೀರೆಯ ಮೇಲೆ ಸ್ಟಿಚ್ ಮಾಡಿಸಿ ಅದಕ್ಕೆ ಮುತ್ತು ಹವಳ ನವರತ್ನಗಳಿಂದ ಅಲಂಕರಿಸಿ ಫ್ರೇಮ್ ಹಾಕಿ ಶೃಂಗೇರಿ ಮಠಕ್ಕೆ ಅರ್ಪಿಸಿದ್ದಾರೆ. ಅಲ್ಲದೇ ಲಕ್ಷ್ಮಿ ಅಷ್ಟೋತ್ತರ, ರಾಘವೇಂದ್ರ ಅಷ್ಟೋತ್ತರ, ಶಾರದಾ ಅಷ್ಟೋತ್ತರ ಹೀಗೆ ರೇಷ್ಮೇ ವಸ್ತ್ರದ ಮೇಲೆ ಪಡಿಮೂಡಿಸಿ ವಿವಿಧ ದೇಗುಲಕ್ಕೆ ನೀಡಿದ್ದಾರೆ. ಶ್ರೀರಾಮ ಅಷ್ಟೋತ್ತರವನ್ನು ಆಯೋಧ್ಯೆಗೆ ನೀಡಿದ ಹೆಗ್ಗಳಿಕೆಯೂ ಇವರದ್ದು. ಇವರ ಅಪರೂಪದ ಸಾಧನೆಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿದೆ.
ನಶಿಸಿ ಹೋಗುವ ಕಲಾ ಪ್ರಕಾರದಲ್ಲಿ ತೊಡಗಿ ಅದನ್ನು ಬೇರೆಯವರಿಗೂ ತಲುಪಿಸುವ ಈ ಅಪರೂಪದ ಸಾಧಕಿಗೆ ಪಬ್ಲಿಕ್ ಟಿವಿ ನಾರಿನಾರಾಯಣಿ ಪ್ರಶಸ್ತಿಯನ್ನು ನೀಡಿ ಗೌರವಿಸಲು ಹೆಮ್ಮೆ ಪಡುತ್ತಿದೆ. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಅಟೋ ಕಲಿಸಿಕೊಟ್ಟ ಡಬಲ್ ಸ್ಟಾರ್ ಪ್ರಭಾವತಿಗೆ ನಾರಿ ನಾರಾಯಣಿ ಗೌರವ