ಸಾಮಾನ್ಯ ಮಹಿಳೆಯರ ಅಸಾಮಾನ್ಯ ಸಾಧನೆಯನ್ನು ನೋಡುವುದೇ ಒಂದು ಸಂಭ್ರಮ. ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಈಗ ಯಶಸ್ವಿಯಾಗಿ ಮುನ್ನುಗುತ್ತಿರುವ ಕಾಲಘಟ್ಟದಲ್ಲಿ ವಿಬಿನಿ ಮೀಡಿಯಾದ ಮೂಲಕ ಜಾಹೀರಾತು ಏಜೆನ್ಸಿಯಲ್ಲಿ ಹೊಸ ಛಾಪು ಮೂಡಿಸಿದವರು ವಿದ್ಯಾ ಬಿ.ಎಸ್.
ಉದ್ಯಮ ಲೋಕದಲ್ಲಿ ಯಶಸ್ವಿಯಾಗಿ ನಿರ್ಭಿಡೆಯಿಂದ ಹೆಜ್ಜೆ ಇಡಬೇಕು ಅಂತಾ ದೃಢ ನಿರ್ಧಾರದೊಂದಿಗೆ ವಿದ್ಯಾ ಬಿಎಸ್ ವಿಬಿನಿ ಮೀಡಿಯಾದ ಚುಕ್ಕಾಣಿ ಹಿಡಿದರು. ದೂರದೃಷ್ಟಿ, ಹೊಸತನದ ಪ್ರಯೋಗ ಚಿಂತನಾಶೀಲತೆಯ ಮೂಲಕ ಗ್ರಾಹಕರ ನಂಬಿಕೆಯನ್ನು ವಿಬಿನಿ ಮೀಡಿಯಾ ಗಳಿಸಿದೆ.
2019 ರಲ್ಲಿ ವಿಬಿನಿ ಮೀಡಿಯಾ ಅಡ್ವಟೈಸಿಂಗ್ ಏಜೆನ್ಸಿ ಆರಂಭವಾಯ್ತು. ವಿದ್ಯಾ ಅವರ ಸೃಜನಾಶೀಲತೆಯಿಂದ ಅತ್ಯಂತ ವೇಗವಾಗಿ ಬೆಳೆದ ಈ ಸಂಸ್ಥೆ ಈಗ ಬೆಂಗಳೂರಿನಲ್ಲಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಮೆಚ್ಚುಗೆ ಗಳಿಸಿದೆ. ವಿದ್ಯಾ ಅದ್ಬುತ ಅಡುಗೆಯನ್ನು ಕೂಡ ಮಾಡ್ತಾರೆ. ಇವರ ಅಡುಗೆಯ ವಿಡಿಯೋ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಮಾಡಿದೆ.
ಅಪರೂಪದ ಕ್ಷೇತ್ರವನ್ನು ಆಯ್ದುಕೊಂಡು ಅದರಲ್ಲಿ ಯಶಸ್ವಿಯಾಗಿ ಸದಾ ಹೊಸತನಕ್ಕೆ ತುಡಿಯುವ ವಿದ್ಯಾ ಬಿಎಸ್ ಅವರಿಗೆ ನಾರಿನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹೆಮ್ಮೆ ಪಡುತ್ತಿದೆ.