ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಇಂದು, ಸಮೀಕ್ಷೆ ಮೊದಲ ಭಾಗವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸ್ತಿದ್ದೇವೆ. ಮೊದಲ ಕಂತಿನಲ್ಲಿ ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಮತದಾರರ ಮನದಾಳ ಹೇಗಿದೆ ಅಂತ ಹೇಳುತ್ತಿದ್ದೇವೆ. ಈ ಎರಡೂ ಭಾಗಗಳಲ್ಲಿ ಪಬ್ಲಿಕ್‍ಟಿವಿ ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟು, ಅಭಿಪ್ರಾಯ ಸಂಗ್ರಹಿಸಿದೆ. ಈಗ ಚುನಾವಣೆ ನಡೆದ್ರೆ ಮತದಾರನ ಒಲವು ಯಾರ ಪರವಾಗಿವೆ ಅನ್ನೋದು ಈ ಕೆಳಗಿನಂತಿದೆ.
ಸಾಮಾನ್ಯ ಪ್ರಶ್ನೆಗಳು:
1. ಗುಜರಾತ್ ಫಲಿತಾಂಶ ಯಾವ ಪಕ್ಷಕ್ಕೆ ಮತ ಹಾಕಬೇಕು ಎಂಬುದನ್ನು ನಿರ್ಧರಿಸುತ್ತಾ..?
ಹೌದು-35.55%
ಇಲ್ಲ-53.32%
ಗೊತ್ತಿಲ್ಲ-11.13%
Advertisement
Advertisement
Advertisement
2. ರಾಜ್ಯ ಸರ್ಕಾರದ ಯಾವ ಯೋಜನೆ ನಿಮಗೆ ಹೆಚ್ಚು ತೃಪ್ತಿ ತಂದಿದೆ..?
ಅನ್ನ ಭಾಗ್ಯ-60.0%
ಕ್ಷೀರ ಭಾಗ್ಯ-11.3%
ಶಾದಿ ಭಾಗ್ಯ-5.4%
ವಿದ್ಯಾಸಿರಿ-9.3%
ಮೇಲಿನ ಯಾವುದೂ ಅಲ್ಲ-13.3%
ಇತರೆ-0.7%
Advertisement
3. ಸಿದ್ದರಾಮಯ್ಯ ಸರ್ಕಾರ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದೆಯಾ..?
ಎಲ್ಲ ಪೂರೈಸಿದೆ-35.6%
ಸ್ವಲ್ಪ ಮಟ್ಟಿಗೆ-39.4%
ಬಹುತೇಕ ಪೂರೈಸಿದೆ-22.9%
ಏನೂ ಹೇಳಲ್ಲ-2.2%
4. ಇಂದಿರಾ ಕ್ಯಾಂಟೀನ್ ಬಗ್ಗೆ ನಿಮ್ಮ ಅಭಿಪ್ರಾಯವೇನು..?
ಉತ್ತಮ-29.99%
ಉತ್ತಮ ಯೋಜನೆ, ಕಳಪೆ ನಿರ್ವಹಣೆ-13.82%
ಚುನಾವಣಾ ಗಿಮಿಕ್-16.40%
ಏನೂ ಹೇಳಲ್ಲ-39.78%
5. ಸಿದ್ದರಾಮಯ್ಯ ಸರ್ಕಾರದ ಇಷ್ಟಪಡದೇ ಇರುವ ಅಂಶ ಯಾವುದು..?
ಜನರ ಬಗ್ಗೆ ಕಾಳಜಿಯಿಲ್ಲ-38.10%
ಜಾತಿ ಆಧಾರಿತ ಆಡಳಿತ-34.80%
2013ರಿಂದ ಅಭಿವೃದ್ಧಿ ಇಲ್ಲ-19.79%
ಎಲ್ಲವೂ ಕೆಟ್ಟದ್ದು-7.31%
6. ಕಳೆದ 4 ವರ್ಷಗಳಲ್ಲಿ ವಿಪಕ್ಷಗಳು ಸೂಕ್ತವಾಗಿ ಕಾರ್ಯನಿರ್ವಹಣೆ ಮಾಡಿವೆಯೇ ..?
ಹೌದು-51.69%
ಇಲ್ಲ-41.62%
ಏನೂ ಹೇಳಲ್ಲ-6.69%
7. ಆಂತರಿಕ ಕಚ್ಚಾಟ ಬಿಜೆಪಿಗೆ ಪ್ರತಿಕೂಲ ಬೀರುತ್ತಾ..?
ಹೌದು-57.19%
ಇಲ್ಲ-34.87%
ಏನೂ ಹೇಳಲ್ಲ-6.69%
8. ಹಗರಣಗಳು ಸಿಎಂ ಸಿದ್ದರಾಮಯ್ಯ ಇಮೇಜ್ ಮೇಲೆ ಋಣಾತ್ಮಕ ಪರಿಣಾಮ ಬೀರಿದೆಯಾ..?
ಹೌದು-53.76%
ಇಲ್ಲ-37.20%
ಏನೂ ಹೇಳಲ್ಲ-9.04%
8ಎ. ಈ ಕೆಳಗಿನ ಯಾವ ಹಗರಣ / ವಿಚಾರಗಳು ಸಿದ್ದರಾಮಯ್ಯ ಇಮೇಜ್ ಮೇಲೆ ಹೆಚ್ಚು ಪರಿಣಾಮ ಬೀರಿವೆ..?
ಹ್ಯೂಬ್ಲೋಟ್ ವಾಚ್ ಹಗರಣ-7.69%
ಡಿಕೆ ರವಿ / ಗಣಪತಿ ಆತ್ಮಹತ್ಯೆ-31.84%
ಪರಮೇಶ್ವರ ನಾಯ್ಕ್ ಪ್ರಕರಣ-2.96%
ಮೇಟಿ ಲೈಂಗಿಕ ಹಗರಣ-6.71%
ಡಿಕೆ ಶಿವಕುಮಾರ್ ಐಟಿ ದಾಳಿ-6.91%
ಮೇಲಿನ ಎಲ್ಲ ವಿಚಾರ-30.56%
ಏನೂ ಹೇಳಲ್ಲ-12.96%
ಇತರೆ-0.37%
9. ನಿಮ್ಮ ಮತದಾನದ ಮೇಲೆ ಪ್ರಭಾವ ಬೀರುವ ಪ್ರಮುಖ ವಿಷಯ ಯಾವುದು..?
ನೋಟ್ ಬ್ಯಾನ್-13.72%
ಜಿಎಸ್‍ಟಿ-15.34%
ರಾಜ್ಯ ಸರ್ಕಾರದ ಭ್ರಷ್ಟಾಚಾರ-10.85%
ಸ್ಥಳೀಯ ಶಾಸಕರ ಭ್ರಷ್ಟಾಚಾರ-13.02%
ಸಿಎಂ ಉತ್ತಮ ಕಾರ್ಯಕ್ಷಮತೆ-16.22%
ಸಿಎಂ ಸಿದ್ದರಾಮಯ್ಯ ಕಳಪೆ ಪ್ರದರ್ಶನ-15.45%
ಬೆಲೆ ಏರಿಕೆ-7.44%
ಉದ್ಯೋಗವಕಾಶ ಕೊರತೆ-4.65%
ಏನೂ ಹೇಳಲ್ಲ/ಇತರೆ-3.31%
ಮುಂಬೈ ಕರ್ನಾಟಕದ ಪ್ರಶ್ನೆಗಳು:
1. ಲಿಂಗಾಯತ ಪ್ರತೇಕ ಧರ್ಮದಿಂದ ಕಾಂಗ್ರೆಸ್‍ಗೆ ಹೆಚ್ಚು ಮತ ಗಳಿಕೆಗೆ ಅವಕಾಶ ಸಿಗುತ್ತಾ..?
ಕಾಂಗ್ರೆಸ್‍ಗೆ ಲಾಭದಾಯಕ- 45.11%
ಕಾಂಗ್ರೆಸ್‍ಗೆ ನಷ್ಟ- 23.95%
ಬಿಜೆಪಿಗೆ ಲಾಭ- 11.47%
ಬಿಜೆಪಿಗೆ ನಷ್ಟ- 10.44%
ರಾಜಕೀಯ, ಧರ್ಮದ ಮಿಶ್ರಣ ತಪ್ಪು-6.34%
ಏನೂ ಹೇಳಲ್ಲ-2.42%
2. ರಾಜ್ಯ ಸರ್ಕಾರ ಮಹದಾಯಿ ವಿಚಾರವನ್ನು ಸೂಕ್ತವಾಗಿ ನಿರ್ವಹಿಸಿದೆ ಎಂದು ಭಾವಿಸುವಿರಾ..?
ಹೌದು-35.04%
ಇಲ್ಲ-55.27%
ಏನೂ ಹೇಳಲ್ಲ-9.69%
ಹೈದ್ರಾಬಾದ್ ಕರ್ನಾಟಕದ ಪ್ರಶ್ನೆ
1. ಲಿಂಗಾಯತ ಪ್ರತ್ಯೇಕ ಧರ್ಮದಿಂದ ಕಾಂಗ್ರೆಸ್‍ಗೆ ಹೆಚ್ಚು ಮತ ಗಳಿಕೆಗೆ ಅವಕಾಶ ಸಿಗುತ್ತಾ..?
ಕಾಂಗ್ರೆಸ್‍ಗೆ ಲಾಭದಾಯಕ-38.34%
ಕಾಂಗ್ರೆಸ್‍ಗೆ ನಷ್ಟ-16.38%
ಬಿಜೆಪಿಗೆ ಲಾಭ-1.93%
ಬಿಜೆಪಿಗೆ ನಷ್ಟ-12.72%
ರಾಜಕೀಯ, ಧರ್ಮದ ಮಿಶ್ರಣ ತಪ್ಪು-7.71%
ಏನೂ ಹೇಳಲ್ಲ-22.93%
* ಇಂದೇ ಚುನಾವಣೆ ನಡೆದರೆ ನೀವು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ..?
1. ಹೈದ್ರಾಬಾದ್ ಕರ್ನಾಟಕ- 40 ಕ್ಷೇತ್ರ
ಕಾಂಗ್ರೆಸ್-45.28%
ಬಿಜೆಪಿ-29.87%
ಜೆಡಿಎಸ್-13.87%
ಇತರೆ/ನೋಟಾ-10.98%
2. ಮುಂಬೈ ಕರ್ನಾಟಕ-50 ಕ್ಷೇತ್ರ
ಕಾಂಗ್ರೆಸ್-43.94%
ಬಿಜೆಪಿ-41.79%
ಜೆಡಿಎಸ್-10.35%
ಇತರೆ-ನೋಟಾ-3.92%
ಇನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಸರ್ಕಾರ ಅಧಿಕಾರ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳಲು ಮಂಗಳವಾರ ಸಂಜೆ 7 ಗಂಟೆಗೆ ಪಬ್ಲಿಕ್ ಟಿವಿ ವೀಕ್ಷಿಸಿ.