ಸಮರ್ಥ ಪತ್ರಕರ್ತರಾಗ ಬಯಸುವ ಯುವ ಉತ್ಸಾಹಿಗಳಿಗೆ ಉದ್ಯೋಗಕ್ಕೆ ಬೇಕಾದ ಪೂರಕ ಸನ್ನಿವೇಶಗಳನ್ನು ಸೃಷ್ಟಿಸಲು ಸಜ್ಜಾಗಿದೆ ನಿಮ್ಮ ಪಬ್ಲಿಕ್ ಟಿವಿ. ಪತ್ರಕರ್ತರಾಗುವ ಕನಸು ಕಂಡರೆ ಸಾಲದು.. ಆಸೆ ಇದ್ದರೆ ಆಗದು. ಅದಕ್ಕೆ ದೃಢ ಸಂಕಲ್ಪ ಹಾಗೂ ತಕ್ಕ ವೇದಿಕೆ ಬೇಕು. ಇಂಥದ್ದೊಂದು ತಳಪಾಯ ಹಾಕಿಕೊಡಲು ಪಬ್ಲಿಕ್ ಟಿವಿ ಸಿದ್ಧವಿದೆ. ಪತ್ರಕರ್ತರಾಗಬೇಕೆಂಬ ನಿಮ್ಮ ಕನಸನ್ನು ಪಬ್ಲಿಕ್ ಟಿವಿ ಸಾಕಾರಗೊಳಿಸುತ್ತದೆ. ನಿಮ್ಮ ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಗುರಿ ಮುಟ್ಟಿಸುವಲ್ಲಿ ನಾವು ನೆರವಾಗುತ್ತೇವೆ. ಆದರೆ ನಿಮ್ಮಲ್ಲೂ ಒಂದಷ್ಟು ಸೇವಾ ಅರ್ಹತೆ ಹಾಗೂ ಕೌಶಲ್ಯ ಇರಬೇಕು. ಅಂದಹಾಗೆ ಈ ಸದಾವಕಾಶದ ಹಿಂದೆ ಕೆಲವೊಂದು ಷರತ್ತುಗಳೂ ಇವೆ…
- ಜರ್ನಲಿಸಂ ಡಿಗ್ರಿಯೇ ಬೇಕೆಂದೇನಿಲ್ಲ. ಯಾವುದೇ ವಿಷಯದಲ್ಲಿ ‘ಪದವಿ’ ಕಡ್ಡಾಯ
- ಕನ್ನಡ ಭಾಷೆ ಮೇಲೆ ಹಿಡಿತ ಅತ್ಯಗತ್ಯ
- ತರಬೇತಿ ನೆಪದಲ್ಲಿ ಸುಮ್ಮನೆ ದುಡಿಸಿಕೊಳ್ಳುವುದಿಲ್ಲ
- ಆಯ್ಕೆಯಾದವರಿಗೆ ಪ್ರತಿ ತಿಂಗಳು ತರಬೇತಿ ಭತ್ಯೆ ನೀಡಲಾಗುವುದು
- ಹೊಸ ಕೆಲಸ.. ಹೊಸ ಜಾಗ.. ಹೊಸ ಅನುಭವ.., ಎಂಥವರಿಗೇ ಆಗಲಿ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ ಮೂರು ತಿಂಗಳು ಹೊಂದಾಣಿಕೆಯ ಅವಧಿ ಇರುತ್ತದೆ. ಈ ಮೂರು ತಿಂಗಳಲ್ಲಿ ನಿಮಗೆ ನ್ಯೂಸ್ ಚಾನಲ್ ಹಾಗೂ ಡಿಜಿಟಲ್ ಮಾಧ್ಯಮದ ಪ್ರಮುಖ ವಿಭಾಗಗಳ ಪರಿಚಯ ಮಾಡಿಸಿಕೊಡಲಾಗುತ್ತದೆ.
- ಮೂರು ತಿಂಗಳ ಹೊಂದಾಣಿಕೆ ಅವಧಿಯ ಬಳಿಕ ಒಂದು ವರ್ಷ ಎಲ್ಲ ವಿಭಾಗಗಳಲ್ಲೂ ನೀವು ಕಾರ್ಯ ನಿರ್ವಹಿಸಬೇಕಾಗುತ್ತದೆ.
- ಈ ಅವಧಿಯಲ್ಲಿ ಮಾಸಿಕ ಹತ್ತು ಸಾವಿರ ತರಬೇತಿ ಭತ್ಯೆ ನೀಡಲಾಗುವುದು.
- ತರಬೇತಿ ಭತ್ಯೆ ಜೊತೆಗೆ ನಿರ್ದಿಷ್ಟ ಮೊತ್ತದ ಪಿಜಿ (ಪೇಯಿಂಗ್ ಗೆಸ್ಟ್) ಭತ್ಯೆಯನ್ನೂ ಕೊಡಲಾಗುವುದು.
- ಕಡ್ಡಾಯವಾಗಿ 15 ತಿಂಗಳ ತರಬೇತಿ ಅವಧಿಯನ್ನು ನೀವು ಮುಗಿಸಲೇಬೇಕು. ಇಲ್ಲ ಸಲ್ಲದ ನೆಪ ಹೇಳಿ ಅರ್ಧದಲ್ಲೇ ಬಿಟ್ಟು ಹೋಗುವಂತಿಲ್ಲ. ಕರಾರು ಪತ್ರ ಮಾಡಿಕೊಟ್ಟವರಿಗೆ ಮಾತ್ರ ಅವಕಾಶ.
- ತರಬೇತಿ ಭತ್ಯೆಯನ್ನೂ ಕೊಟ್ಟು ಸಮರ್ಥ ಪತ್ರಕರ್ತರನ್ನಾಗಿ ರೂಪಿಸುವ ಹೊಣೆ ನಮ್ಮದು, ನಿಮ್ಮಲ್ಲಿ ಕಲಿಯುವ ನಿಷ್ಠೆ, ಆಸಕ್ತಿ ಇದ್ದರಷ್ಟೇ ಸಾಕು.
- ವಿದ್ಯಾರ್ಹತೆ ಜೊತೆ ಸಮರ್ಪಣಾಭಾವ ಇರುವ ಕನ್ನಡ ಬಲ್ಲ ಉತ್ಸಾಹಿಗಳಿಗೆ ಮಾತ್ರ ಅವಕಾಶ.
- ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
- ಕೈಬರಹದಲ್ಲೇ ಮತ್ತು ಕನ್ನಡದಲ್ಲೇ ನಿಮ್ಮ ವ್ಯಕ್ತಿ ಪರಿಚಯ ಬರೆದು ನಮಗೆ ಕಳಿಸಿ.
ನಮ್ಮ ವಿಳಾಸ –
Advertisement
ನೇಮಕಾತಿ ವಿಭಾಗ
ಪಬ್ಲಿಕ್ ಟಿವಿ
4ನೇ ಮಹಡಿ, ಬಿಎಂಟಿಸಿ ಕಟ್ಟಡ
ಯಶವಂತಪುರ, ಬೆಂಗಳೂರು – 560022