ಬೀದರ್: ಗುಟುಕು ನೀರಿಗಾಗಿ ಜೀವದ ಹಂಗು ತೊರೆದು ಬಾವಿಯಿಂದ ನೀರು ಸೇದುತ್ತಿದ್ದ ಸುದ್ದಿಯನ್ನು ಪಬ್ಲಿಕ್ ಟಿವಿ ಬೆಳಗ್ಗೆ ಪ್ರಸಾರ ಮಾಡಿತ್ತು. ‘ಜಲಯುದ್ಧ’ ಶೀರ್ಷಿಕೆಯಲ್ಲಿ ಸುದ್ದಿ ಪ್ರಸಾರ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾ ಪಂಚಾಯತ್ ಸಿಇಓ ಸ್ಥಳಕ್ಕೆ ದಿಢೀರ್ ಭೇಟಿ ಕೊಟ್ಟಿದ್ದಾರೆ.
ಜಿಪಂ ಸಿಇಓ ಮಹಾಂತೇಶ ಬೀಳಗಿ ಚಿಮ್ಮೆಗಾಂವ್ ಗ್ರಾಮಕ್ಕೆ ಭೇಟಿ ಕೊಟ್ಟಿದ್ದು, ಬಾವಿಯೊಳಗೆ ನೀರು ಬಿಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅಷ್ಟೇ ಅಲ್ಲದೇ ಟ್ಯಾಂಕರ್ ಮೂಲಕ ಗ್ರಾಮಕ್ಕೆ ನೀರನ್ನು ಸರಬರಾಜು ಮಾಡುವಂತೆ ಸೂಚಿಸಿದ್ದಾರೆ.
Advertisement
Advertisement
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೇಗಾಂವ್ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದು ನಿಜ. ನಿಷ್ಕಾಳಜಿ ವಹಿಸಿದ ಅಧಿಕಾರಿಗಳನ್ನು ಪರಿಶೀಲನೆ ಮಾಡಿ ಅಮಾನತು ಮಾಡುತ್ತೇನೆ. ಚಿಮ್ಮೆಗಾಂವ್ ಗ್ರಾಮಕ್ಕೆ ದಿನಕ್ಕೆ ನಾಲ್ಕು ಟ್ಯಾಂಕರ್ ನೀರು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಿಇಓ ಮಹಾಂತೇಶ ಬೀಳಗಿ ಹೇಳಿದ್ದಾರೆ.
Advertisement
ಚಿಮ್ಮೆಗಾಂವ್ ಗ್ರಾಮದಲ್ಲಿ ಸುಮಾರು 70 ರಿಂದ 80 ಕುಟುಂಬಗಳು ವಾಸವಾಗಿದ್ದು, ಈ ಗ್ರಾಮದಲ್ಲಿ ಜಾನುವಾರಗಳು ಸೇರಿದಂತೆ ಮನುಷ್ಯ ಕುಲಕ್ಕೆ ನೀರಿನ ದಾಹ ತಣಿಸಲು ಒಂದೇ ಬಾವಿ ಇದೆ. ಪ್ರತಿದಿನ ಒಂದು ಕೊಡ ನೀರಿಗಾಗಿ ಗ್ರಾಮಸ್ಥರು ಕಿತ್ತಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರು 50 ಅಡಿ ಬಾವಿಯಿಂದ ನೀರು ಸೇದುತ್ತಿದ್ದರು. ಜನರು ಬಾವಿ ಸುತ್ತ ನಿಂತುಕೊಂಡು ಹಗ್ಗಕ್ಕೆ ಬಿಂದಿಗೆ ಕಟ್ಟಿಕೊಂಡು ಆಳವಾದ ಬಾವಿಗೆ ಬಿಟ್ಟು ನೀರು ಸೇದುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
Advertisement