ಯಾದಗಿರಿ: ರೈತರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಸಾಲ ಪಡೆದ ಅಧಿಕಾರಿ ಮತ್ತು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ಖೂಷ್ಬೂ ಗೋಯಲ್ ಚೌಧರಿ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಅನ್ನದಾತರಿಗೆ ವಂಚಿಸಿದ ಬಗ್ಗೆ ಫೆಬ್ರುವರಿ 14 ರಂದು ಪಬ್ಲಿಕ್ ಟಿವಿ ವೆಬ್‍ಸೈಟಿನಲ್ಲಿ ಸುದ್ದಿ ಪ್ರಕಟವಾಗಿತ್ತು.
ಏನಿದು ಪ್ರಕರಣ?:
2012ರ ಸಾಲಿನ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಸಹಕಾರಿ ಸೊಸೈಟಿಯಲ್ಲಿನ ರೈತರ ಸಾಲಮನ್ನಾ ಮಾಡಿದ್ರು. ಅದರಂತೆ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಗರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಕಾರ್ಯದರ್ಶಿ ಈಶ್ವರಪ್ಪ ಗಾಯಿ 114 ರೈತರ ಸಾಲವನ್ನು ಮನ್ನಾ ಮಾಡದೆ ಬೇನಾಮಿ ಸಹಿ ಮಾಡಿ ಸುಮಾರು 25 ಲಕ್ಷ ಸಾಲ ಪಡೆದು ವಂಚಿಸಿದ್ದ. ಈ ಬಗ್ಗೆ ರೈತರು ಶಹಾಪೂರ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಕ್ಯಾರೇ ಎನ್ನಲಿಲ್ಲ. ರೈತರು ಪಬ್ಲಿಕ್ ಟಿವಿ ಬಳಿ ನ್ಯಾಯಕ್ಕಾಗಿ ಮೊರೆಯಿಟ್ಟಿದ್ರು. ಈಗ ಪಬ್ಲಿಕ್ ಟಿವಿ ವರದಿಗೆ ಫಲ ಸಿಕ್ಕಿದೆ.
Advertisement
ರೈತರಿಗೆ ಅನ್ಯಾಯದ ಬಗ್ಗೆ ಪಬ್ಲಿಕ್ ಟಿವೀಲಿ ವರದಿ ಬಿತ್ತರವಾದ ಕೂಡಲೇ ಜಿಲ್ಲಾಧಿಕಾರಿ ಖುಷ್ಬೂ ಗೋಯಲ್ ಚೌದರಿ ಸ್ವತಃ ಮುತುವರ್ಜಿ ವಹಿಸಿ ತನಿಖೆಗೆ ಆದೇಶಿಸಿದ್ರು. ತನಿಖೆಯಲ್ಲಿ ಒಟ್ಟು 12 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗ ಬೆಳಕಿಗೆ ಬಂದಿದೆ. ಈಗ ಸಹಕಾರಿ ಸಂಘದ ಕಾರ್ಯದರ್ಶಿ ಈಶ್ವರಪ್ಪ ಗಾಯಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
Advertisement
Advertisement
ಮೋಸ ಹೋದ ರೈತರ ನ್ಯಾಯ ಹುಡಕಲು ಪೊಲೀಸ್ ಇಲಾಖೆ ಮೊರೆ ಹೊದ ಮೇಲೆ ದೂರು ತೆಗೆದುಕೂಳ್ಳದೆ ರೈತರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ವಂಚಿತರಾದ ರೈತರ ನೇರವಿಗೆ ಪಬ್ಲಿಕ್ ಟಿವಿ ವೆಬ್ ನ್ಯೂಸ್ ವರದಿಯು ಜಿಲ್ಲಾಡಳಿತ ಅರಿತು ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ಮಾಡಿದೆ. ರೈತರ ಬಾಳಿನಲ್ಲಿ ಬ್ಯಾಂಕ್ ಅಧಿಕಾರಿಗಳು ಚಲ್ಲಾಟವಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ರೈತರ ಮೊಗದಲ್ಲಿ ನಗು ಮೂಡಿದೆ.
Advertisement