ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ
ವಿಜಯಪುರ: ಸೈಕ್ಲಿಸ್ಟ್‌ಗಳ ತವರು ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ನೂರಾರು ಜನ ಸೈಕ್ಲಿಸ್ಟ್ ಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಆದ್ರೆ ಅವಳಿ ಜಿಲ್ಲೆಯ ಸೈಕ್ಲಿಸ್ಟ್ ಗಳು ರೋಡ್ ನಲ್ಲಿ ಪ್ರಾಕ್ಟೀಸ್ ಮಾಡ್ತಿದ್ರು. ಸೈಕ್ಲಿಂಗ್ ವೆಲೋಡ್ರಮ್ ನಿರ್ಮಾಣ ಆಗಬೇಕು ಅನ್ನೋ ಬೇಡಿಕೆ ಇದೀಗ ನನಸಾಗುವ ಸಮಯ ಬಂದಿದ್ದು ಉದ್ಘಾಟನೆಗೆ ಕಾದು ನಿಂತಿದೆ.
ವಿಜಯಪುರ ನಗರದ ಹೊರಭಾಗದ ಭೂತನಾಳ ಕೆರೆಯ ಬಳಿ 8.10 ಎಕರೆ ವಿಶಾಲ ಪ್ರದೇಶದಲ್ಲಿ 10.70 ಕೋಟಿ ರೂ. ವೆಚ್ಚದಲ್ಲಿ ಸೈಕ್ಲಿಂಗ್ ಟ್ರ್ಯಾಕ್ ಮಾಡುವ ಕಾಮಗಾರಿಗೆ 2015 ರಲ್ಲೇ ಚಾಲನೆ ನೀಡಲಾಗಿತ್ತು. ಕಾಮಗಾರಿ ಪ್ರಾರಂಭವಾದ್ರೂ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಸೈಕ್ಲಿಸ್ಟ್‌ಗಳ ಆರೋಪದಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಹಿಂದಿನ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಮತ್ತೆ ಮರುಜೀವ ನೀಡಿದ್ದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಪ್ರಕರಣದಲ್ಲಿ ಟ್ವಿಸ್ಟ್ – ʻಹನಿಟ್ರ್ಯಾಪ್ʼ ಲೇಡಿ ಸುಜಾತಾ ಹಂಡಿಯ ಅಸಲಿ ಮುಖ ಅನಾವರಣ!
ಪಿ.ಸುನೀಲಕುಮಾರ್ ಚೆನ್ನೈಗೆ ಹೋಗಿ ಟ್ರ್ಯಾಕ್ ಕುರಿತು ಅಧ್ಯಯನ ಮಾಡಲು ತಂಡ ಕಳುಹಿಸಿ ಆ ಬಳಿಕ ವೈಜ್ಞಾನಿಕವಾಗಿ ಸೈಕ್ಲಿಂಗ್ ವೆಲೋಡ್ರೋಂ ನಿರ್ಮಾಣಕ್ಕೆ ಚಾಲನೆ ನೀಡಿದರು. ಆದ್ರೆ ಮಂದಗತಿಯಲ್ಲಿ ಕಾಮಗಾರಿ ಸಾಗುತ್ತಿತ್ತು. ಆಗ ನಿಮ್ಮ ʻಪಬ್ಲಿಕ್ ಟಿವಿʼ ಇದರ ವಿಸ್ತೃತ ವರದಿ ಬಿತ್ತರಿಸಿತ್ತು. ಇದರಿಂದ ಒತ್ತಡಕ್ಕೆ ಒಳಗಾದ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಕಾಮಗಾರಿ ಸಂಪೂರ್ಣಗೊಳಿಸಿದ್ದು ಉದ್ಘಾಟನೆಗೆ ಕಾದು ನಿಂತಿದೆ.
ಸಿಎಂ ಸಿದ್ದರಾಮಯ್ಯ ಇಂದು ವಿಜಯಪುರ ಜಿಲ್ಲೆಗೆ ಆಗಮಿಸುತ್ತಿದ್ದು, ಈ ವೇಳೆ ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸೈಕ್ಲಿಂಗ್ ವೆಲೋಡ್ರೋಂ ಸಹಿತ ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: ಮಹಿಳೆಯೇ ಬಟ್ಟೆ ಬಿಚ್ಚಿ ಸೀನ್ ಕ್ರಿಯೇಟ್ ಮಾಡಿದ್ದಾಳೆ, ಆಕೆ ವಿರುದ್ಧ 9 ಕೇಸ್ ಇದೆ: ಹು-ಧಾ ಆಯುಕ್ತ ಶಶಿಕುಮಾರ್



