ವಿಜಯಪುರ: ಜಿಲ್ಲೆಯ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡಿ, ಹೆದರಿಸಿರುವ ಸುದ್ದಿಯನ್ನು ನಿಮ್ಮ `ಪಬ್ಲಿಕ್ ಟಿವಿ’ (PUBLiC TV) ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಈ ಸುದ್ದಿ ಪ್ರಧಾನಿ ಮೋದಿಯವರಿಗೆ ತಲುಪಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ (PM Narendra Modi) ಇಂದು (ಅ.27) ಮನ್ ಕಿ ಬಾತ್‌ನಲ್ಲಿ (Maan Ki Baat) ಮಾತನಾಡಿದರು.
ಪ್ರಧಾನಿ ಮೋದಿ ಇಂದು ಮನ್ ಕಿ ಬಾತ್‌ನ 115ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ (Cyber Crime) ಪ್ರಕರಣ ಹಿನ್ನೆಲೆ ದೇಶದ ಜನರಿಗೆ ಜಾಗೃತ ಮೂಡಿಸಿದರು.ಇದನ್ನೂ ಓದಿ: ನಿಮ್ಮ ಪಾದಗಳಿಗೆ ಶಿರಸಾವಹಿಸಿ ಬೇಡಿಕೊಳ್ತೀನಿ, ಒಂದೇ ಒಂದು ಅವಕಾಶ ಕೊಡಿ: ನಿಖಿಲ್
ವಿಜಯಪುರದ (Vijayapura) ನಿವಾಸಿ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ, ನಾವು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಎಂದು ಹೇಳಿ ಬ್ಲ್ಯಾಕ್‌ಮೇಲ್ ಮಾಡಿ, ಹೆದರಿಸಿದ್ದರು. ಇದರ ಸಂಪೂರ್ಣ ದೃಶ್ಯವನ್ನು ಸಂತೋಷ್ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ಕುರಿತು ವಿಸ್ತೃತ ವರದಿಯನ್ನು ಪಬ್ಲಿಕ್ ಟಿವಿ ಬಿತ್ತರಿಸಿತ್ತು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಪ್ರಧಾನಿ ಮೋದಿಯವರೆಗೆ ತಲುಪಿದೆ. ಇಂದು ಪ್ರಧಾನಿ ಮೋದಿ ಈ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು.
11 ಗಂಟೆಗೆ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸಂತೋಷ್ ಅವರ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು. ಸಂತೋಷ್ ಸೆರೆ ಹಿಡಿದಿದ್ದ ಸಂಪೂರ್ಣ ವಿಡಿಯೋವನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು. ಮೋದಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದರು. ಇದರಿಂದ ಖುಷಿಯನ್ನು ವ್ಯಕ್ತಪಡಿಸಿದ ಸಂತೋಷ, ಇದೆಲ್ಲ ಸಾಧ್ಯವಾಗಿದ್ದು ಪಬ್ಲಿಕ್ ಟಿವಿಯಿಂದ ಎಂದು ಅಭಿನಂದನೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?