ರಾಮನಗರ: ಫೆಂಗಲ್ ಚಂಡಮಾರುತದ (Fengal Cyclone) ಎಫೆಕ್ಟ್ ರಾಮನಗರ (Ramanagara) ಜಿಲ್ಲೆಗೂ ತಟ್ಟಿದ್ದು, ಕಳೆದ ಎರಡು ದಿನಗಳಿಂದ ಸುರಿಯುತ್ತಿರೋ ನಿರಂತರ ಮಳೆಗೆ ಮಂಚನಬೆಲೆ ಜಲಾಶಯದ ಸಮೀಪದ ತಾತ್ಕಾಲಿಕ ಸೇತುವೆ (Bridge) ಬಿರುಕು ಬಿಟ್ಟಿದೆ.
ಎರಡು ವರ್ಷಗಳ ಹಿಂದೆ ಭಾರೀ ಮಳೆಗೆ ಸೇತುವೆ ಕೊಚ್ಚಿ ಹೋಗಿದ್ದ ಹಿನ್ನೆಲೆ ಪರ್ಯಾಯವಾಗಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ನಿರಂತರ ಮಳೆ ಹಿನ್ನೆಲೆ ತಾತ್ಕಾಲಿಕ ಸೇತುವೆ ಕೂಡಾ ಬಿರುಕು ಬಿಟ್ಟಿದೆ. ಅಪಾಯಕಾರಿ ಸೇತುವೆ ಮೇಲೆ ವಾಹನಗಳು ಸಂಚಾರ ಮಾಡುತ್ತಿವೆ. ಇನ್ನೂ ಈ ಬಗ್ಗೆ ‘ಪಬ್ಲಿಕ್ ಟಿವಿ’ಯಲ್ಲಿ ವರದಿ ಬಂದ ಹಿನ್ನೆಲೆ ಎಚ್ಚೆತ್ತ ನೀರಾವರಿ ಇಲಾಖೆ ಅಧಿಕಾರಿಗಳು ಬಿರುಕು ಬಿಟ್ಟ ತಾತ್ಕಾಲಿಕ ಸೇತುವೆಯನ್ನ ದುರಸ್ತಿ ಮಾಡಿದ್ದಾರೆ. ಇದನ್ನೂ ಓದಿ: ತಮಿಳುನಾಡು| ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದ ಸಚಿವರ ಮೇಲೆ ಕೆಸರೆರಚಿ, ಕಲ್ಲು ತೂರಿ ಜನಾಕ್ರೋಶ
ಕುಸಿದಿದ್ದ ಭಾಗಗಳಿಗೆ ಜೆಸಿಬಿ ಯಂತ್ರದ ಮೂಲಕ ಮಣ್ಣು ಹಾಕಿ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನೂ ಈ ಭಾಗದಲ್ಲಿ ಶಾಶ್ವತ ಸೇತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಯಚೂರು | ರಸ್ತೆ ದಾಟುವಾಗ ಸರ್ಕಾರಿ ಬಸ್ ಹರಿದು ಪಾದಚಾರಿ ಸಾವು