ರಾಯಚೂರು: ಬಿಸಿಲನಾಡು ರಾಯಚೂರು (Raichur) ಜನ ಎಂತಹ ಬಿಸಿಲನ್ನೂ ತಡೆದುಕೊಳ್ಳುತ್ತಾರೆ ಅನ್ನೋ ಮಾತಿತ್ತು. ಆದರೆ ಈ ವರ್ಷದ ರಣ ಬಿಸಿಲು ಬಿಸಿಲನಾಡ ಜನರನ್ನೇ ತತ್ತರಿಸುವಂತೆ ಮಾಡಿದೆ. ಹೀಗಾಗಿ ರಾಯಚೂರು ಜನರನ್ನು ಬಿಸಿಲಿನಿಂದ ರಕ್ಷಿಸಬೇಕು ಅಂತ ನಿಮ್ಮ ‘ಪಬ್ಲಿಕ್ ಟಿವಿ’ ವರದಿಯನ್ನು ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿರುವ ರಾಯಚೂರು ಜಿಲ್ಲಾಡಳಿತ ಬೈಕ್ ಮೇಲೆ ಓಡಾಡುವ ಜನರಿಗೆ ನೆರಳಿನ (Shelter) ಆಸರೆ ನೀಡುವ ಮೂಲಕ ಉತ್ತಮ ಕ್ರಮಕ್ಕೆ ಮುಂದಾಗಿದೆ.
ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಅತ್ಯಧಿಕ ತಾಪಮಾನ ಎಂಥವರಿಗೂ ನರಕ ತೋರಿಸುತ್ತಿದೆ. ಕಳೆದ ಆರೇಳು ವರ್ಷಗಳಲ್ಲೆ ಅತ್ಯಧಿಕ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಈಗ ದಾಖಲಾಗಿದೆ. ಕಳೆದ ಒಂದು ವಾರದಿಂದ ಸರಾಸರಿ 41 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಇನ್ನೂ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಹೆಚ್ಚಳವಾಗಲಿದೆ ಅನ್ನೋ ಮುನ್ಸೂಚನೆಯಿದೆ. ಇದನ್ನೂ ಓದಿ: ಪೋಷಕರೇ ಎಚ್ಚರ ಶುರುವಾಗ್ತಿದೆ ಕಾಲರಾ- ಮಕ್ಕಳ ಆರೋಗ್ಯದ ಕಡೆ ಇರಲಿ ಗಮನ
- Advertisement
ಹೀಗಾಗಿ ನಿಮ್ಮ ಪಬ್ಲಿಕ್ ಟಿವಿ ರಾಯಚೂರು ಜನರನ್ನು ಬಿಸಿಲಿನಿಂದ ರಕ್ಷಿಸಲು ಸಾರ್ವಜನಿಕ ಸ್ಥಳಗಳು, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನೆರಳು, ಕುಡಿಯುವ ನೀರಿನ ವ್ಯವಸ್ಥೆಯ ಅವಶ್ಯಕತೆ ಕುರಿತು ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿರುವ ರಾಯಚೂರು ಜಿಲ್ಲಾಡಳಿತ ಟ್ರಾಫಿಕ್ ಸಿಗ್ನಲ್ ಇರುವ ವೃತ್ತಗಳಲ್ಲಿ ನೆರಳಿನ ವ್ಯವಸ್ಥೆಯನ್ನು ಕಲ್ಪಿಸಿದೆ. ಇದನ್ನೂ ಓದಿ: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ದ ಪ್ರಕರಣ ದಾಖಲು!
- Advertisement
ನಗರದ ಬಸವೇಶ್ವರ ವೃತ್ತದಲ್ಲಿ ನಾಲ್ಕು ಕಡೆ, ಗಂಜ್ ವೃತ್ತದಲ್ಲಿ ಎರಡು ಕಡೆಗಳಲ್ಲಿ ನೆರಳಿನ ಶೆಡ್ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೆ ನರೆಗಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ, ಕಟ್ಟಡ ಕಾಮಗಾರಿಗಳು ನಡೆಯುವ ಸ್ಥಳದಲ್ಲೂ ನೆರಳು, ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್ ಪಲ್ಟಿ- ಮೂವರ ದುರ್ಮರಣ, 38 ಮಂದಿಗೆ ಗಾಯ
ಒಟ್ಟಲ್ಲಿ ರಾಯಚೂರು ಜನರಿಗೆ ದಿನ ಬೆಳಗಾದರೆ ಬಿಸಿಲಿನ ಭಯ ಕಾಡುತ್ತಿದೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 4:30 ವರೆಗೂ ಬಿಸಿಲು ತನ್ನ ರುದ್ರ ನರ್ತನ ತೋರುತ್ತಿದೆ. ಹೀಗಾಗಿ ವೈದ್ಯರು ಹಾಗೂ ಜಿಲ್ಲಾಡಳಿತ ಅದಷ್ಟು ಬಿಸಿಲಿನಿಂದ ದೂರ ಇರಲು ಜಿಲ್ಲೆಯ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇದನ್ನೂ ಓದಿ: ಮುಂಜಾನೆ ಬೆಂಗಳೂರಿನ ಟೈಯರ್ ಗೋಡೌನ್‍ನಲ್ಲಿ ಅಗ್ನಿ ಅವಘಡ