ಬೆಂಗಳೂರು: ರಸ್ತೆ ಗುಂಡಿ (Potholes) ತಪ್ಪಿಸೋಕೆ ಹೋಗಿ ಗಂಭೀರ ಗಾಯಗೊಂಡು ಸದ್ಯ ಚೇರತಿಸಿಕೊಳ್ಳುತ್ತಿರುವ ಸಂದೀಪ್ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಡೀನ್ ಗೆ ಸೂಚನೆ ಕೊಡುವುದಾಗಿ ಆರೋಗ್ಯ ಸಚಿವ ಕೆ. ಸುಧಾಕರ್ (K Sudhakar) ಭರವಸೆ ನೀಡಿದರು.
Advertisement
ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದ ವಿಚಾರದ ಕುರಿತು ಇಂದು ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಈ ಬಗ್ಗೆ ಸಚಿವ ಸುಧಾಕರ್ ಪ್ರತಿಕ್ರಿಯಿಸಿ, ಈಗಾಗಲೇ ರೋಗಿಗೆ ವಿಕ್ಟೋರಿಯಾದಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಚಿಕಿತ್ಸೆ ನೀಡುವಂತೆ ಡೀನ್ ಗೆ ಸೂಚನೆ ಕೊಡ್ತೀನಿ. ರೋಗಿ ಆದಷ್ಟು ಬೇಗ ಹುಷಾರಾಗಲಿ ಎಂದು ಶುಭ ಹಾರೈಸಿದರು.
Advertisement
Advertisement
ಕೆಲ ಸರ್ಕಾರಿ ಆಸ್ಪತ್ರೆ (Government Hospital) ಗಳಲ್ಲಿ ಕೆಲ ಅಧಿಕಾರಿಗಳಿಂದ ಸಮಸ್ಯೆ ಆಗುತ್ತಿದೆ. ಆ ವ್ಯವಸ್ಥೆಯನ್ನ ಸರಿ ಮಾಡೋ ಕೆಲಸ ಮಾಡುತ್ತಿದ್ದೇವೆ. ಅತ್ಯುತ್ತಮವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿದೆ. ಇದನ್ನ ಮತ್ತಷ್ಟು ಉತ್ತಮ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸುಧಾಕರ್ ಪಬ್ಲಿಕ್ ಟಿವಿಗೆ ತಿಳಿಸಿದರು. ಇದನ್ನೂ ಓದಿ: ಗುಂಡಿಗೆ ಬಿದ್ದು ಕೋಮಾಗೆ ಜಾರಿದ್ದ ಸಂದೀಪ್- ಪ್ರಜ್ಞಾವಸ್ಥೆಗೆ ಬಂದ ಸವಾರನಿಗೆ ಸಿಗ್ತಿಲ್ಲ ಆಸ್ಪತ್ರೆ ಬೆಡ್
Advertisement
ಏನಿದು ಘಟನೆ..?: ಕೆಲವು ದಿನಗಳ ಹಿಂದೆಯಷ್ಟೇ ವಿದ್ಯಾರಣ್ಯಪುರದ ನಿವಾಸಿ ಸಂದೀಪ್ ಫ್ರೆಂಡ್ಸ್ ಗಳ ಜೊತೆ ಕ್ರಿಕೆಟ್ ಆಡಿಕೊಂಡು ಜಾಲಹಳ್ಳಿಯ ಗಂಗಮ್ಮ ರಸ್ತೆ ಮಾರ್ಗವಾಗಿ ಬೈಕ್‍ನಲ್ಲಿ ಬರುತ್ತಿದ್ದರು. ಆದರೆ ಅದೇ ದಾರಿಯಲ್ಲಿ ಯಮವಾಗಿದ್ದ ಗುಂಡಿಯೊಂದನ್ನ ತಪ್ಪಿಸಲು ಹೋದ ಸಂದೀಪ್ (Sandeep), ಕೆಳಗೆ ಬಿದ್ದು ಗಂಭೀರ ಗಾಯವಾಗಿ ಹತ್ತಿರದ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಾದರು. ಸಂದೀಪ್ ಪತ್ನಿ ಸೀಮಾ ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ವಿರುದ್ಧ ದೂರು ಕೂಡ ನೀಡಿದ್ದರು.
ಇತ್ತ ಚಿಂತಾಜನಕ ಸ್ಥಿತಿ ತಲುಪಿ ಸಾವು-ಬದುಕು ನಡುವೆ ಹೋರಾಡ್ತಿದ್ದ ಸಂದೀಪ್ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು ಮಾಡಿರೋ ಬೇಜವಾಬ್ದಾರಿ ಕೆಲಸಕ್ಕೆ ಬೈಕ್ ಸವಾರ ಸಂದೀಪ್ ಆಸ್ಪತ್ರಗೆ ಕಟ್ಟಿದ್ದು ಬರೋಬ್ಬರಿ 14 ಲಕ್ಷ ಹಣ. ಮಧ್ಯಮ ವರ್ಗ ಕುಟುಂಬದವರಾಗಿರೋ ಸಂದೀಪ್ ಕುಟುಂಬ ಈಗ ಹೆಚ್ಚಿನ ಚಿಕಿತ್ಸೆಗೆ ಹಣ ಇಲ್ಲದೆ ಪರದಾಡ್ತಿದ್ದಾರೆ.
ಸಂದೀಪ್ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನೇನೋ ಗೆದ್ದಿದ್ದಾರೆ. ಆದರೆ ಸಂದೀಪ್‍ಗಾಗಿ ಪರಿತಪಿಸ್ತಿರುವ ಪತ್ನಿ ಸೀಮಾ ಇನ್ನೂ ಕಂಗಾಲಾಗಿದ್ದಾರೆ. ಸಂದೀಪ್ ಪತ್ನಿ ಸೀಮಾ ಗೋಳಾಡ್ತಾ ಮಾತನಾಡಿ, ಒಂದೆಡೆ ನಿಮ್ಹಾನ್ಸ್‍ಗೆ ಶಿಫ್ಟ್ ಮಾಡೋಣ ಅಂದ್ರೆ ಅಲ್ಲಿ ಬೆಡ್ ಇಲ್ಲ. ಇಎಸ್‍ಐ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ವಂತೆ. ನಮಗೆ ಏನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ನಮ್ಮ ಸಹಾಯಕ್ಕೆ ಬರ್ತಿಲ್ಲ ಅಂತ ತಮ್ಮ ನೋವನ್ನ ಪಬ್ಲಿಕ್ ಟಿವಿ ಮುಂದೆ ತೋಡಿಕೊಂಡಿದ್ದರು.