ಪಬ್ಲಿಕ್‌ ಟಿವಿ ಇಂಪ್ಯಾಕ್ಟ್- ವಸತಿ ಶಾಲೆಯ ಘೋಷವಾಕ್ಯ ಯಥಾಸ್ಥಿತಿ

Public TV
1 Min Read
VIJAYAPUR 2

ವಿಜಯಪುರ: ವಸತಿ ಶಾಲೆಯ ಘೋಷವಾಕ್ಯ ಸಂಬಂಧ ಪಬ್ಲಿಕ್ ಟಿವಿಯಲ್ಲಿ ವರದಿಯಾದ ಬಳಿಕ ಬರಹವನ್ನು ಮೊದಲಿನಂತೆಯೇ ಬದಲಾವಣೆ ಮಾಡಲಾಗಿದೆ.

ಈ ಕುರಿತು ಶಾಲೆಯ ಪ್ರಿನ್ಸಿಪಾಲ್ ದುಂಡಪ್ಪ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಮುಖ್ಯ ಕಾರ್ಯದರ್ಶಿಗಳ ಮೌಖಿಕ ಸೂಚನೆಯಂತೆ ಘೋಷವಾಕ್ಯ ಬದಲಾಯಿಸಿದ್ದೆವು. ಪಬ್ಲಿಕ್ ಟಿವಿಯಲ್ಲಿ ವರದಿಯಾದ ಬಳಿಕ ಘೋಷವಾಕ್ಯ ಮೊದಲಿನಂತೆಯೇ ಬದಲಾವಣೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ- ಖಾದರ್ ಘೋಷಣೆ

Public Tv IMPACT copy 2 ಆಗಿದ್ದೇನು..?: ವಿಜಯಪುರ (Vijayapur) ಜಿ. ಮುದ್ದೇಬಿಹಾಳ ತಾ. ಘಾಳಪೂಜೆ ಮೊರಾರ್ಜಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಕೇವಲ ವಿಜಯಪುರ ಮಾತ್ರವಲ್ಲ, ರಾಯಚೂರು ಜಿಲ್ಲೆಯ 36 ವಸತಿ ಶಾಲೆಗ ಪೈಕಿ ಬಹುತೇಕ ಕಡೆಗಳಲ್ಲಿ ಕುವೆಂಪು ವಾಕ್ಯವನ್ನ ಬದಲಾಯಿಸಿ ಬರೆಯಲಾಗಿದೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ, ಮಸ್ಕಿ, ಲಿಂಗಸುಗೂರಿನ ಅಡವಿಬಾವಿ ಸೇರಿ ಜಿಲ್ಲೆಯ ಹಲವೆಡೆ ವಾಕ್ಯ ಬದಲಾವಣೆ ಮಾಡಲಾಗಿದೆ.

Share This Article