-ಬಸ್ ಡಿಸೇಲ್ ಟ್ಯಾಂಕ್ ಪರಿಶೀಲನೆಗಿಳಿದ ಅಧಿಕಾರಿಗಳು
ಕಲಬುರಗಿ: ಈಶಾನ್ಯ ಸಾರಿಗೆಯ ಬಹುತೇಕ ಬಸ್‍ಗಳಲ್ಲಿ ಡೀಸೆಲ್ ಟ್ಯಾಂಕ್‍ಗಳನ್ನು ಮುಚ್ಚಲು 1 ಲೀ. ಮತ್ತು 2 ಲೀ. ಪ್ಲಾಸ್ಟಿಕ್ ಬಾಟಲ್‍ಗಳನ್ನು ಬಳಕೆ ಮಾಡಲಾಗುತ್ತಿತ್ತು. ಈ ಸಂಬಂಧ ಪಬ್ಲಿಕ್ ಟಿವಿ ಇಂದು ಬೆಳಗ್ಗೆ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬೆನ್ನೆಲ್ಲೆ ಎಚ್ಚೆತ್ತ ಈಶಾನ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ ಗಳ ತಪಾಸಣೆ ನಡೆಸಿ, ಬಾಟಲ್ ತೆರವು ಮಾಡಿ ಟ್ಯಾಂಕ್‍ಗಳಿಗೆ ಕ್ಯಾಪ್ ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಟ್ಯಾಂಕ್‍ಗಳಿಗೆ ಬಾಟಲ್‍ಗಳನ್ನು ಮುಚ್ಚಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಆದೇಶಿಸುತ್ತೇನೆ. ಡೀಸೆಲ್ ಟ್ಯಾಂಕ್‍ಗಳ ಮುಚ್ಚಳ ಇಲ್ಲದಿರುವ ಬಸ್‍ಗಳನ್ನು ಓಡಿಸಿರುವಂತಹ ಡಿಪೋ ಮ್ಯಾನೇಜರ್ ಸೇರಿದಂತೆ ಇತರೆ ಸಿಬ್ಬಂದಿಯನ್ನು ನಾಳೆಯೇ ಮನೆಗೆ ಕಳುಹಿಸುತ್ತೇನೆ. ಕೆಲವು ದಿನಗಳ ಹಿಂದೆಯೇ ಬೆಂಗಳೂರಿನಿಂದ ಕೆಲವು ಅಧಿಕಾರಿಗಳು ಈಶಾನ್ಯ ಸಾರಿಗೆಯ ವ್ಯವಸ್ಥೆಯ ಬಗೆಗೆ ವರದಿ ನೀಡುವಂತೆ ಕಳುಹಿಸಿದ್ದೇನೆ. ಇಂದು ಬೆಳಗ್ಗೆ ಪಬ್ಲಿಕ್ ಟಿವಿ ವರದಿ ನನ್ನ ಗಮನಕ್ಕೂ ಬಂದಿದ್ದೂ, ನಾಳೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡುತ್ತೇನೆ. ಪಬ್ಲಿಕ್ ಟಿವಿ ಈ ವರದಿಯನ್ನು ನಾನು ಸ್ವಾಗತಿಸುತ್ತೇನೆ ಎಂದು ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
Advertisement
ಡೀಸೆಲ್ ಟ್ಯಾಂಕ್‍ಗಳನ್ನು ಬಂದ್ ಮಾಡಲು 1 ಮತ್ತು 2 ಲೀಟರ್ ನೀರಿನ ಬಾಟಲ್ ಗಳನ್ನೇ ಮುಚ್ಚಳ ಮಾಡಿ ಚಾಲಕರು ಬಸ್ ಚಲಾಯಿಸುತ್ತಿದ್ದಾರೆ. ಹಾಗಾಗಿ ತೈಲ ಸೋರಿಕೆಯಾಗಿ ಬಸ್‍ಗೆ ಬೆಂಕಿ ತಗಲುವ ಸಾಧ್ಯತೆಗಳು ಹೆಚ್ಚಾಗಿವೆ. ಅದರಲ್ಲೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಸಿಲು ಹೆಚ್ಚಾಗಿರುವ ಕಾರಣ ಈ ಬಾಟಲಿ ಕ್ಯಾಪ್ ಅಂತು ಇನ್ನು ಡೇಂಜರಸ್ ಆಗಿದೆ ಅಂತ ನಿವಾಸಿ ಸಿದ್ದರಾಮಯ್ಯ ಹಿರೇಮಠ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದರು.
Advertisement
Advertisement
ಪಬ್ಲಿಕ್ ಟಿವಿಗೆ ಸಿಕ್ಕ ದಾಖಲೆಗಳ ಪ್ರಕಾರ ಕಲಬುರಗಿ ಡಿಪೋ ನಂಬರ್-4ರಲ್ಲಿಯೇ 23 ಬಸ್‍ಗಳಿಗೆ ಡೀಸೆಲ್ ಕ್ಯಾಪ್‍ಗಳಿಲ್ಲ. ಇನ್ನು ಈಶಾನ್ಯ ಸಾರಿಗೆಯ ಹೈದರಾಬಾದ್ ಕರ್ನಾಟಕದ 6 ಜಿಲ್ಲೆ ಅಂದ್ರೆ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಒಟ್ಟು 52 ಡಿಪೋಗಳಿದ್ದು, ಅದೆಷ್ಟು ಬಸ್‍ಗಳ ಡೀಸೆಲ್ ಟ್ಯಾಂಕ್‍ಗಳಿಗೆ ಕ್ಯಾಪ್ ಇಲ್ಲದೇ ಪ್ರಯಾಣಿಕರ ಸಾವಿಗೆ ಕಾಯ್ತಿದೆಯೋ ಗೊತ್ತಿಲ್ಲ. ಈ ಬಗ್ಗೆ ಈಶಾನ್ಯ ಸಾರಿಗೆ ಅಧಿಕಾರಿಗಳನ್ನು ಕೇಳಿದ್ರೆ, ಈ ಬಗ್ಗೆ ವರದಿ ಮಾಡಿದ್ದೇವೆ. ಆದ್ರೆ ಪ್ರಯೋಜನವಾಗಿಲ್ಲ ಅಂತಾ ಇಂಧನ ನಿರ್ವಾಹಕ ನಾಗರಾಜ್ ರೆಡ್ಡಿ ಹೇಳಿದ್ದರು.
ಈಶಾನ್ಯ ಸಾರಿಗೆ ಸಂಸ್ಥೆಗೆ ಇತ್ತೀಚೆಗೆ ಮಲೇಶ್ಯಾದಲ್ಲಿ ರಾಷ್ಟ್ರಮಟ್ಟದ ಇಂಡಿಯಾ ಬಸ್ ಸೇಫ್ಟಿ ಅವಾರ್ಡ್ ಸಿಕ್ಕಿತ್ತು. ಆದರೆ ಅದ್ಯಾಕೆ ಈ ಸಂಸ್ಥೆಗೆ ಅವಾರ್ಡ್ ಕೊಟ್ರೆನೋ ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=1AvXi-0xSVo