– ತಲೆಮರೆಸಿಕೊಂಡಿರೋ ನಾಲ್ವರಿಗೆ ಪೊಲೀಸರ ಹುಡುಕಾಟ
ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಕೆಲ ಕಾಮುಕರು ಕೀಟಲೆ ಮಾಡಿದ್ದ ದೃಶ್ಯಗಳು ಪಬ್ಲಿಕ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲದೇ ಮತ್ತೊಂದು ಪ್ರಕರಣದಲ್ಲೂ ಮತ್ತಿಬ್ಬರು ಕಾಮುಕರನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿಯ ಅತಿಕ್ ಮತ್ತು ಶಿವಕುಮಾರ್ ಬಂಧಿತ ಕಾಮುಕರು. ಈ ಇಬ್ಬರು ಯುವಕರು ಬೆಂಗಳೂರಿನ ಸ್ನೇಹಿತರ ರೂಂಗೆ ಬಂದಿದ್ದರು. ಎಂ.ಜಿ ರೋಡ್‍ನಲ್ಲಿ ಮಸ್ತಿ ಜೊತೆಗೆ ಕಾಮದಾಟ ಆಡಲು ಹೋಗಿ ಚಪ್ಪಲಿ ಏಟು ತಿಂದಿದ್ದರು. ಉಳಿದಂತೆ ತಲೆಮರೆಸಿಕೊಂಡಿರುವ ನಾಲ್ವರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Advertisement
Advertisement
ಪೊಲೀಸರು ಚಾಪೆ ಕೆಳಗೆ ನುಗ್ಗಿ ಕಾಮುಕರ ವಿರುದ್ಧ ಅದೆಷ್ಟೇ ಕ್ರಮ ಕೈಗೊಂದರೂ ಕಾಮುಕರು ರಂಗೋಲಿ ಕೆಳಗೆ ನುಗ್ಗಿ ಕಾಡುತ್ತಾರೆ ಎನ್ನುವುದಕ್ಕೆ ನಿನ್ನೆ ನ್ಯೂ ಇಯರ್ ಸೆಲಬ್ರೇಷನ್ ವೇಳೆ ನಡೆದ ಘಟನೆಗಳೇ ಸಾಕ್ಷಿ. ಹೊಸ ವರ್ಷದ ಪಾರ್ಟಿ ವೇಳೆ ಯುವತಿಯರ ಜೊತೆಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದ ಬಗ್ಗೆ ಪಬ್ಲಿಕ್ ಟಿವಿ ಬೆಳಗ್ಗೆಯಿಂದ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು.
Advertisement
ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಕಾಮುಕರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವುದು. ಕಿರುಕುಳಕ್ಕೆ ಒಳಗಾದವರು ಯಾವುದೇ ರೀತಿಯ ದೂರು ನೀಡಿಲ್ಲ. ಆದರೂ ನಾವೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಕಾಮುಕರಿಗೆ ತಕ್ಕ ಪಾಠ ಆಗಬೇಕು ಎಂದು ಹೇಳಿದ್ದರು.
Advertisement
ವ್ಯಕ್ತಿಯೊಬ್ಬ ಸೆಲೆಬ್ರೇಷನ್ ಮಾಡುವುದನ್ನು ಬಿಟ್ಟು ಹುಡುಗಿಯ ಮೈ ಮುಟ್ಟಿ ಮಜಾ ತಗೆದುಕೊಳ್ಳುತ್ತಿದ್ದ. ಹುಡುಗಿ ಆ ಕ್ಷಣಕ್ಕೆ ಕಾಳಿ ಅವತಾರ ತಾಳಿ ಚಪ್ಪಲಿಯಲ್ಲಿ ಮಂಗಳಾರತಿ ತಗೊಂಡಿದ್ದಳು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿ ಕಾಮುಕರಿಗಾಗಿ ಹುಡುಕಾಡಿದ್ದಾರೆ. ಸಂಜೆ ವೇಳೆಗೆ ಪೊಲೀಸರ ಕೈಗೆ ಚಪ್ಪಲಿ ಏಟು ತಿಂದ ಅತಿಕ್ ಮತ್ತು ಶಿವಕುಮಾರ್ ತಗ್ಲಾಕೊಂಡಿದ್ದಾರೆ.
ಇತ್ತ ಹೊಸ ವರ್ಷಾಚರಣೆ ವೇಳೆ ಕಿರುಕುಳ ಕೊಟ್ಟ ಕಾಮುಕರ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಗುಡುಗಿದ್ದರು. ಸಚಿವ ಆರ್.ಅಶೋಕ್ ಮಾತನಾಡಿ, ಕಿಡಿಗೇಡಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುತ್ತೇವೆ. ಬಂಧನ ಕುರಿತು ನಗರ ಪೊಲೀಸ್ ಆಯುಕ್ತರ ಜೊತೆ ಚರ್ಚೆ ಮಾಡುತ್ತೇನೆ ಎಂದಿದ್ದರು.