ಬೀದರ್: ಜಿಲ್ಲೆಯ ಐತಿಹಾಸಿಕ ಪಾಪನಾಶ ಕೆರೆಯಲ್ಲಿ ಮೀನುಗಳ ಮಾರಣಹೋಮವಾಗಿದ್ದ ಸುದ್ದಿ ಬೆನ್ನಲ್ಲೇ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕೆರೆಗೆ ಭೇಟಿ ನೀಡಿ, ಸಿಬ್ಬಂದಿಯಿಂದ ಕೆರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ.
ಬುಧವಾರ ಪಾಪನಾಶ ಕೆರೆಯಲ್ಲಿ ವಿಷಕಾರಿ ನೀರಿನಿಂದಾಗಿ ಮೀನುಗಳ ಮಾರಣಹೋಮವಾಗಿತ್ತು. ಈ ಕುರಿತು `ಪಬ್ಲಿಕ್ ಟಿವಿ’ ವರದಿ ಬಿತ್ತರಿಸಿದ ಬೆನ್ನಲ್ಲೇ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕೆರೆಗೆ ಭೇಟಿ ನೀಡಿದ್ದು, ಸಿಬ್ಬಂದಿಗೆ ಕೆರೆಯನ್ನು ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಸಾಕ್ಷ್ಯಾಧಾರಗಳ ಇರದ್ದಕ್ಕೆ ಸಿದ್ದರಾಮಯ್ಯಗೆ ಲೋಕಾಯುಕ್ತದಿಂದ ಕ್ಲೀನ್ ಚಿಟ್ – ಪರಮೇಶ್ವರ್
ಸೂಚನೆ ಬೆನ್ನಲ್ಲೇ ಸಿಬ್ಬಂದಿ ಕೆರೆಯನ್ನು ಸ್ವಚ್ಛಗೊಳಿಸಿದ್ದು, ಎಸೆದಿದ್ದ ರಾಶಿ ರಾಶಿ ತ್ಯಾಜ್ಯವನ್ನು ಜೆಸಿಬಿ ಮೂಲಕ ಹೊರತೆಗೆದು ಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ. ಕೆರೆಯಲ್ಲಿ ಬಿದಿದ್ದ ಪ್ಲಾಸ್ಟಿಕ್, ಪೂಜಾ ಸಾಮಗ್ರಿಗಳು, ಫೋಟೋಗಳು ಎಲ್ಲವನ್ನು ಜೆಸಿಬಿ ಹಾಗೂ ಕ್ಲೀನಿಂಗ್ ವಾಹನಗಳು, ಹತ್ತಾರು ಸಿಬ್ಬಂದಿ ಸೇರಿ ಸ್ವಚ್ಛ ಮಾಡಿದ್ದಾರೆ.
ಜಿಲ್ಲಾಡಳಿತ ಹಾಗೂ ಜನರ ನಿರ್ಲಕ್ಷ್ಯದಿಂದಾಗಿ ಪ್ರತಿನಿತ್ಯ ಜನರು ನಗರದ ತ್ಯಾಜ್ಯವನ್ನು ಕೆರೆಗೆ ತಂದು ಬಿಸಾಡುತ್ತಿದ್ದು, ಕೆರೆಯ ನೀರು ಸಂಪೂರ್ಣ ವಿಷಕಾರಿಯಾಗಿ ಲಕ್ಷಾಂತರ ಮೀನುಗಳ ಮಾರಣಹೋಮವಾಗಿತ್ತು.ಇದನ್ನೂ ಓದಿ: ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತ ಪ್ರಮಾಣ ಸ್ವೀಕಾರ