-10 ಗಂಟೆಗೆ ಯಾರು ಕಚೇರಿಗೆ ಬರಲ್ಲ
ಬೆಂಗಳೂರು: ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಬಿಬಿಎಂಪಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರಲ್ಲ. ಬಯೋಮೆಟ್ರಿಕ್ ಯಂತ್ರದಲ್ಲಿ 15 ನಿಮಿಷಕ್ಕೂ ಹೆಚ್ಚು ಸಮಯವನ್ನು ತಡವಾಗಿ ಇಟ್ಟಿದ್ದಾರೆ ಎಂದು ಪಾಲಿಕೆ ವಿಶೇಷ ಆಯುಕ್ತ ರಣ್‍ದೀಪ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಾಲಿಕೆಯ ವಿಶೇಷ ಆಯುಕ್ತರು, ಸಿಬ್ಬಂದಿ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂಬ ವಿಷಯ ನನ್ನ ಗಮನಕ್ಕೂ ಬಂದಿದೆ. ಬೆಳಗ್ಗೆ 10.15ಕ್ಕೆ ನಾನು ಕಚೇರಿಗೆ ಬಂದಾಗ ಅರ್ಧಕ್ಕೂ ಹೆಚ್ಚು ಸಿಬ್ಬಂದಿ ಬಂದಿರಲ್ಲ. ಹೀಗಾಗಿಯೇ ಫೇಸ್ ರಿಕ್ಗನೈಜೇಷನ್ ಮತ್ತು ಬಯೋಮೆಟ್ರಿಕ್ ಹಾಜರಾತಿಯನ್ನು ತರಲಾಗಿತ್ತು. ಕಚೇರಿಯ ಅರ್ಧಕ್ಕೂ ಹೆಚ್ಚು ಸಿಬ್ಬಂದಿ ಬಯೋಮೆಟ್ರಿಕ್ ಹಾಜರಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿಲ್ಲ ಎಂದರು.
Advertisement
ಪಬ್ಲಿಕ್ ಟಿವಿ ಹೇಳಿದಂತೆ ಬಯೋಮೆಟ್ರಿಕ್ ಯಂತ್ರದಲ್ಲಿ ಸಮಯ ವ್ಯತ್ಯಾಸ ಕಂಡು ಬಂದಿದೆ. ಈ ಕೂಡಲೇ ಸಮಯ ಸರಿಯಾಗಿ ನಿಗದಿ ಮಾಡುವಂತೆ ಆದೇಶಿಸಿದ್ದೇನೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆದುಕೊಳ್ಳಲಾಗುತ್ತದೆ. ದುರುದ್ದೇಶದಿಂದ ಮಷೀನ್ ನಲ್ಲಿ ಟೈಮ್ ಬದಲಿಸಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಬಯೋಮೆಟ್ರಿಕ್ ಹಾಜರಾತಿ ಜೊತೆ ಸಿಬ್ಬಂದಿಯ ಸಂಬಳದ ಸ್ಲಿಪ್ ಲಿಂಕ್ ಮಾಡಲಾಗುತ್ತದೆ. 10.30ರೊಳಗೆ ಪಂಚ್ ಮಾಡಬೇಕು ಮತ್ತು 5.30ರೊಳಗೆ ಪಂಚ್ ಮಾಡಿ ಹೋದ್ರೆ ಅಂತಹವರ ಅರ್ಧ ಸಂಬಳ ಕಡಿತಗೊಳಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.