ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳನ್ನು (Indira Canteen) ಕತ್ತಲೆಗೆ ದೂಡಿದ್ದ ಬಿಬಿಎಂಪಿ ಇದೀಗ ಎಚ್ಚೆತ್ತುಕೊಂಡಿದ್ದು, ‘ಪಬ್ಲಿಕ್ ಟಿವಿ’ ವರದಿಯ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್‌ಗಳಿಗೆ ಬೆಳಕಿನ ಭಾಗ್ಯ ಸಿಕ್ಕಿದೆ.
ನಗರದ ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ, ಮೊಂಬತ್ತಿ ಬೆಳಕಿನಡಿ ಗ್ರಾಹಕರು ಊಟ ಮಾಡುತ್ತಿದ್ದರು. ಈ ಬಗ್ಗೆ ಇಂದಿರಾ ಕ್ಯಾಂಟೀನ್‌ಗಳಿಗೆ ಕತ್ತಲೆ ಭಾಗ್ಯ ಎಂದು ಪಬ್ಲಿಕ್ ಟಿವಿ ವರದಿಯೊಂದು ಬಿತ್ತರಿಸಿತ್ತು. ವರದಿ ಪ್ರಸಾರದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ಬೆಸ್ಕಾಂಗೆ ಇನ್ನೆರೆಡು ತಿಂಗಳಲ್ಲಿ ಬಿಲ್ ಪಾವತಿ ಮಾಡುವುದಾಗಿ ಭರವಸೆ ನೀಡಿದ್ದು, ಮತ್ತೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದೆ.ಇದನ್ನೂ ಓದಿ: ರಾಜ್ಯದ ಎರಡನೇ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ 44ರ ಸಂಭ್ರಮ
Advertisement
Advertisement
ಮೆಜೆಸ್ಟಿಕ್, ವೆಸ್ಟ್ ಹಾಫ್ ಕಾರ್ಡ್ ರಸ್ತೆ ಸೇರಿ ಹಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಾಲ್ಕೈದು ತಿಂಗಳುಗಳಿಂದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಮೆಜೆಸ್ಟಿಕ್‌ನ ಇಂದಿರಾ ಕ್ಯಾಂಟೀನ್‌ನ ಬಿಲ್ 8 ಸಾವಿರದ 340 ರೂ. ಆಗಿತ್ತು.
Advertisement
ಪ್ರತಿಯೊಂದು ಇಂದಿರಾ ಕ್ಯಾಂಟೀನ್‌ಗಳ ವಿದ್ಯುತ್ ಬಿಲ್‌ನ್ನು ಆಯಾ ವಲಯದ ಬಿಬಿಎಂಪಿ (BBMP) ಇಂಜಿನಿಯರ್‌ಗಳೆ ಪಾವತಿ ಮಾಡಬೇಕು. ಈ ಇಂಜಿನಿಯರ್‌ಗಳಿಗೆ ಪಾಲಿಕೆಯ ಕೇಂದ್ರ ಕಚೇರಿಯಿಂದ ಹಣ ಬಿಡುಗಡೆ ಮಾಡದ ಹಿನ್ನೆಲೆ, ಬೆಸ್ಕಾಂಗೆ ಬಿಲ್ ಕಟ್ಟಿರಲಿಲ್ಲ. ಹೀಗಾಗಿ ಬಿಬಿಎಂಪಿಯ ಹೆಲ್ತ್ ಇನ್ಸ್ಪೆಕ್ಟರ್ ಅವರೇ ಖುದ್ದು ಇಂದಿರಾ ಕ್ಯಾಂಟೀನ್‌ಗೆ ಧಾವಿಸಿ ಪರಿಶೀಲಿಸಿದ್ದಾರೆ.
Advertisement
ಇದೀಗ ಈ ಕ್ಯಾಂಟೀನ್‌ಗೂ ಬೆಳಕಿನ ಭಾಗ್ಯ ನೀಡಲಾಗಿದ್ದು, ವೆಸ್ಟ್ ಹಾಫ್ ಕಾರ್ಡ್ ರಸ್ತೆಯ ರಾಜುಕುಮಾರ್ ವಾರ್ಡ್ನ ಇಂದಿರಾ ಕ್ಯಾಂಟೀನ್‌ನಲ್ಲಿಯೂ ವಿದ್ಯುತ್ ಸಂಪರ್ಕವನ್ನ ಕಲ್ಪಿಸಲಾಗಿದೆ. ಪಬ್ಲಿಕ್ ಟಿವಿಯ ವರದಿಯ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಕತ್ತಲಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾಂಟೀನ್‌ಗಳಿಗೆ ಬೆಳಕು ನೀಡಿದೆ.ಇದನ್ನೂ ಓದಿ: Mysuru Dasara: ಅದ್ದೂರಿ ಜಂಬೂಸವಾರಿಗೆ ಕ್ಷಣಗಣನೆ – ನಾಳೆ ಏನೆಲ್ಲಾ ವಿಶೇಷತೆ ಇರುತ್ತೆ?