ಚಿಕ್ಕೋಡಿ: ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಹೆಸ್ಕಾಂ ಇಲಾಖೆ ಅಧಿಕಾರಿಗಳು, ಮನೆಗಳ ಮೇಲೆ ಅಳವಡಿಸಿದ್ದ ಹೈ ಟೆನ್ಶನ್ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಮನೆಗಳ ಮೇಲೆ ವಿದ್ಯುತ್ ತಂತಿಗಳನ್ನು ಹಾಕಲಾಗಿತ್ತು. ಸ್ವಲ್ಪ ವಿದ್ಯುತ್ ತಾಗಿದರೆ ಪ್ರಾಣ ಹೋಗುತ್ತದೆ ಎಂದು ಹೆಸ್ಕಾಂ ಅಧಿಕಾರಿಗಳಿಗೆ ತಿಳಿದಿದ್ದರೂ ಗ್ರಾಮದ ಬಹುತೇಕ ಮನೆಗಳ ಮೇಲೆ ಹೈ ಟೆನ್ಶನ್ ವಿದ್ಯುತ್ ಕೇಬಲ್‍ಗಳನ್ನು ಹರಿ ಬಿಟ್ಟಿದ್ದು, ಜನರು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
Advertisement
Advertisement
ಕಾಂಕ್ರೆಟ್ ಮನೆಗಳು ಆಗಿರುವುದರಿಂದ ಸ್ವಲ್ಪ ಶಾರ್ಟ್ ಸಕ್ರ್ಯೂಟ್ ಆದರೂ ಮನೆಗೆಲ್ಲ ಕರೆಂಟ್ ತಾಗಿ ಬಿಡುತ್ತದೆ ಎಂಬ ಭಯ ಜನರನ್ನು ಕಾಡುತ್ತಿತ್ತು. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪ್ಲಾಸ್ಟಿಕ್ ಪೈಪ್ ಅಳವಡಿಸಿಕೊಳ್ಳಿ ಏನೂ ಆಗಲ್ಲ ಎಂದು ಹೆಸ್ಕಾಂ ಸಿಬ್ಬಂದಿ ಹೇಳಿದ್ದರು. ಹಾಗೆ ಪ್ಲಾಸ್ಟಿಕ್ ಪೈಪ್ ಹಾಕಿದ್ದರೂ ಸುಟ್ಟು ಹೋಗುತ್ತಿದ್ದವು.
Advertisement
ಇಂದು ಪಬ್ಲಿಕ್ ಟಿವಿಯಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ವಿಸ್ತೃತ ವರದಿ ಪ್ರಸಾರವಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು ಮನೆ ಮೇಲೆ ಹಾಯ್ದು ಹೋಗಿದ್ದ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ, ಗ್ರಾಮಸ್ಥರ ಆತಂಕವನ್ನು ದೂರ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews