ಬೆಂಗಳೂರು: ಕಾಡುಗೋಡಿ (Kadugodi) ಬಳಿ ವಿದ್ಯುತ್ ತಂತಿ ತುಳಿದು ತಾಯಿ ಮಗು ಪತಿಯ ಕಣ್ಮುಂದೆಯೇ ಸುಟ್ಟು ಕರಕಲಾಗಿದ್ರು. 11 ಕೆವಿ ಸಾಮಥ್ರ್ಯದ ವಿದ್ಯುತ್ ತಂತಿ ತುಂಡಾದ ಎರಡು ಗಂಟೆಗಳ ನಂತರ ಈ ದುರಂತ ನಡೆದಿತ್ತು.
ಯಾರಾದ್ರೂ ದಾರಿ ಹೋಕರು, ಸ್ಥಳೀಯರು ಎಚ್ಚೆತ್ತು ಬೆಸ್ಕಾಂಗೆ (BESCOM) ದೂರು ಕೊಟ್ಟಿದ್ರೆ. ಬೆಸ್ಕಾಂ ಸಿಬ್ಬಂದಿ ಆ ಹೊತ್ತಲ್ಲಿಯೇ ಸ್ಪಂದಿಸಿದ್ರೆ ಘೋರ ದುರಂತ ತಪ್ಪುತ್ತಿತ್ತು. ಘನಘೋರ ದುರಂತದ ದೃಶ್ಯಾವಳಿ ಹಾಗೂ ದುರಂತಕ್ಕೆ ಮುನ್ನ ಮತ್ತು ನಂತರ ಏನೆಲ್ಲಾ ನಡೆಯಿತು ಎಂಬುದರ ದೃಶ್ಯಾವಳಿ ಪಬ್ಲಿಕ್ ಟಿವಿ ಲಭ್ಯವಾಗಿದೆ.
Advertisement
Advertisement
ಅಂದು ಏನೇನಾಗಿತ್ತು..?: ನವೆಂಬರ್ 19 ಮುಂಜಾನೆ 3.41ಕ್ಕೆ ವಿದ್ಯುತ್ ತಂತಿ ಕಟ್ ಆಗಿ ಬಿದ್ದು ಹೊತ್ತಿ ಉರಿದಿದೆ. 3.43ಕ್ಕೆ ಅದೇ ದಾರಿಯಲ್ಲಿ ಬರುತ್ತಿದ್ದ ಪಾದಾಚಾರಿಯೊಬ್ಬ ಬೆದರಿ ಓಡಿಹೋಗಿದ್ದಾನೆ. ಇನ್ನು 5.41ಕ್ಕೆ ಅದೇ ದಾರಿಯಲ್ಲಿ ಗಂಡ-ಹೆಂಡತಿ ಹಾಗೂ ಮಗು ಆಗಮಿಸಿದ್ದಾರೆ. 5.42ಕ್ಕೆ ಮಗು ಎತ್ತಿಕೊಂಡಿದ್ದ ತಾಯಿ ವೈರ್ ತುಳಿದಿದ್ದಾರೆ. 5.42ಕ್ಕೆ ಅಸಹಾಯಕನಾಗಿ ತಂದೆ ಪರದಾಡಿದ್ದಾರೆ. 5.42ಕ್ಕೆ ಬೆಸ್ಕಾಂ ವಾಹನ ಸ್ಥಳಕ್ಕೆ ಬಂದಿದೆ. ಇದನ್ನೂ ಓದಿ: ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, ಮಗಳು ಬಲಿ- ಐವರು ಅಧಿಕಾರಿಗಳ ಅಮಾನತು
Advertisement
Advertisement
ಈ ಸುದ್ದಿಯನ್ನು ಪಬ್ಲಿಕ್ ಟಿವಿ ಬಿತ್ತರಿಸಿದ ಕೂಡಲೇ ಎಚ್ಚೆತ್ತ ಬೆಸ್ಕಾಂ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದೆ. ಸಾರ್ವಜನಿಕರೇ ಗಮನಿಸಿ, ವಿದ್ಯುತ್ ಮಾರ್ಗದಲ್ಲಿ ವೈರ್ ತುಂಡಾಗಿದೆಯಾ? ವೈರ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ಯಾ? ಇತರೆ ಅಪಾಯಕಾರಿ ಸನ್ನಿವೇಶ ಕಂಡು ಬಂದಿದ್ಯಾ?. ಈ ಕೂಡಲೇ 1912 ಬೆಸ್ಕಾಂ ಸಹಾಯವಾಣಿ ಕರೆ ಮಾಡಿ ಎಂದು ಪ್ರಕಟಣೆ ಹೊರಡಿಸಿದೆ. ಈ ನಡುವೆ ಚೆಸ್ಕಾಂ ನಿರ್ಲಕ್ಷ್ಯಕ್ಕೆ ಕೆಆರ್ ಪೇಟೆಯ ಬೆಳತೂರು ಗ್ರಾಮದ ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ ರವಿಕುಮಾರ್ ಸಾವನ್ನಪ್ಪಿದ್ದಾರೆ.