ಮಡಿಕೇರಿ: ಕೊಡಗು ಜಿಲ್ಲೆಯ ಪ್ರವಾಸಿ ಕೇಂದ್ರಗಳು ಮತ್ತು ಕೆಲವೆಡೆ ನಕಲಿ ಚಾಕ್ಲೇಟ್ ಮಾರಾಟ ನಡೆಯುತ್ತಿರುವ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡಲಾಗಿತ್ತು. ಈ ಸುದ್ದಿ ವರದಿಯಾದ ಬೆನ್ನಲ್ಲೇ ಇದೀಗ ಆಹಾರ ಇಲಾಖೆ ಅಧಿಕಾರಿಗಳು ಮಡಿಕೇರಿಯಲ್ಲಿ ದಾಳಿ ನಡೆಸಿ, ಕೆಲ ವರ್ತಕರಿಗೆ ನೋಟಿಸ್ ನೀಡಿದ್ದಾರೆ.
ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ದಂಧೆ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಆಹಾರ ಇಲಾಖೆಯ ಹಿರಿಯ ಅಧಿಕಾರಿ ಶಿವಕುಮಾರ್, ರಾಜಾಸೀಟ್, ಅಬ್ಬಿಫಾಲ್ಸ್, ಕಾವೇರಿ ನಿಸರ್ಗಧಾಮ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಹೋಮ್ ಮೇಡ್ ದಂಧೆ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಚಾಕ್ಲೇಟ್ ಬಣ್ಣ ಬಯಲು
Advertisement
Advertisement
ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ನಿಯಮಾನುಸಾರ ಪರವಾನಗಿ ಪಡೆಯಬೇಕು, ನಕಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಅಧಿಕಾರಿಗಳು ಹಲವು ವರ್ತಕರಿಗೆ ನೋಟೀಸ್ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲೆಡೆ ಹಲವು ತಂಡಗಳು ಕಾರ್ಯಾಚರಣೆ ನಡೆಸಲಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
Advertisement
Advertisement
ಕೊಡಗಿನ ಹೋಂ ಮೇಡ್ ಚಾಕ್ಲೇಟ್‍ಗೆ ವಿಶೇಷ ಸ್ಥಾನಮಾನ ಇದೆ. ರಾಜ್ಯದ ಹಾಗೂ ಹೊರರಾಜ್ಯದಿಂದ ಬರುವ ಪ್ರವಾಸಿಗರು ಅಪಾರ ಪ್ರಮಾಣದಲ್ಲಿ ಚಾಕ್ಲೇಟ್ ಕೊಳ್ಳುತ್ತಾರೆ. ಇದನ್ನೇ ಎನ್‍ಕ್ಯಾಶ್ ಮಾಡಿಕೊಂಡ ದಂಧೆಕೋರರು ಹೋಂಮೇಡ್ ಹೆಸರಲ್ಲಿ ಜನರ ಹೊಟ್ಟೆಗೆ ವಿಷ ತುಂಬುತ್ತಿದ್ದಾರೆ. ಹೊರರಾಜ್ಯದಿಂದ ಚಾಕ್ಲೇಟ್ ಸ್ಲ್ಯಾಬ್‍ಗಳನ್ನು ತಂದು ಅವುಗಳನ್ನೇ ಕರಗಿಸಿ ಬೇಕಾದ ಶೇಪ್‍ಗಳಿಗೆ ಬದಲಾಯಿಸಿ ಮಾರಾಟ ಮಾಡುತ್ತಿದ್ದಾರೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಚಾಕ್ಲೇಟ್ ತಯಾರಿಸುತ್ತಿದ್ದಾರೆ. ಈ ಚಾಕ್ಲೇಟ್ ಮೇಲೆ ತಯಾರಿಕಾ ದಿನ ಆಗಲಿ, ಎಕ್ಸ್ ಪೈರಿ ಡೇಟ್ ಆಗಲಿ ಯಾವುದೂ ಇಲ್ಲ. ಅಷ್ಟೇ ಏಕೆ ಆಹಾರ ಸುರಕ್ಷಾ ಇಲಾಖೆ ನೀಡುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ಅನುಮತಿ ಕೂಡ ಇಲ್ಲ.