ಬೆಂಗಳೂರು: ಉಪಮುಖ್ಯಮಂತ್ರಿ ಪರಮೇಶ್ವರ್ ಬೆಂಬಲಿಗರಿಂದ ಫ್ಲೆಕ್ಸ್ ಅಳವಡಿಕೆ ವಿಚಾರವಾಗಿ ಇಂದು ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ಈ ವರದಿ ಬಳಿಕ ಎಚ್ಚೆತ್ತ ಪರಮೇಶ್ವರ್, ಫ್ಲೆಕ್ಸ್ ಹಾಕಿದ ಬೆಂಬಲಿಗರ ಮೇಲೆ ಎಫ್‍ಐಆರ್ ಹಾಕುವಂತೆ ಸೂಚಿಸಿದ್ದಾರೆ.
ಪರಮೇಶ್ವರ್ ಹುಟ್ಟುಹಬ್ಬದ ಹಿನ್ನೆಲೆ ಬೆಂಬಲಿಗರು ಶುಭಕೋರಿ ಸಿಎಂ ಗೃಹಕಚೇರಿ ಕೃಷ್ಣಾದ ಎದುರೇ ಬ್ಯಾನರ್, ಫ್ಲೆಕ್ಸ್ ಹಾಕಿದ್ದರು. ಈ ಕುರಿತು ಪಬ್ಲಿಕ್ ಟಿವಿಯಲ್ಲಿ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಪರಮೇಶ್ವರ್, ನನ್ನ ಬೆಂಬಲಿಗರ ಮೇಲೆ ಎಫ್‍ಐಆರ್ ಹಾಕಿ ಅಂತಾ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
Advertisement
ಬಿಬಿಎಂಪಿ ಸಿಎಂ ಗೃಹಕಚೇರಿ ಕೃಷ್ಣಾ ಎದುರು ರಾರಾಜಿಸುತ್ತಿದ್ದ ಫ್ಲೆಕ್ಸ್ ಗಳನ್ನು ತೆರವುಗೊಳಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಡಿಸಿಎಂ ಪರಮೇಶ್ವರ್ ಗೆ ಹುಟ್ಟುಹಬ್ಬದ ಶುಭ ಕೋರಿ ಫ್ಲೆಕ್ಸ್ ಗಳನ್ನು ಅಳವಡಿಸಿದ್ದರು. ಫ್ಲೆಕ್ಸ್ ಅಳವಡಿಸಿದ್ದ ಸರ್ಕಾರಿ ನೌಕರರ ಸಂಘದವರ ಮೇಲೆ ದೂರು ದಾಖಲಿಸಲು ನಿರ್ಧರಿಸಲಾಗಿದೆ.
Advertisement
No occasion calls for putting up flexes and damaging the aesthetics of our city. Definitely not my birthday. I had already requested my well wishers not to celebrate my birthday.
I appeal to everybody to stop putting up flex banners. Let's keep our city clean and beautiful!
— Dr. G Parameshwara (@DrParameshwara) August 6, 2018
Advertisement
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನಂಘದ ಅಧ್ಯಕ್ಷ ಎಚ್.ಕೆ ರಾಮು, ಹಿರಿಯ ಉಪಾಧ್ಯಕ್ಷ ಕೆಜಿ ಆಂಜಿನಪ್ಪ, ರಾಜ್ಯ ಪರಿಷತ್ ಸದಸ್ಯ ಮಂಜುನಾಥ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದೂರು ದಾಖಲಿಸಲಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಎಇಇ ಜಯಸಿಂಹ ಮಾಹಿತಿ ನೀಡಿದ್ದಾರೆ.
Advertisement
ಈ ಬಗ್ಗೆ ಟ್ವೀಟ್ ಮಾಡಿದ ಡಾ. ಜಿ. ಪರಮೇಶ್ವರ್, “ಯಾವುದೇ ಕಾರಣಕ್ಕೂ ಯಾವುದೇ ಸಮಾರಂಭಕ್ಕೂ ಫ್ಲೆಕ್ಸ್ ಗಳನ್ನು ಅಳವಡಿಸಿ ನಗರವನ್ನು ಹಾಳು ಮಾಡುವಂತಿಲ್ಲ. ಖಂಡಿತವಾಗಿಯೂ ಇದು ನನ್ನ ಹುಟ್ಟುಹಬ್ಬವಲ್ಲ. ನನ್ನ ಹುಟ್ಟುಹಬ್ಬ ಆಚರಿಸದಂತೆ ನಾನು ನನ್ನ ಹಿತೈಷಿಗಳ ಹತ್ತಿರ ಕೇಳಿಕೊಂಡಿದ್ದೇನೆ. ಎಲ್ಲರು ಫ್ಲೆಕ್ಸ್ ಗಳನ್ನು ಅಳವಡಿಸುವುದನ್ನು ನಿಲ್ಲಿಸಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ನಗರವನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಇಡೋಣ” ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews