ಕೊಪ್ಪಳ: ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿ ಅವರ ಮದ್ಯದಂಗಡಿಗಳಲ್ಲಿ ನಡೆಯುವ ಹಗಲು ದರೋಡೆ ಬಗ್ಗೆ ಪಬ್ಲಿಕ್ ಟಿವಿ ವಿಸ್ತ್ರತವಾಗಿ ವರದಿ ಮಾಡಿತ್ತು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಎಂಆರ್‍ಪಿ ದರಕ್ಕಿಂತ ಹೆಚ್ಚು ಮಾರಾಟ ಮಾಡುವ ಬಾರ್‍ಗಳ ಮೇಲೆ ದಾಳಿ ಮಾಡಿ ಕೇಸ್ ದಾಖಲಿಸಿಕೊಂಡಿದ್ದಾರೆ.
Advertisement
ಗಂಗಾವತಿ ತಾಲೂಕಿನಲ್ಲಿ ಒಟ್ಟು 17 ಸಿಎಲ್ 2 ಬಾರ್‍ಗಳಿದ್ದು ಎಲ್ಲವೂ ಶಾಸಕ ಇಕ್ಬಾಲ್ ಅನ್ಸಾರಿ ಒಡೆತನದಲ್ಲಿಯೇ ಇವೆ. ಸಾಮಾನ್ಯವಾಗಿ ಸಿಎಲ್ 2 ಮದ್ಯದಂಗಡಿಯಲ್ಲಿ ಎಂಆರ್‍ಪಿ ದರಕ್ಕೆ ಮದ್ಯ ಮಾರಾಟ ಮಾಡಬೇಕು. ಜೊತೆಗೆ ಅಲ್ಲಿಯೇ ನಿಂತು ಕುಡಿಯಲು ಅವಕಾಶ ಇಲ್ಲ. ಆದ್ರೆ, ಗಂಗಾವತಿಯ ಎಲ್ಲ ಸಿಎಲ್ 2 ಅಂಗಡಿಯಲ್ಲಿ ಪ್ರತಿ ಫುಲ್ ಬಾಟಲ್ ಮೇಲೆ 40 ರಿಂದ 50 ರೂಪಾಯಿ ಹೆಚ್ಚು ಹಣ ಪೀಕುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿ ಲಿಕ್ಕರ್ ಲಾಬಿಯನ್ನು ಎಳೆಎಳೆಯಾಗಿ ವರದಿ ಮಾಡಿತ್ತು.
Advertisement
ಇದನ್ನೂ ಓದಿ: ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ
Advertisement
ಪ್ರತಿಕ್ರಿಯೆ ನೀಡಲು ಹಿಂದೇಟು: ಈ ಕುರಿತು ಶಾಸಕ ಇಕ್ಬಾಲ್ ಅನ್ಸಾರಿ ಅವರನ್ನು ಕೇಳಿದ್ರೆ ಅವರಿಂದ ಯಾವುದೇ ಪ್ರತಿಕ್ರಿಯೆ ಪಬ್ಲಿಕ್ ಟಿವಿಗೆ ನೀಡಿಲ್ಲ. ಬದಲಾಗಿ ಪತ್ರಿಕೆಗಳಿಗೆ ಪ್ರತಿಕ್ರಿಯಿಸಿರುವ ಶಾಸಕರು ಅಕ್ರಮ ಮದ್ಯದ ಹಿಂದೆ ನನ್ನ ತೇಜೋವಧೆ ಮಾಡೋದಕ್ಕೆ ಕಾಣದ ಕೈಗಳು ಈ ರೀತಿ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ಕೊನೆಗೆ ರಾಜಕೀಯವೇ ಬೇರೆ, ವ್ಯಾಪಾರವೇ ಬೇರೆ ಎಂಬ ಸಮಜಾಯಿಸಿಯನ್ನು ಸಹ ನೀಡಿದ್ದಾರೆ.
Advertisement
ಶಾಸಕ ಇಕ್ಬಾಲ್ ಅನ್ಸಾರಿ ಅವರಿ ಗಂಗಾವತಿ ತಾಲೂಕಿನಲ್ಲಿ ಬರೋಬ್ಬರಿ 24 ಬಾರ್ ಗಳನ್ನು ಹೊಂದಿದ್ದಾರೆ. ಇದರಲ್ಲಿ 22 ಬಾರ್ ಗಳು ಶಾಸಕ ಅನ್ಸಾರಿ ಹಾಗೂ ಪತ್ನಿ ತಬಸುಮ್ ಅನ್ಸಾರಿ ಅವರ ಹೆಸರಲ್ಲಿದೆ. ಹೀಗಾಗಿಯೇ ಇಲ್ಲಿ ಯಾವುದೇ ಬಾರ್‍ಗಳಿಗೆ ಹೋದರೂ ಎಂಆರ್‍ಪಿ ದರಕ್ಕಿಂತ 40 ರಿಂದ 50 ರೂ. ಹೆಚ್ಚಿನ ಹಣ ಕೊಡಲೇಬೇಕು. ಇನ್ನೂ ಇವರ ಬಾರ್ ಗಳಲ್ಲಿ ಸರ್ಕಾರದ ನಿಯಮದಂತೆ ಯಾವುದೇ ದರಪಟ್ಟಿ ಅಥವಾ ಎಂಆಪಿ ರೇಟ್ ಲಿಸ್ಟ್ ಕೂಡ ಹಾಕಿಲ್ಲ. ಈಗ ಇವರ ಲಿಕ್ಕರ್ ಲಾಬಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸೈಯದ್ ಅಲಿ ಎಂಬುವರು ಬೆಂಗಳೂರಿನ ಅಬಕಾರಿ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಕೊಪ್ಪಳ: ಹನಿ ನೀರಿಗೂ ತತ್ವಾರ, ಆದ್ರೆ ಇಲ್ಲಿ ಪೆಟ್ಟಿ ಅಂಗಡಿಯಲ್ಲೂ ಸಿಗುತ್ತೆ ಮದ್ಯ
ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿದ ಬಳಿಕ ಅಬಕಾರಿ ಇಲಾಖೆ ಅಧಿಕಾರಿಗಳು 20ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಶಾಸಕರ ಅಕ್ರಮದ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಒತ್ತಡಕ್ಕೆ ಮಣಿಯದೆ ದಾಳಿ ಮಾಡಿ ಪ್ರಕರಣ ದಾಖಲಿಸಬೇಕು. ಕೂಡಲೇ ಶಾಸಕರ ಅಕ್ರಮದ ಮದ್ಯದ ಅಂಗಡಿಗಳನ್ನು ಬಂದ್ ಮಾಡಬೇಕು ಅಂತ ವಿವಿಧ ಕನ್ನಡಪರ ಸಂಘಟನೆಗಳು ಒತ್ತಾಯ ಮಾಡಿವೆ.