ಬೀದರ್: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ (CET Exam) ಅವಕಾಶ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ವಂಚಿತನಾದ ವಿದ್ಯಾರ್ಥಿಗೆ ಉಚಿತ ಎಂಜಿನಿಯರಿಂಗ್ ಸೀಟ್ (Engineering Seat) ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಭರವಸೆ ನೀಡಿದ್ದಾರೆ.
ಏ,17ರಂದು ಜಿಲ್ಲೆಯ ಸುಚ್ಚಿವೃತ್ ಎಂಬ ವಿದ್ಯಾರ್ಥಿ ಸಿಇಟಿ ಪರೀಕ್ಷೆ ಬರೆಯಲು dಹೋಗಿದ್ದಾಗ ಜನಿವಾರ ತೆಗೆಯದಿದ್ದರೆ ಪರೀಕ್ಷೆ ಅವಕಾಶವಿಲ್ಲ ಎಂದು ಒರಟಾಗಿ ನಡೆದುಕೊಂಡಿದ್ದ ಘಟನೆ ನಡೆದಿತ್ತು. ಈ ಕುರಿತು `ಪಬ್ಲಿಕ್ ಟಿವಿ’ (PUBLiC TV) ನಿರಂತರವಾಗಿ ಸುದ್ದಿಯನ್ನು ಬಿತ್ತರಿಸಿತ್ತು. ಈಗಾಗಲೇ ವಿದ್ಯಾರ್ಥಿಯ ಜೊತೆ ದುರ್ವರ್ತನೆ ತೋರಿದ ಪ್ರಾಂಶುಪಾಲ ಮತ್ತು ಸಿಬ್ಬಂದಿಯನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ.ಇದನ್ನೂ ಓದಿ: ಧಾರವಾಡದಲ್ಲಿಯೂ ಜನಿವಾರ ಜಟಾಪಟಿ – ಹುರಕಡ್ಲಿ ಕಾಲೇಜಿನಲ್ಲಿ ಜನಿವಾರ ಕತ್ತರಿಸಿ ಸಿಇಟಿ ಬರೆಸಿದ ಸಿಬ್ಬಂದಿ
ಸುದ್ದಿ ಬಿತ್ತರಿಸುವ ಮೂಲಕ ಸರ್ಕಾರ ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದು, ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ವಿದ್ಯಾರ್ಥಿಯ ನಿವಾಸಕ್ಕೆ ಭೇಟಿ ನೀಡಿ, ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಸೀಟು ಕೊಡಿಸುವುದಾಗಿ ಆಫರ್ ನೀಡಿದ್ದಾರೆ. ಭವಿಷ್ಯದ ಬಗ್ಗೆ ಮಾನಸಿಕವಾಗಿ ನೊಂದಿದ್ದ ವಿದ್ಯಾರ್ಥಿ ಸುಚ್ಚಿವೃತ್ ಹಾಗೂ ಆತನ ಪೋಷಕರ ಮುಖದಲ್ಲಿ ಮಂದಹಾಸ ಮೂಡಿದೆ. ನಮಗೆ ನ್ಯಾಯಸಿಗುವಂತೆ ಮಾಡಿದ `ಪಬ್ಲಿಕ್ ಟಿವಿ’ ಹಾಗೂ ಹೆಚ್.ಆರ್ ರಂಗನಾಥ ಸರ್ ಅವರಿಗೆ ವಿದ್ಯಾರ್ಥಿ ಸೇರಿ ಪೋಷಕರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಏನಿದು ಪ್ರಕರಣ?
ಏ,17ರಂದು ಬೀದರ್‌ನ ಸಾಯಿ ಸ್ಪೂರ್ತಿ ಕಾಲೇಜಿನಲ್ಲಿ ಸುಚ್ಚಿವೃತ್ ಎಂಬ ವಿದ್ಯಾರ್ಥಿ ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದಾಗ ಜನಿವಾರ ತೆಗೆಯದಿದ್ದರೆ ಪರೀಕ್ಷೆ ಅವಕಾಶವಿಲ್ಲ ಎಂದು ಒರಟಾಗಿ ನಡೆದುಕೊಂಡಿದ್ದ ಘಟನೆ ನಡೆದಿತ್ತು. ಸಿಬ್ಬಂದಿಗಳಿಗೆ ಇದೆಂಥಾ ನ್ಯಾಯ ಸರ್ ಎಂದಿದ್ದಕ್ಕೆ, ಒಳಗಡೆ ನೀನು ನೇಣು ಹಾಕಿಕೊಂಡರೆ ಏನು ಮಾಡೋದು? ಎಂದು ಉಡಾಫೆಯಾಗಿ ಮಾತನಾಡಿದ್ದರು. ಎರಡು ಎಕ್ಸಾಂಗೆ ಅವಕಾಶ ನೀಡಿ, ಗಣಿತ ಪರೀಕ್ಷೆಯಲ್ಲಿ ಮಾತ್ರ ಜನಿವಾರ ತೆಗೆದು ಒಳಗಡೆ ಬಾ ಎಂದಿದ್ದು ಅನ್ಯಾಯ ಎಂದು ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದ, ನಾನು ತೆಗೆಯೋದಕ್ಕೆ ಆಗಲ್ಲ ಅಂದಿದ್ದಕ್ಕೆ, ಹಾಗಾದ್ರೆ ನಾವು ಒಳಗೆ ಬಿಡಲ್ಲ ಎಂದಿದ್ದರು. ನೀನು ಒಳಗಡೆ ಹೋಗಿ ಸೂಸೈಡ್ ಮಾಡಿಕೊಂಡರೆ ಹೇಗೆ? ಎಂದು ವಾಪಸ್ ಕಳಿಸಿದ್ದರು.ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನಕ್ಕೆ ಟಿಟಿ ಡಿಕ್ಕಿ; ಹೈಮಾಸ್ಟ್ ದೀಪದ ಬೃಹತ್ ಕಂಬಕ್ಕೆ ಕಾರು ಡಿಕ್ಕಿ