ಬೆಂಗಳೂರು: ಟಾರ್ಗೆಟ್ ರೀಚ್ ಆಗುವ ಭರದಲ್ಲಿ ತರಾತುರಿಯಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದ ಬಿಬಿಎಂಪಿ, ಪಬ್ಲಿಕ್ ಟಿವಿ (PUBLiC TV) ವರದಿ ಬಳಿಕ ಎಚ್ಚೆತ್ತುಕೊಂಡಿದೆ.
ಹೌದು. ಆಗಸ್ಟ್ 12ರಂದು ಜಾಲಹಳ್ಳಿ (Jalahalli) ರಸ್ತೆ ಗುಂಡಿ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿ ಪರಿಣಾಮ ಎಚ್ಚೆತ್ತ ಬಿಬಿಎಂಪಿ (BBMP) ಇದೀಗ ಗುಂಡಿ ಮುಚ್ಚುವ ಕೆಲಸ ಮಾಡಿಸಿದೆ. ಬಸವೇಶ್ವರ ನಗರದ (Basaveshwar Nagar) ವಾಟರ್ ಟ್ಯಾಂಕ್ ರಸ್ತೆಯಲ್ಲಿ ಬರೆ ಜೆಲ್ಲಿ ಕಲ್ಲು ಸುರಿದ ಬಿಬಿಎಂಪಿ ದುರಸ್ತಿ ಮಾಡಿತ್ತು. ಟಾರ್ಗೆಟ್ ರೀಚ್ ಆಗುವ ಬರದಲ್ಲಿ ತರಾತುರಿಯ ಕೆಲಸ ಮುಗಿಸಿತ್ತು. ಪ್ರಮುಖ ರಸ್ತೆ ದುರಸ್ತಿಗಾಗಿ 600 ಕೋಟಿಗೂ ಅಧಿಕ ಹಣವನ್ನು ಮೀಸಲಿಡಲಾಗುತ್ತು. ಆದರೆ ನೋಡಿದರೆ ಕೇವಲ ಜಲ್ಲಿ ಕಲ್ಲು ಹಾಗೂ ಸೀಮೆಂಟ್ ದುರಸ್ತಿ ಕೆಲಸ ಮಾಡಲಾಗಿತ್ತು.ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ಬಂಧನಕ್ಕೆ ಕೇಸರಿ ಕಲಿಗಳು ಕೆಂಡ – ಸರ್ಕಾರದ ವಿರುದ್ಧ ಅಶ್ವಥ್ ನಾರಾಯಣ್ ತೀವ್ರ ವಾಗ್ದಾಳಿ
ರಸ್ತೆಯ ಅರ್ಧಭಾಗ ಆವರಿಸಿರುವ ಗುಂಡಿಗೆ ಕೇವಲ ಜೆಲ್ಲಿಯನ್ನು ಸುರಿಯಲಾಗಿತ್ತು. ಇದರಿಂದ ಇನ್ನಷ್ಟು ಅಪಘಾತಗಳು ಹೆಚ್ಚಾಗುತ್ತವೆ ಎಂದು ವಾಹನ ಸವಾರರು ಕಿಡಿಕಾರಿದ್ದರು. ದಯವಿಟ್ಟು ಕೈ ಮುಗಿದು ಬೇಡಿಕೊಳ್ಳುತ್ತೇವೆ ರಸ್ತೆ ಗುಂಡಿ ಮುಚ್ಚಿ ಅಂತ ಸಾರ್ವಜನಿಕರು ಬೇಡಿಕೊಂಡಿದ್ದರು. ಈ ಕುರಿತಂತೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಯ ಪರಿಣಾಮ ಇದೀಗ ಗುಂಡಿ ಮುಚ್ಚುವ ಆರಂಭವಾಗಿದೆ. ಜೊತೆಗೆ ಬೆಂಗಳೂರು ಗುಂಡಿ ಮುಕ್ತ ಮಾಡಲು ಡಿಸಿಎಂ ಸೆ.15ರ ವರೆಗೆ ಕೊನೆಯ ದಿನ ಎಂದು ಕೊಟ್ಟಿರುವ ಡೆಡ್‌ಲೈನ್ ಹಿನ್ನೆಲೆ ಕೆಲಸ ಜೋರಾಗಿ ನಡೆಯುತ್ತಿದೆ.
ಇದೀಗ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದ್ದು, ಜಾಲಹಳ್ಳಿ ಮುಖ್ಯ ರಸ್ತೆ, ದಾಸರಹಳ್ಳಿ (Dasarhalli) ವಲಯ ರಸ್ತೆಯನ್ನು ಆಯುಕ್ತರ ನೇತೃತ್ವದಲ್ಲಿ ಮುಚ್ಚಲಾಗುತ್ತಿದೆ. ಪಬ್ಲಿಕ್ ಟಿವಿ ವರದಿ ನಂತರ ಅಯ್ಯಪ್ಪ ದೇವಾಲಯದ ಮುಂದೆ ಬಿಬಿಎಂಪಿ ಗುಂಡಿ ಮುಚ್ಚುತ್ತಿದೆ. ಇಂದು ಕಡೆ ದಿನವಾದ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಭಾನುವಾರದಂದು ರಸ್ತೆ ಗುಂಡಿ ಮುಚ್ಚುವುದರಲ್ಲಿ ತೊಡಗಿದ್ದಾರೆ.ಇದನ್ನೂ ಓದಿ: ದೇಶದ ಮೊದಲ ವಂದೇ ಮೆಟ್ರೋ, 6 ವಂದೇ ಭಾರತ್ ರೈಲು ಸೇವೆಗೆ ಮೋದಿ ಚಾಲನೆ – ಏನಿದರ ವಿಶೇಷ!