ಬೆಂಗಳೂರು: 800 ಮರಗಳನ್ನು ಕಡಿಯುವುದನ್ನು ನಿಲ್ಲಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ರೆಸಾರ್ಟ್ ನಿರ್ಮಾಣ ಮಾಡಲು ಕೊಡಗಿನಲ್ಲಿ ಬರೋಬ್ಬರಿ 800 ಮರಗಳನ್ನು ಕಡಿಯುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಇಂದು ಬೆಳಗ್ಗೆಯಿಂದ ನಿರಂತರ ವರದಿ ಪ್ರಸಾರ ಮಾಡಿತ್ತು. ಈ ವರದಿ ನೋಡಿದ ಸಿಎಂ ಕುಮಾರಸ್ವಾಮಿ ಅವರು ಕೂಡಲೇ ಮರ ಕಡಿಯುವುದನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ.

https://twitter.com/CMofKarnataka/status/1136888802247565312
ಆಂಧ್ರ ಮೂಲದ ಉದ್ಯಮಿಯೊಬ್ಬರಿಗೆ ರೆಸಾರ್ಟ್ ನಿರ್ಮಾಣ ಮಾಡಲು ಬರೋಬ್ಬರಿ 800 ಮರಗಳನ್ನು ಕಡಿಯುವುದಕ್ಕೆ ಸ್ವತಃ ಅರಣ್ಯ ಇಲಾಖೆ ಒಪ್ಪಿಗೆ ನೀಡಿತ್ತು. ಮಡಿಕೇರಿ ತಾಲೂಕಿನ ಕೆ ನಿಡುಗಣೆಯಲ್ಲಿ ಆಂಧ್ರ ಮೂಲದ ರೆಡ್ಡಿ ಎಂಬವರು 68 ಏಕರೆ ಜಾಗ ಖರೀದಿಸಿದ್ದಾರೆ.
ಬೃಹತ್ ಮರ, ಬೆಟ್ಟ ಗುಡ್ಡಗಳಿಂದ ಈ ಜಾಗದಲ್ಲಿ 30 ಎಕರೆಯನ್ನು ಅಭಿವೃದ್ಧಿಪಡಿಸಿ ಹೌಸಿಂಗ್ ಬೊರ್ಡ್ ಗೆ ಕೊಡುತ್ತೇವೆ. ಆ 30 ಎಕರೆಯಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೊಡಿ ಎಂದು ಜಾಗದ ಮಾಲೀಕ ಅನುಮತಿ ಕೇಳಿದ್ದರು. ಈ ಪ್ರಸ್ತಾಪಕ್ಕೆ ಅನುಮತಿ ನೀಡಿದ ಕೊಗು ಜಿಲ್ಲಾಡಳಿತ ಕನ್ವರ್ಷನ್‍ಗೆ ಅವಕಾಶ ಕೊಟ್ಟಿತ್ತು.

