ಮಂಡ್ಯ: ಮಂಡ್ಯದ (Mandya) ಚಿಕ್ಕಮ್ಮ ದೇವಸ್ಥಾನದ (Chikkamma Temple) ಪಹಣಿಯಲ್ಲಿ ಉಲ್ಲೇಖವಾಗಿದ್ದ ವಕ್ಫ್ ಆಸ್ತಿ ರದ್ದಾಗಿದೆ. ಪಬ್ಲಿಕ್ ಟಿವಿಯಲ್ಲಿ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಜಿಲ್ಲಾಡಳಿತ ರದ್ದುಗೊಳಿಸಿದೆ.ಇದನ್ನೂ ಓದಿ: ಲಾರಿ ಚಾಲಕನ ಅವಾಂತರ ಹೆದ್ದಾರಿಯಲ್ಲಿ ಸರಣಿ ಅಪಘಾತ – ಓರ್ವ ಸಾವು
Advertisement
ರಾಜ್ಯದಲ್ಲಿ ವಕ್ಫ್ ಕಾವು ಹೆಚ್ಚಾಗುತ್ತಿರುವ ಸಮಯದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಚಿಕ್ಕಮ್ಮ ದೇವಸ್ಥಾನವನ್ನು ವಕ್ಫ್ ಆಸ್ತಿ ಎಂದು ಮಾಡಲಾಗಿತ್ತು.
Advertisement
ಗ್ರಾಮದ ಸರ್ವೇ ನಂ 74ರಲ್ಲಿದ್ದ ದೇವಸ್ಥಾನದ 6 ಗುಂಟೆ ಜಾಗವನ್ನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಕುರಿತು ನ.1 ರಂದು ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಪ್ರಸಾರದ ಬೆನ್ನಲ್ಲೇ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ರದ್ದಾಗಿದೆ. ಮಂಡ್ಯ ಜಿಲ್ಲಾಡಳಿತ ರದ್ದುಗೊಳಿಸಿದ್ದು, ಇದೀಗ ಆರ್ಟಿಸಿಯಲ್ಲಿ ಬಂಜರು ಎಂದು ಉಲ್ಲೇಖಿಸಲಾಗಿದೆ.ಇದನ್ನೂ ಓದಿ: