ಬೆಂಗಳೂರು: ದಸರಾ ಹಬ್ಬಕ್ಕೆ ಟಿಕೆಟ್ ಬರೆ ಹಾಕುತ್ತಿದ್ದ ಖಾಸಗಿ ಬಸ್ (Private Bus) ಮಾಲೀಕರ ದಂಧೆಗೆ ಸಾರಿಗೆ ಇಲಾಖೆ ಬ್ರೇಕ್ ಹಾಕಿದೆ. ಪಬ್ಲಿಕ್ ಟಿವಿಯು ತನ್ನ ರಹಸ್ಯ ಕಾರ್ಯಾಚರಣೆಯಲ್ಲಿ ಖಾಸಗಿ ಬಸ್‍ಗಳ ಹಗಲು ದರೋಡೆಯ ಕರ್ಮಕಾಂಡದ ಸುದ್ದಿ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿಯ ಸುದ್ದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಸಾರಿಗೆ ಇಲಾಖೆ (Transport Department) ಟಿಕೆಟ್ ದಂಧೆಕೋರರಿಗೆ ಬಿಸಿ ಮುಟ್ಟಿಸಿದೆ.
ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಗೆ ತೊಂದರೆ ಕೊಡದೇ, ಯಾವ ಯಾವ ರೂಟ್‍ಗಳಿಗೆ ಎಷ್ಟು ದರ ನಿಗಧಿ ಪಡಿಸಿದೆಯೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಹೆಚ್ಚಿನ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ. 7/7#ಜನಸ್ನೇಹಿ_ಸಾರಿಗೆ_ನನ್ನಧ್ಯೇಯ
— B Sriramulu (@sriramulubjp) September 30, 2022

ಪ್ರಯಾಣಿಕರ ರಕ್ಷಣೆ ಸಾರಿಗೆ
ಇಲಾಖೆಯ ಮೊದಲ ಆದ್ಯತೆ. ಕಿರಿಕಿರಿ ಉಂಟು ಮಾಡುವುದು, ಇಲ್ಲವೇ ತೊಂದರೆ ಕೊಟ್ಟು ಹೆಚ್ಚಿನ ದರ ವಸೂಲಿ ಮಾಡಿದರೆ ಸಹಿಸುವುದಿಲ್ಲ. ಹಾಗೊಂದು ವೇಳೆ ನನ್ನ ಗಮನಕ್ಕೆ ಬಂದರೆ ಅಂತಹ ಬಸ್ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. 6/7
— B Sriramulu (@sriramulubjp) September 30, 2022
ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರ ಆಗ್ತಿದ್ದ ಹಾಗೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಇಲಾಖೆಯ ಸಚಿವ ಶ್ರೀರಾಮುಲು (Sriramulu) ಫೀಲ್ಡಿಗಿಳಿಸಿದ್ದಾರೆ. ಹತ್ತು ವಿಶೇಷ ತಂಡಗಳನ್ನು ರಚಿಸಿ ಖಾಸಗಿ ಬಸ್ ಮಾಲೀಕರ ಟಿಕೆಟ್ ದಂಧೆಗೆ ಬ್ರೇಕ್ ಹಾಕಿದ್ದಾರೆ. ಅಷ್ಟೇ ಅಲ್ಲ, ಬಸ್ ಮಾಲೀಕರು ನಿಗದಿಯಾದಷ್ಟೇ ದರ ಪಡೆಯಬೇಕು. ದುಪ್ಪಟ್ಟು ಹಣಕ್ಕೆ ಟಿಕೆಟ್ ಮಾರಿ ಪ್ರಯಾಣಿಕರ ಸುಲಿಗೆ ಮಾಡಿದ್ರೆ ಪರ್ಮಿಟ್ ರದ್ದು ಮಾಡುವುದರ ಜೊತೆಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮೂಲಕ ಸಾರಿಗೆ ಸಚಿವ ಶ್ರೀರಾಮುಲು ವಾರ್ನಿಂಗ್ ನೀಡಿದ್ದಾರೆ.
ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಎಷ್ಟು ಸಾಧ್ಯವೋ ಅಷ್ಟು ಬೇಗ ನಿವೇಶ ಮಂಜೂರು ಮಾಡಿಕೊಡುವ ಭರವಸೆ ನೀಡಲಾಯಿತು. ಹಮಾಲಿಗಳು ಪರಿಶ್ರಮಿಗಳಾಗಿದ್ದು, ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿರುವ ಅವರಿಗೆ ನಗರದ ಪ್ರಮುಖ ಸ್ಥಳದಲ್ಲಿ ನಿವೇಶನ ನೀಡಬೇಕೆಂಬ ಇಚ್ಚೆಯು ಇದೆ. 2/3
— B Sriramulu (@sriramulubjp) September 30, 2022
ಸಾರಿಗೆ ಅಧಿಕಾರಿಗಳ ವಿಶೇಷ ತಂಡ ರಾಜ್ಯಾದ್ಯಂತ ತಪಾಸಣೆ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣ, ಮೆಜೆಸ್ಟಿಕ್ ಮತ್ತು ಸುತ್ತಲಿನ ಪ್ರದೇಶ, ಶಾಂತಿನಗರ, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ತಂಡ ಕಾರ್ಯಾಚರಣೆ ನಡೆಸಲಿವೆ. ಅಷ್ಟೇ ಅಲ್ಲ, ಹೆಚ್ಚು ಟಿಕೆಟ್ ದರ ಕೇಳುವ ಬಸ್ ಗಳ ವಿರುದ್ಧ ದೂರು ಕೊಡಲು ಪ್ರಯಾಣಿಕರಿಗಾಗಿ ಸಾರಿಗೆ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದ್ದು, 94498 63429 /94498 63426 ನಂಬರ್‍ಗಳನ್ನು ಸಂಪರ್ಕಿಸಬಹುದು.

