– ಚಳಿಯಲ್ಲಿ ಹೊದಿಕೆ ಇಲ್ಲದೇ ಮಲಗುತ್ತಿದ್ದ ಅರಸು ಹಾಸ್ಟೆಲ್ ವಿದ್ಯಾರ್ಥಿನಿಯರು
– ಬೆಂಗಳೂರಿನ ಪ್ರಣವ್ ಫೌಂಡೇಶನ್‌ನಿಂದ ಸಹಾಯಹಸ್ತ
ಮಡಿಕೇರಿ: ಚುಮು ಚುಮು ಚಳಿಯಲ್ಲಿ ಮಲಗಲು ಹೊದಿಕೆ ಇಲ್ಲದೇ ಚಾಪೆ ಮೇಲೆ ಮಲಗಿಕೊಂಡು ತಮ್ಮ ವಿದ್ಯಾಭ್ಯಾಸ ಮಾಡುತ್ತಿದ್ದ ಮಡಿಕೇರಿ (Madikeri) ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರಣವ್ ಫೌಂಡೇಶನ್ (Pranav Foundation) 100 ಹೊದಿಕೆ ನೀಡಿ ಮಾನವೀಯತೆ ಪ್ರದರ್ಶಿಸಿದೆ.
Advertisement
ಮಂಜಿನ ನಗರಿ ಮಡಿಕೇರಿಯಲ್ಲಿ ಕಳೆದ ಒಂದು ವಾರದಿಂದ ಚಳಿಯ ವಾತಾವರಣವೇ ಹೆಚ್ಚಾಗಿದೆ. ಈ ನಡುವೆ ಮಡಿಕೇರಿ ನಗರದ ದಾಸವಾಳ ರಸ್ತೆಯಲ್ಲಿ ಇರುವ ದಿ.ದೇವರಾಜ ಅರಸು ವಿದ್ಯಾರ್ಥಿ ನಿಲಯ ಸುಮಾರು 70ಕ್ಕೂ ಅಧಿಕ ವಿದ್ಯಾರ್ಥಿನಿಯರು ಮಲಗಲು ಬೇಡ್ ಕಾಟ್, ಹೊದಿಕೆ ಇಲ್ಲದೇ ತಮ್ಮ ಮನೆಯಲ್ಲಿ ಇರುವಂತಹ ಹೊದಿಕೆ ಚಾಪೆಗಳನ್ನು ತಂದು ಮಲಗುತ್ತಿದ್ದರು.
Advertisement
Advertisement
ಇದನ್ನು ಮನಗಂಡ ನಿಮ್ಮ ಪಬ್ಲಿಕ್ ಟಿವಿ (PUBLiC TV) ನೇರವಾಗಿ ಹಾಸ್ಟೆಲ್ ಕಟ್ಟಡಕ್ಕೆ ತೆರಳಿ ಮಕ್ಕಳ ಸಮಸ್ಯೆಯನ್ನು ಅಲಿಸಿ ರಿಯಾಲಿಟಿ ಚಕ್ ಮಾಡುವ ಮೂಲಕ ರಾಜ್ಯಾದ್ಯಂತ ಮಕ್ಕಳ ಪರಿಸ್ಥಿತಿ ಬಗ್ಗೆ ವರದಿ ಪ್ರಸಾರ ಮಾಡಿತ್ತು. ನಂತರ ಇಲಾಖೆಯ ಅಧಿಕಾರಿಗಳು ಹಾಸ್ಟೆಲ್ ಭೇಟಿ ನೀಡಿ ಹಂತ ಹಂತವಾಗಿ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಪಬ್ಲಿಕ್ ಟಿವಿಗೆ ಭರವಸೆ ನೀಡಿದ್ದರು. ಇದನ್ನೂ ಓದಿ: ಭೋವಿ ನಿಗಮ ಹಗರಣ: ಡಿವೈಎಸ್ಪಿ ಹೆಸರು ಬರೆದಿಟ್ಟರೂ ಬಂಧನ ಮಾಡಿಲ್ಲ ಯಾಕೆ – ಸರ್ಕಾರಕ್ಕೆ ಹೈಕೋರ್ಟ್ ಚಾಟಿ
Advertisement
ಈ ನಡುವೆ ಪಬ್ಲಿಕ್ ಟಿವಿಯ ಸುದ್ದಿ ನೋಡಿದ ಬೆಂಗಳೂರಿನ ಪ್ರಣವ್ ಫೌಂಡೇಶನ್ ಸದಸ್ಯರು ಮಡಿಕೇರಿ ಪ್ರತಿನಿಧಿಗೆ ಕರೆ ಮಾಡಿ ಅ ಮಕ್ಕಳಿಗೆ ನಾವು ಬೆಡ್‌ಶೀಟ್ ನೀಡುತ್ತೇವೆ ಎಂದು ತಿಳಿಸಿದರು. ಅದರಂತೆ ಬೆಂಗಳೂರಿನಿಂದ ನೇರವಾಗಿ ಮಡಿಕೇರಿಗೆ ಬಸ್ಸು ಮೂಲಕ ಸುಮಾರು 18 ಸಾವಿರ ಮೌಲ್ಯದ 100 ಬೆಡ್‌ಶೀಟ್‌ಗಳನ್ನು ಕಳುಹಿಸಿಕೊಟ್ಟಿದ್ದರು.
ಇಂದು ಸಂಜೆಯೇ (ನ.27) ತಾಲೂಕು ಅಧಿಕಾರಿ ಮೋಹನ್ ಹಾಗೂ ಹಾಸ್ಟೆಲ್ ವಾರ್ಡನ್ ಕರುಣಾಕ್ಷಿ ಅವರ ಸಮ್ಮುಖದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹೊದಿಕೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಾಸ್ಟೆಲ್ ವಿದ್ಯಾರ್ಥಿನಿಯರು ನಮ್ಮ ಸಮಸ್ಯೆಯನ್ನು ನೋಡಿ ಸುದ್ದಿ ಮಾಡಿದ ಪಬ್ಲಿಕ್ ಟಿವಿ ಮತ್ತು ಸಮಸ್ಯೆಗೆ ಸ್ಪಂದಿಸಿದ ಪ್ರಣವ್ ಫೌಂಡೇಶನ್‌ಗೆ ಧನ್ಯವಾದ ತಿಳಿಸಿದರು.